Trending

ಪಡಿಕ್ಕಲ್, ಕೊಹ್ಲಿ ಅಬ್ಬರ: ರಾಜಸ್ಥಾನ್ ತತ್ತರ

ಐಪಿಲ್ 13ನೇ ಸರಣಿಯ 15ನೇ ಪಂದ್ಯದಲ್ಲಿ‌ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭೂತಪೂರ್ವ ಜಯ ಸಾಧಿಸಿತು.

ದುಬೈನ ಅಬು ದಾಬಿಯ ಶೇಕ್ ಜಯೇದ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ‌ ರಾಯಲ್ಸ್ ತಂಡ ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ರಾಯಲ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಮೈದಾನಕ್ಕೆ ಎಂಟ್ರಿ ಕೊಟ್ಟ ನಾಯಕ ಎಸ್. ಸ್ಮಿತ್ ಹಾಗೂ ಜೆ. ಬಟ್ಲರ್ ಆಟ ಗಮನಾರ್ಹವಾಗಿರಲಿಲ್ಲ. ನಾಯಕ ಸ್ಮಿತ್ ಕೇವಲ 5 ರನ್‌ಗಳಿಗೆ ಪೆವಿಲಿಯನ್ ‌ಸೇರಿದರೆ 22 ರನ್‌ಗಳಿಗೆ ಬಟ್ಲರ್ ಮೈದಾನದಿಂದ ಹೊರನಡೆದರು. ಎಂ. ಲೊಮ್ರೋರ್ ಅವರು 47 (39) ರನ್‌ಗಳಿಸಿದರಾದರೂ ತಂಡಕ್ಕೆ ಅದು ಯಾವ ರೀತಿಯಲ್ಲೂ ಸಹಾಯಕವಾಗಲಿಲ್ಲ. ಅಲ್ಲದೇ ಬೆಂಗಳೂರು ತಂಡದ ಯುಜೇಂದ್ರ ಚೌಹಾಲ್‌ ಹಾಗೂ ಇಸುರು ಉದಾನ ಅವರ ಬೌಲಿಂಗ್ ಎಲ್ಲ ಬ್ಯಾಟ್ಸ್‌ಮನ್‌ಗಳನ್ನೂ ಕಟ್ಟಿಹಾಕಿತು. ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತು.

ರಾಯಲ್ ಚಾಲೆಂಜರ್ಸ್ ತಂಡದ ಪರ ಬ್ಯಾಟಿಂಗ್ ಪ್ರಾರಂಭ ಮಾಡಿದ ದೇವದತ್ ಪಡಿಕಲ್ ಅವರ ಆಟ ಆಕರ್ಷಕವಾಗಿತ್ತು. 45 ಎಸೆತಗಳಲ್ಲಿ 63 ರನ್ ಗಳಿಸಿ ಪ್ರತಿ ಬಾರಿಯಂತೆ ಈ ಬಾರಿಯೂ ತಂಡವನ್ನು ಉತ್ಸಾಹಯುತಗೊಳಿಸಿದರು. ಆದರೆ ಪಡಿಕ್ಕಲ್ ಅವರ ಜೊತೆಯಾಟಗಾರ ಎಂ. ಫಿಂಚ್ ಕೇವಲ 8 ರನ್‌ಗಳಿಗೆ ಔಟಾದರು. ನಂತರ ಮೈದಾನಕ್ಕಿಳಿದ ತಂಡದ ನಾಯಕ ರಾಯಲ್ಸ್‌ಗಳ ಬೆವರಿಳಿಸಿದರು. 53 ಎಸೆತಗಳಲ್ಲಿ 72 ರನ್‌ಗಳ ದೊಡ್ಡ ಮೊತ್ತವನ್ನೇ ತಂಡಕ್ಕೆ ನೀಡಿದರು. ನಿಗದಿತ ಓವರ್‌ಗಳಿಗಿಂತಲೂ ಮೊದಲೇ ಆಟವನ್ನು‌ ಮುಗಿಸಿದ ಚಾಲೆಂಜರ್ಸ್ 19.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 158 ಗಳಿಸಿ ವಿಜಯಮಾಲೆಯನ್ನು ತಮ್ಮದಾಗಿಸಿಕೊಂಡರು.

Team Newsnap
Leave a Comment
Share
Published by
Team Newsnap

Recent Posts

ದರ್ಶನ್ , ಪವಿತ್ರ ಜಾಮೀನು ಮುಂದೂಡಿಕೆ:ಮೂವರಿಗೆ ಜಾಮೀನು ಮಂಜೂರು

ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಮತ್ತು ಎ2 ಆರೋಪಿಯಾಗಿರುವ… Read More

September 23, 2024

ಸೆ. 24 ರಂದು ಯುವ ಸಂಭ್ರಮ ಉದ್ಘಾಟನಾ ಸಮಾರಂಭ

ಮೈಸೂರು: ಸೆ. 24 ರಂದು ಸಂಜೆ 6 ಗಂಟೆಗೆ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ದಸರಾ ಮಹೋತ್ಸವ -2024 ರ ಯುವ… Read More

September 23, 2024

ದಸರಾ ಚಲನಚಿತ್ರೋತ್ಸವ 2024- ಪೋಸ್ಟರ್ ಬಿಡುಗಡೆ

ಮೈಸೂರು : ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ 2024 ರ ಹಿನ್ನೆಲೆಯಲ್ಲಿ ದಸರಾ ಚಲನಚಿತ್ರೋತ್ಸವ ಪೋಸ್ಟರ್ ಗಳನ್ನು ಜಿಲ್ಲಾ… Read More

September 23, 2024

ಮೈಸೂರಿನಲ್ಲಿ ಉಚಿತ ಆಟೋ ರಿಕ್ಷಾ ತರಬೇತಿ

ಸ್ವಾವಲಂಬಿ ಸ್ತ್ರೀ ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ಅರ್ಹ ಮಹಿಳೆಯರು ಉಚಿತವಾಗಿ ಆಟೋ ರಿಕ್ಷಾ ಚಾಲನಾ ತರಬೇತಿಯನ್ನು ಪಡೆಯಲು ಮತ್ತು ಆದಾಯ… Read More

September 23, 2024

ಶಾಲೆಗಳಿಗೆ 17 ದಿನಗಳ ದಸರಾ ರಜೆ ಘೋಷಣೆ

ಬೆಂಗಳೂರು : ಅಕ್ಟೋಬರ್ 3 ರಿಂದ 20 ತನಕ ಶಿಕ್ಷಣ ಇಲಾಖೆ ಶಾಲಾ ಮಕ್ಕಳಿಗೆ ದಸರಾ ರಜೆ ಘೋಷಿಸಿದ್ದು ,ರಾಜ್ಯದ… Read More

September 23, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಸೆಪ್ಟೆಂಬರ್ 23 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 69,600 ರೂಪಾಯಿ ದಾಖಲಾಗಿದೆ. 24… Read More

September 23, 2024