ಐಪಿಎಲ್ 20-20ಯ 32ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ,ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಅದ್ಭುತ 7 ವಿಕೆಟ್‌ಗಳ ವಿಜಯ ಸಾಧಿಸಿತು.
ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಆರ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ಆರ್‌ಆರ್ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಆರ್. ಉತ್ತಪ್ಪ ಹಾಗೂ ಬಿ. ಸ್ಟ್ರೋಕ್ಸ್ ಆಟವನ್ನು ಸಾಧಾರಣವಾಗಿಯೇ ಆರಂಭಿಸಿದರು. ಉತ್ತಪ್ಪ 22 ಎಸೆತಗಳಿಗೆ 41 ರನ್ ಗಳಿಕೆ ಮಾಡಿದರೆ, ಸ್ಟ್ರೋಕ್ಸ್ 19 ಎಸೆತಗಳಲ್ಲಿ 15 ರನ್ ಗಳಿಕೆ ಮಾಡಿದರು. ತಂಡವನ್ನು ಗೆಲ್ಲಿಸಲು ಪ್ರಯತ್ನ ಪಟ್ಟ ಎಸ್. ಸ್ಮಿತ್ ಅವರು 36 ಎಸೆತಗಳಿಗೆ 57 ರನ್ ಗಳಿಕೆಮಾಡಿದರೂ ತಂಡ ಸೋಲುವಂತಾಯ್ತು. ಆರ್‌ಆರ್ ತಂಡವು 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 167 ರನ್ ಮಾತ್ರ ಗಳಿಸಿತು.
ಆರ್‌ಆರ್ ತಂಡದ ಗುರಿಯನ್ನು ಆರ್‌ಸಿಬಿ ಸುಲಲಿತವಾಗಿಯೇ ಸಾಧಿಸಿತು. ಆರ್‌ಸಿಬಿ ತಂಡದಿಂದ ದೇವದತ್ ಪಡಿಕ್ಕಲ್ ಹಾಗೂ ಆರೋನಾ ಫಿಂಚ್ ಅವರು ಫೀಲ್ಡಿಗಿಳಿದರು. ಫಿಂಚ್ ಅವರು 14 ರನ್‌ಗಳಿಗೇ ಔಟಾದ್ದರಿಂದ ತಂಡದಲ್ಲಿ ಸ್ವಲ್ಪ ಮಟ್ಟಿನ ಚಿಂತೆಯುಂಟಾಯಿತು. ಪಡಿಕ್ಕಲ್ 37 ಎಸೆತಗಳಿಗೆ 35 ರನ್ ಗಳಿಕೆಮಾಡಿ ಪೆವಿಲಿಯನ್ ಸೇರಿದರು.ಇವರ ನಂತರ ಬಂದ ವಿರಾಟ್ ಕೊಹ್ಲಿ ಹಾಗೂ ಎಬಿ ಡೀ ವಿಲಿಯರ್ಸ್ ಆಕರ್ಷಕ ಆಟವನ್ನಾಡಿದರು. ಕೊಹ್ಲಿ 32 ಎಸೆತಗಳಿಗೆ 43 ರನ್ ಗಳಿಸಿದರೆ, ಎಬಿಡೀ 22 ಎಸೆತಗಳಿಗೆ 55 ರನ್‌ಗಳ ಮಿಂಚಿನಾಟ ಆಡಿದರು. ಆರ್‌ಸಿಬಿ ತಂಡ 19.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿ ಪಂದ್ಯದಲ್ಲಿ ವಿಜಯಿಯಾಯಿತು.
More Stories
ಉಪಚುನಾವಣಾ ಫಲಿತಾಂಶಕ್ಕೂ ಮುನ್ನ ಸಿಪಿ ಯೋಗೇಶ್ವರ್ ವಿರುದ್ಧ ಮಗನ ದೂರು: ನಕಲಿ ಸಹಿ ಆರೋಪ
ಸಚಿವ ಸ್ಥಾನ ನನ್ನ ಹಕ್ಕು, ಬೇಡಿಕೆಯಲ್ಲ: ನಿಖರ ಹೇಳಿಕೆ ನೀಡಿದ ‘ಕೈ’ ಶಾಸಕ ನರೇಂದ್ರ ಸ್ವಾಮಿ
ರಾಜ್ಯಗಳಾದ್ಯಂತ `ED’ ದಾಳಿ: ಲಾಟರಿ ಕಿಂಗ್ ಮಾರ್ಟಿನ್ನ 12.41 ಕೋಟಿ ನಗದು ಜಪ್ತಿ