ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 2022 ಎಲಿಮಿನೇಟರ್ ಪಂದ್ಯದಲ್ಲಿ RCB ತಂಡವು ಲಖನೌ ತಂಡದ ವಿರುದ್ಧ ಭರ್ಜರಿ ಗೆಲವು ಸಾಧಿಸಿತು.
ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 2022 ಎಲಿಮಿನೇಟರ್ ಪಂದ್ಯದಲ್ಲಿ RCB ತಂಡವು ಲಖನೌ ತಂಡದ ವಿರುದ್ಧ ಭರ್ಜರಿ ಗೆಲವು ಸಾಧಿಸಿತು.
ಗುಜರಾತ್ ಟೈಟನ್ ಸೆಣಸಲು RCB ತಂಡವು ರಾಜಸ್ಥಾನ ರಾಯಲ್ಸ್ ಅನ್ನು ಮಣಿಸಲೇಬೇಕು LSG ತಂಡವು ಟಾಸದ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. RCB ತಂಡದಲ್ಲಿ ರಜತ್ ಫಟಧರ್ ಚೊಚ್ಚಲು ಶತಕ ಬಾರಿಸಿದರು. ಡಿ ಕೆ ಕಾರ್ತಿಕ್ ಅದ್ಭುತ ಪ್ರದರ್ಶನ ನೀಡಿ 208 ರನ್ ಬೃಹತ್ ಮೊತ್ತ ಸೇರಿಸಿದರು.
LSG ತಂಡ ಬ್ಯಾಟಿಂಗ್ ಆರಂಭಿಸಿದ ಮೊದಲ ಓವರ್ ನಲ್ಲೇ ಒಂದು ವಿಕೆಟ್ ಪತನವಾಯಿತು. ನಾಯಕ ಕೆ ಎಲ್ ರಾಹುಲ್( 79 ) ಜವಾಬ್ದಾರಿಯುತ ಆಟ ಆಡಿದರೂ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ
ಇದನ್ನು ಓದಿ – ಉದ್ಯಮಿ ಆದಿಕೇಶವಲು ಪುತ್ರ ಶ್ರೀನಿವಾಸ್‍ಗೆ ಬಂಧನ: ಜೈಲು
ಇದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ 208 ರನ್ ಬಿಗ್ ಟಾರ್ಗೆಟ್ ನೀಡಿತು.
ರಜತ್ ನ ಚೊಚ್ಚಲ ಸೆಂಚುರಿ
ಫಾಫ್ ಔಟಾದ ಬಳಿಕ ಕ್ರೀಸ್ಗೆ ಬಂದ ರಜತ್ ಪಾಟೀದಾರ್ ಕೊನೆವರೆಗೂ ಲಖನೌ ಸೂಪರ್ ಜೈಂಟ್ಸ್ ತಂಡದ ಬೌಲರ್ಸ್ ಬೆವರಿಳಿಸಿದ್ರು. ಕೇವಲ 54 ಬಾಲ್ನಲ್ಲಿ 12 ಫೋರ್, 7 ಸಿಕ್ಸರ್ ಸಮೇತ ಅಜೇಯ 112 ರನ್ ಗಳಿಸಿದ್ರು. ಅದರಲ್ಲೂ ಪಾಟೀದಾರ್ ಕೃನಾಲ್ ಪಾಂಡ್ಯ 6ನೇ ಓವರ್ನಲ್ಲಿ 4 4 6 4 ಮತ್ತು 16ನೇ ಓವರ್ನಲ್ಲಿ 6 4 6 4 6 ಬೌಂಡರಿಗಳು ಸಿಡಿಸಿದ್ದು ಮಾತ್ರ ರೋಚಕವಾಗಿತ್ತು.
- ರಜತ್ ಪಾಟೀದಾರ್ 112 (54)
- ದಿನೇಶ್ ಕಾರ್ತಿಕ್ 37 (23)
- ವಿರಾಟ್ ಕೊಹ್ಲಿ 25 (24)
More Stories
ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ