December 22, 2024

Newsnap Kannada

The World at your finger tips!

WhatsApp Image 2022 04 04 at 4.41.05 PM

RCB ತಂಡ ಸೇರಿದ ಗ್ಲೆನ್​ ಮ್ಯಾಕ್ಸ್​ವೆಲ್​​ : ನಾಳೆ ಆರ್​ಸಿಬಿಗೆ ಬಂತು ಹಾರ್ಸ್​​ಪವರ್

Spread the love

ಗ್ಲೆನ್​ ಮ್ಯಾಕ್ಸ್​ವೆಲ್​​ ನಾಳೆ ಆರ್​ಸಿಬಿಗೆ ತಂಡಕ್ಕೆ ಸೇರಲಿದ್ದಾರೆ. ಇದರೊಂದಿಗೆ RCB ಗೆ ಅಶ್ವ ಶಕ್ತಿ (ಹಾರ್ಸ್​​ಪವರ್) ಬರಲಿದೆ.

ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡ ತನ್ನ ಮೂರನೇ ಇಂಡಿಯನ್​ ಪ್ರೀಮಿಯರ್​ ಲೀಗ್​ ಪಂದ್ಯವನ್ನು ನಾಳೆ ರಾಜಸ್ಥಾನ ರಾಯಲ್ಸ್​ ತಂಡದ ವಿರುದ್ಧ ಸೆಣಸಲಿದೆ.

ನಾಳೆ ನಡೆಯುವ ಪಂದ್ಯಕ್ಕೆ ಈಗಾಗಲೇ ಆರ್​ಸಿಬಿ ಭರ್ಜರಿ ಪ್ಲಾನ್​ ಮಾಡಿಕೊಂಡಿದೆ.

ಮೊದಲ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ತಂಡದ ವಿರುದ್ಧ ಉತ್ತಮ ಬ್ಯಾಟಿಂಗ್​ ಪ್ರದರ್ಶನ ಮಾಡಿದರ ಬೌಲರ್ಸ್​ ಮಾಡಿದ ಎಡವಟ್ಟಿನಿಂದಾಗಿ ಸೋಲಬೇಕಾಯ್ತು.

ಎರಡನೇ ಪಂದ್ಯದಲ್ಲಿ ಕೆಕೆಆರ್​​ ವಿರುದ್ಧ ಬ್ಯಾಟರ್ಸ್​ ಉತ್ತಮ ಪ್ರದರ್ಶನ ನೀಡದೆ ಹೋದರೂ ಬೌಲರ್ಸ್​​ ಅದ್ಭುತ ಬೌಲಿಂಗ್​​ನಿಂದ ಗೆಲುವು ಕಂಡಿದ್ದರು.

ಈ ಎರಡು ಮ್ಯಾಚ್​​ಗೂ ಆರ್​ಸಿಬಿ ದೈತ್ಯ ಬ್ಯಾಟ್ಸಮನ್​​​​ ಮ್ಯಾಕ್ಸ್ ವೆಲ್ ಲಭ್ಯವಿರಲಿಲ್ಲ.

ಮದುವೆ ನಂತರ ಗ್ಲೆನ್​ ಮ್ಯಾಕ್ಸ್​ವೆಲ್​​​​ ವಾಪಸ್ಸಾಗಿದ್ದಾರೆ. ಈಗಾಗಲೇ ಮುಂಬೈಗೆ ಬಂದಿಳಿದ್ದು ಕೋವಿಡ್​​ ಪ್ರೋಟೋಕಾಲ್​ ಪ್ರಕಾರ ಕ್ವಾರಂಟೈನ್​ ಆಗಿದ್ದಾರೆ. ನಾಳೆ ಪಂದ್ಯಕ್ಕೆ ಮ್ಯಾಕ್ಸಿ ಲಭ್ಯ ಇದ್ದಾರೆ ಎಂದು ಆರ್​ಸಿಬಿ ಮುಖ್ಯ ಕೋಚ್ ಹಸನ್ ​​ ಮಾಹಿತಿ ನೀಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!