ಐಪಿಎಲ್ 20-20ಯ 19 ನೇ ದಿನದ ಮ್ಯಾಚ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 59 ರನ್‌ಗಳ ತಂಡ ಅಮೋಘ ವಿಜಯ ಸಾಧಿಸಿದೆ. ಆರ್‌ಸಿಬಿ ಹೀನಾಯ ಸೋಲು ಅನುಭವಿಸಿತು.
ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಪಂದ್ಯವನ್ನು ಪ್ರಾರಂಭಿಸಿದ ಡೆಲ್ಲಿ ತಂಡದ ಆರಂಭಿಕ ಆಟಗಾರರಾದ ಪೃಥ್ವಿ ಶಾ ಮತ್ತು ಶಿಖರ್ ಧವನ್ ಉತ್ತಮ ಆರಂಭವನ್ನು ನೀಡಿದರು. ಶಾ 23 ಎಸೆತಗಳಿಗೆ 42 ರನ್ ಗಳಿಸಿದರೆ ಧವನ್ 28 ಎಸೆತಗಳಿಗೆ 32 ರನ್ ಗಳಿಸಿದರು. ಆದರೆ ತಂಡಕ್ಕೆ ನಿಜವಾದ ಬೆನ್ನಲುಬಾದದ್ದು ಮಾರ್ಕಸ್ ಸ್ಟೊಯಿನಿಸ್. ಮಾರ್ಕಸ್ ಅವರು ಕೇವಲ 26 ಎಸೆತಗಳಲ್ಲಿ 53 ರನ್‌ಗಳ ಬೃಹತ್ ಮೊತ್ತವನ್ನು ತಂಡಕ್ಕೆ ನೀಡಿದರು. ತಂಡವು 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು.
196 ರನ್‌ಗಳ ಗುರಿಯನ್ನು ಆರ್‌ಸಿಬಿಗೆ ದೊಡ್ಡ ಕಷ್ಟವೇನೂ ಆಗಲಿಲ್ಲ. ಆದರೆ ಹಿಂದಿನ ಪಂದ್ಯಗಳಲ್ಲಿದ್ದ ಹುರುಪು ಇಂದಿನ ಪಂದ್ಯದಲ್ಲಿ ಇರಲಿಲ್ಲ. ಬಹು ನಿರೀಕ್ಷೀತ ಆಟಗಾರ ದೇವದತ್ ಪಡಿಕ್ಕಲ್ ಕೇವಲ 4 ರನ್‌ಗಳಿಗೆ ಪೆವಿಲಿಯನ್ ಸೇರಿದರು. ಪಡಿಕ್ಕಲ್ ನಂತರ ಆರೋನಾ ಫಿಂಚ್ ಸಹ 13 ರನ್ ಗಳಿಸಿ ಅಕ್ಷರ್ ಪಟೇಲ್ ಅವರ ಬೌಲಿಂಗ್‌ನಲ್ಲಿ ಕ್ಯಾಚ್ ನೀಡಿದರು. ತಂಡದ ನಾಯಕ ವಿರಾಟ್ ಕೊಹ್ಲಿ ಸಹ 43 ರನ್‌ಗಳಿಗೆ ಔಟಾದಾಗ ಎಲ್ಲರಿಗೂ ನಿರಾಸೆಯಾಯಿತು. ನಂತರದ ಯಾವ ಆಟಗಾರರೂ ಸರಿಯಾಗಿ ಆಟವನ್ನು ಆಡಲಿಲ್ಲ. ತಂಡ 20 ಓವರ್ ಗಳಲ್ಲಿ ತಂಡ 9 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತು.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ