ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸುತ್ತಿರುವ ಉದ್ಯಮಗಳು, ಕೈಗಾರಿಕೆಗಳು ಹಾಗೂ ಇನ್ನು ಇತರೆ ಆರ್ಥಿಕ ಚಟುವಟಿಕೆಗಳನ್ನು ನಡೆಸುವ ವ್ಯಾಪಾರಸ್ಥರಿಗೆ ಆರ್‌ಬಿಐ ಬಡ್ಡಿ ದರಗಳನ್ನು ಬದಲಾವಣೆ ಮಾಡುವುದಿಲ್ಲವೆಂದು ಘೋಷಿಸಿದೆ.
ಕೊರೋನಾ ಕಾರಣದಿಂದ ಕುಂಠಿತವಾಗಿರುವ ಆರ್ಥಿಕ ಚಟುವಟಿಕೆಗಳಿಗೆ ಪುನಃ ಶ್ಚೇಚೇತನ ನೀಡುವ ದೃಷ್ಠಿಯಿಂದ ಆರ್‌ಬಿಐ ಈ ನಿರ್ಧಾರ ಕೈಗೊಂಡಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದರು.
ಶುಕ್ರವಾರ ನಡೆಸಲಾದ ಆರ್‌ಬಿಐ ಹಣಕಾಸು ನೀತಿ ಸಮಿತಿಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ರೆಪೋ ದರವನ್ನು ಶೇಕಡ 4ಕ್ಕೇ ಉಳಿಸಲಾಗಿದೆ.
ಸಭೆಯಲ್ಲಿ ಬಡ್ಡಿದರ ಬದಲಾವಣೆಯನ್ನು ತಡೆ ಹಿಡಿದ ನಿರ್ಧಾರದ ಬಗ್ಗೆ ಮಾತನಾಡಿದ ಆರ್‌ಬಿಐ ಗವರ್ನರ್ ಶಶಿಕಾಂತ್ ದಾಸ್ ಅವರು, ‘ಈ ಬಾರಿ ಕೊರೋನಾ ಬಂದ ಕಾರಣದಿಂದ ಆರ್ಥಿಕ ಚಟುವಟಿಕೆಗಳು ತೊಂದರೆಯಲ್ಲಿವೆ. ಈ ಮೊದಲು ಪ್ರವಾಹ ಬಂದಾಗ ಆಹಾರದ ಬೆಲೆ ಹೆಚ್ಚಾಯಿತು. ಆದ್ದರಿಂದ ಆಹಾರದ ಬೆಲೆ ಕಡಿಮೆ ಮಾಡಲು ಬೇರೆ ವಲಯಗಳ ಮೇಲೆ ಅಧಿಕ ತೆರಿಗೆಗಳನ್ನು ಹೇರಬೇಕಾಯಿತು. ಅಧಿಕ ತೆರಿಗೆ ಹೇರುವಿಕೆಯು ಇತರೆ ಉದ್ಯಮಗಳಿಗೆ ಭಾರೀ ಹೊಡೆತವನ್ನು ನೀಡಿತು ಎಂದರು.
ಆರ್‌ಬಿಐ ಫೆಬ್ರುವರಿಯಿಂದಲೂ 115 ಬೇಸಿಸ್ ಪಾಯಿಂಟ್‌ಗಳ ಮೇಲೆಯೇ 10 ಲಕ್ಷ ಕೋಟಿಗಳಷ್ಟು ದ್ರವ್ಯ ರೂಪದ ಹಣವನ್ನು ಸಾಲಗಾರರಿಗೆ ಜಾಮೀನು ನೀಡಲು, ಸಾಲ ಪುನರ್ರಚನೆಗೋಸ್ಕರ ಬಿಡಲಾಗಿದೆ’ ಎಂದು ಹೇಳಿದರು.
More Stories
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ
2025ರಿಂದ ಕ್ಯಾನ್ಸರ್ ಲಸಿಕೆ ಉಚಿತ ವಿತರಣೆ: ಮಹತ್ವದ ವೈದ್ಯಕೀಯ ಸಾಧನೆ
ವಿರೋಧ ಲೆಕ್ಕಿಸದ ಮೋದಿ ಸರ್ಕಾರ