December 19, 2024

Newsnap Kannada

The World at your finger tips!

rbi Governor

ಸಾಲಗಾರರಿಗೆ ಸಿಹಿ ಸುದ್ದಿ: ಆರ್ ಬಿ ಐ ರೆಪೊ ದರ ಯಥಾಸ್ಥಿತಿ

Spread the love

ನವದೆಹಲಿ:ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ( RBI) ತನ್ನ ಪ್ರಮುಖ ರೆಪೊ ದರವನ್ನು ಶೇ 6.5 ಯಲ್ಲಿ ಯಥಾಸ್ಥಿತಿಯಲ್ಲಿಡಲು ನಿರ್ಧರಿಸಿದೆ.

ಆರ್ ಬಿ ಐ ಗವರ್ನರ್ ಶಕ್ತಿಕಾಂತ ದಾಸ್ ಈ ಕುರಿತು ಬುಧವಾರ ನಡೆದ ಸಭೆಯ ನಂತರ, ಆರ್ಬಿಐ ತನ್ನ ಪ್ರಮುಖ ಬಡ್ಡಿದರವನ್ನು ಬದಲಾಯಿಸದೆ ಹಾಗೆಯೇ ಮುಂದುವರಿಸಿದೆ. ವಹಿವಾಟುದಾರರು ಈ ನಿರ್ಧಾರವನ್ನು ವ್ಯಾಪಕವಾಗಿ ನಿರೀಕ್ಷಿಸಿದ್ದರು. ಜೊತೆಗೆ, ಆರ್ ಬಿ ಐ ತನ್ನ ನೀತಿ ನಿಲುವನ್ನು “ತಟಸ್ಥ” ಎಂದು ಪರಿಗಣಿಸಿದೆ.

ಆರ್ಥಿಕತೆಯ ಬೆಳವಣಿಗೆಯ ಮಂದಗತಿಯ ಆರಂಭಿಕ ಲಕ್ಷಣಗಳ ಕಾರಣದಿಂದ ದರ ಕಡಿತಕ್ಕೆ ಅವಕಾಶಗಳನ್ನು ತೆರೆಯಲಾಗಿದೆ.

6 ಸದಸ್ಯರ ಹಣಕಾಸು ನೀತಿ ಸಮಿತಿಯ (MPC) ಮೂರು ದಿನಗಳ ಸಭೆಯ ನಂತರ ಶಕ್ತಿಕಾಂತ ದಾಸ್ ಈ ನಿರ್ಧಾರ ಪ್ರಕಟಿಸಿದ್ದಾರೆ.ದಸರಾ 2024 : KSRTC ಯಿಂದ 2000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ವ್ಯವಸ್ಥೆ

ಹೊಸ ಬಾಹ್ಯ ಸದಸ್ಯರನ್ನು ಸರ್ಕಾರ ನೇಮಿಸಿದ ನಂತರ ನಡೆದ ಮೊದಲ MPC ಸಭೆಯು ಇದಾಗಿದೆ.

Copyright © All rights reserved Newsnap | Newsever by AF themes.
error: Content is protected !!