ಇಂದು ಸಂಜೆ ರಾವತ್ ಪಾರ್ಥಿವ ದೆಹಲಿಗೆ : ನರವಾಣಿ ಹೊಸ ಸಿಡಿಎಸ್ ? ತನಿಖೆ ಆರಂಭ

Team Newsnap
1 Min Read

ತಮಿಳುನಾಡಿನಲ್ಲಿ ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ದುರ್ಮರಣಕ್ಕೀಡಾಗಿದ ರಾವತ್ ಪಾರ್ಥಿವ ಶರೀರವನ್ನು ಇಂದು ಸಂಜೆ ವೇಳೆಗೆ ದೆಹಲಿಗೆ ರವಾನಿಸಲಾಗುತ್ತಿದೆ.

ಸೇನಾ ವಿಮಾನದಲ್ಲಿ ರಾವತ್, ಪತ್ನಿ ಮೃತದೇಹ ದೆಹಲಿಗೆ ರವಾನೆಯಾಗಲಿದೆ. ಶನಿವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 2ರವರೆಗೆ ದೆಹಲಿಯ ರಾವತ್ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಬಳಿಕ ಕಾಮ್‍ರಾಜ್ ಮಾರ್ಗದಿಂದ ಅಂತಿಮಯಾತ್ರೆ ನಡೆಯಲಿದೆ ದೆಹಲಿ ಕಂಟೋನ್‍ಮೆಂಟ್‍ನ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಸದ್ಯ ವೆಲ್ಲಿಂಗ್ಟನ್ ಸೇನಾ ಆಸ್ಪತ್ರೆಯಲ್ಲಿರುವ ಪಾರ್ಥಿವ ಶರೀರರವಿದೆ.

ಎಂ. ಎಂ. ನರವಾಣಿ ಹೊಸ ಸಿಡಿಎಸ್ ?

ಭೂಸೇನಾ ಮುಖ್ಯಸ್ಥ ಎಂ. ಎಂ. ನರವಾಣಿ ಅವರನ್ನು ಹೊಸ ಸಿಡಿಎಸ್ ಆಗಿ ನೇಮಕ ಮಾಡುವ ಸಾಧ್ಯತೆ ಇದೆ
ಕಳೆದ ಸಂಜೆ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಭದ್ರತಾ ನೇಮಕಾತಿ ಸಮಿತಿ ಸಭೆಯಲ್ಲಿ ಚಚಿ೯ಸಲಾಗಿದೆ. ಮುಂದಿನ ಏಪ್ರಿಲ್ ನಲ್ಲಿ ನರವಾಣಿ ನಿವೃತ್ತರಾಗಲಿದ್ದಾರೆ

ಏರ್ ಚೀಪ್ ಮಾಷ೯ಲ್
ವಿ ಆರ್ ಚೌಧರಿ ಹೆಲಿಕ್ಯಾಪ್ಟರ್ ಪತನ ಹಾಗೂ ದುರಂತಕ್ಕೆ ಕಾರಣವಾದ ಅಂಶಗಳನ್ನು ಪತ್ತೆ ಹಚ್ಚುವ ತನಿಖಾ ಸಮಿತಿಯ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ.

ವಿ ಆರ್ ಚೌದರಿ ಹಾಗೂ ವಿಧಿ ವಿಜ್ಞಾನ ತಂಡವು ಈಗಾಗಲೇ ದುರಂತ ಸ್ಥಳ ಕುನೂರಿಗೆ ತಲುಪಿ ಪರಶೀಲನೆ ನಡೆಸಿದ್ದಾರೆ. ಹೆಲಿಕ್ಯಾಪ್ಟರ್ ಬ್ಲಾಕ್ ಬಾಕ್ಸ್ ಗಾಗಿ ಹುಡುಕಾಟ ನಡೆಸಲಾಗಿದೆ.

Share This Article
Leave a comment