ವರ್ಣ ರಂಜಿತ ಬದುಕಿನ ರವಿ‌ ಬೆಳಗೆರೆ ಜರ್ನಿ ರೋಚಕ, ರೋಮಾಂಚನ

Team Newsnap
4 Min Read

1958-2020: ರವಿ ಬೆಳಗೆರೆ ಜೀವನ ಪಯಣ ಹೇಗಿತ್ತು ಗೊತ್ತಾ ?

ಕನ್ನಡದ ಪ್ರಸಿದ್ಧ ಪತ್ರಕರ್ತ, ಪತ್ರಿಕೋದ್ಯಮಿ ರವಿ ಬೆಳಗೆರೆಯವರ ಬದುಕೇ ವರ್ಣರಂಜಿತವಾಗಿದೆ. ರವಿ ಬೆಳಗೆರೆ ಪತ್ರಕರ್ತ, ನಿರೂಪಕ, ನಟ, ಲೇಖಕ, ಕಾದಂಬರಿಕಾರ, ಚಿತ್ರಕಥೆ ಬರಹಗಾರ, ‘ಕ್ರೈಂ ಡೈರಿ’ ಕಾರ್ಯಕ್ರಮ ನಿರೂಪಕ, ಹಾಯ್ ಬೆಂಗಳೂರು ಹಾಗೂ ಓ ಮನಸೇ ಪತ್ರಿಕೆಯ ಸಂಪಾದಕರಾಗಿದ್ದಾರೆ. ಅಲ್ಲದೆ ‘ಪ್ರಾರ್ಥನಾ ಶಾಲೆ’ಯ ಸಂಸ್ಥಾಪಕ ಕೂಡ ಆಗಿದ್ದಾರೆ. ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿರುವ ರವಿ ಬೆಳಗೆರೆ, ತನ್ನ ಬರಹದಿಂದಲೇ ಅಸಂಖ್ಯಾತ ಓದುಗ ಬಳಗವನ್ನು ಸೃಷ್ಟಿಸಿಕೊಂಡಿದ್ದ ಮಾಂತ್ರಿಕರಾಗಿದ್ದಾರೆ.

ಖ್ಯಾತ ಬರಹಗಾರ, ಪತ್ರಕರ್ತ ರವಿ ಬೆಳಗೆರೆ ಬಳ್ಳಾರಿಯ ಸತ್ಯ ನಾರಾಯಣಪೇಟೆಯಲ್ಲಿ 1958 ಮಾರ್ಚ್ 15ರಂದು ಜನಿಸಿದರು. ಬಳ್ಳಾರಿಯಲ್ಲೇ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕರ್ನಾಟಕ ವಿವಿಯಲ್ಲಿ ಇತಿಹಾಸ, ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ ಮಾಡಿ, ಇತಿಹಾಸ ಉಪನ್ಯಾಸಕರಾಗಿ ರವಿ ಬೆಳಗೆರೆ ವೃತ್ತಿಜೀವನ ಪ್ರಾರಂಭಿಸಿದರು.

ಓದಿದ ವಿಶ್ವವಿದ್ಯಾಲಯ ಧಾರವಾಡ ವಿವಿಯಲ್ಲೇ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದರು. ಕ್ರಮೇಣ ಉಪನ್ಯಾಸಕ ವೃತ್ತಿ ತೊರೆದು ಬರಹದತ್ತ ವಾಲಿದರು.

ಉಪನ್ಯಾಸಕ ವೃತ್ತಿಗೆ ರಾಜೀನಾಮೆ ನಂತರ, ಲಂಕೇಶ್ ಪತ್ರಿಕೆಯಲ್ಲಿ ಕೆಲಸ ಮಾಡಲು ಆರಂಭಿಸಿದರು. ಕರ್ಮವೀರ, ಕಸ್ತೂರಿ, ಸಂಯುಕ್ತ ಕರ್ನಾಟಕದಲ್ಲಿ ಕೆಲಸ ಮಾಡಿದ್ದಾರೆ. 1995ರಲ್ಲಿ ಬೆಂಗಳೂರಿನಲ್ಲಿ ‘ಹಾಯ್ ಬೆಂಗಳೂರ್’ ಪತ್ರಿಕೆಯನ್ನು ಪ್ರಾರಂಭಿಸಿ ಜನಮೆಚ್ಚುಗೆ ಗಳಿಸಿದರು. ಜನಪ್ರಿಯ ‘ಕ್ರೈಂ ಡೈರಿ’ ಕಾರ್ಯಕ್ರಮದ ನಿರೂಪಕ ಕೂಡ ಆಗಿದ್ದರು. ಜನಶ್ರೀ ವಾಹಿನಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು. ಕ್ರೈಂ, ದೇಶ, ಯುದ್ಧ, ಇತಿಹಾಸ, ಭೂಗತ ಇತಿಹಾಸದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರು.

ರವಿ ಬೆಳಗೆರೆಯ ‘ಪ್ರೀತಿ ಪತ್ರಗಳು’ ‘ಲವ್ ಲವಿಕೆ’ ಯುವ ಮನಸುಗಳಿಗೆ ಸ್ಫೂರ್ತಿ ನೀಡಿತ್ತು. ಬದುಕು ಬಗೆಗಿನ ‘ಖಾಸ್ ಬಾತ್’ 1996ರಿಂದ 2003ರವರೆಗೆ ಪ್ರಕಟವಾಗಿತ್ತು. `ಓ ಮನಸೇ’ ಅತೀ ಹೆಚ್ಚು ಪ್ರೇಮ ಬರಹಗಳಿಂದ ಪ್ರಸಿದ್ಧಿ ಪಡೆದಿತ್ತು. ‘ಹಿಮಾಲಯನ್ ಬ್ಲಂಡರ್’ ರವಿ ಬೆಳಗೆರೆಯ ತುಂಬಾ ಬೇಡಿಕೆಯ ಪುಸ್ತಕವಾಗಿದೆ. 

‘ಬೆಳಗೆರೆ’ಗೊಲಿದ ಸಮ್ಮಾನ:

1984ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1990 ರಲ್ಲಿ ಮಾಸ್ತಿ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, 1997 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಪಾ.ವೆಂ. ಹೇಳಿದ ಕತೆ) (ಸಣ್ಣ ಕತೆ), 2004 ರಲ್ಲಿ `ನೀ ಹಿಂಗೆ ನೀಡಬ್ಯಾಡ..’ ಕಾದಂಬರಿಗೆ ಶಿವರಾಮ ಕಾರಂತ ಪುರಸ್ಕಾರ, 2005 ರಲ್ಲಿ ಕೇಂದ್ರ ಸರ್ಕಾರದಿಂದ ಕಂಪ್ಯೂಟರ್ ಎಕ್ಸಲೆನ್ಸಿ ಅವಾರ್ಡ್ (ಪ್ರಾರ್ಥನಾ ಶಾಲೆ), 2008 ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ (ಜೀವಮಾನದ ಸಾಧನೆ) ಹಾಗೂ 2011 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದರ

ರವಿ ಬೆಳಗೆರೆ ಕಾದಂಬರಿಗಳು:

ಗೋಲಿಬಾರ್ (1983), ಅರ್ತಿ (1990), ಮಾಂಡೋವಿ (1996), ಮಾಟಗಾತಿ (1998), ಒಮರ್ಟಾ (1999), ಸರ್ಪಸಂಬಂಧ (2000), ಹೇಳಿ ಹೋಗು ಕಾರಣ (2003), ನೀ ಹಿಂಗ ನೋಡಬ್ಯಾಡ ನನ್ನ (2003), ಗಾಡ್‍ಫಾದರ್ (2005), ಕಾಮರಾಜ ಮಾರ್ಗ (2010), ಹಿಮಾಗ್ನಿ (2012)

ಅನುವಾದ:

ವಿವಾಹ (1983), ನಕ್ಷತ್ರ ಜಾರಿದಾಗ (1984), ಹಿಮಾಲಯನ್ ಬ್ಲಂಡರ್ (1999), ಕಂಪನಿ ಆಫ್ ವಿಮೆನ್ (2000), ಟೈಂಪಾಸ್ (2001), ರಾಜ ರಹಸ್ಯ (2002), ಹಂತಕಿ ಐ ಲವ್ ಯೂ (2007), ದಂಗೆಯ ದಿನಗಳು (2008). 

ಲೇಖನಿಯಲ್ಲಿ:

ಕಾರ್ಗಿಲ್‍ನಲ್ಲಿ ಹದಿನೇಳು ದಿನ (1999), ಬ್ಲ್ಯಾಕ್ ಫ್ರೈಡೆ (2005), ರೇಷ್ಮೆ ರುಮಾಲು (2007), ಇಂದಿರೆಯ ಮಗ ಸಂಜಯ (2002), ಗಾಂಧೀ ಹತ್ಯೆ ಮತ್ತು ಗೋಡ್ಸೆ (2003), ಡಯಾನಾ (2007), ನೀನಾ ಪಾಕಿಸ್ತಾನ, ಅವನೊಬ್ಬನಿದ್ದ ಗೋಡ್ಸೆ, ಮೇಜರ್ ಸಂದೀಪ್ ಹತ್ಯೆ, ಅನಿಲ್ ಲಾಡ್ ಮತ್ತು ನಲವತ್ತು ಕಳ್ಳರು, ಮುಸ್ಲಿಂ.

ಜೀವನ ಕಥನ:


ಪ್ಯಾಸಾ, 1991, ಪಾಪದ ಹೂವು ಫೂಲನ್, ಆಗಸ್ಟ್ 2001, ಸಂಜಯ 2000, ಚಲಂ (ಅನುವಾದ) ಮಾರ್ಚ್ 2008.

ಹತ್ಯಾಕಥನ:

ರಾಜೀವ್ ಹತ್ಯೆ ಏಕಾಯಿತು? ಹೇಗಾಯಿತು? 1991, ಮೈಸೂರಿನ ಸೀರಿಯಲ್ ಕಿಲ್ಲರ್ ರವೀಂದ್ರ ಪ್ರಸಾದ್, 1998, ರಂಗವಿಲಾಸ್ ಬಂಗಲೆಯ ಕೊಲೆಗಳು, ಬಾಬಾ ಬೆಡ್‍ರೂಂ ಹತ್ಯಾಕಾಂಡ (ತನಿಖಾ ವರದಿ) ಜನವರಿ 2007, ಪ್ರಮೋದ್ ಮಹಾಜನ್ ಹತ್ಯೆ (ಅನುವಾದ) ಅಕ್ಟೋಬರ್ 2012

ಭೂಗತ ಇತಿಹಾಸ:

ಪಾಪಿಗಳ ಲೋಕದಲ್ಲಿ ಭಾಗ -1 (1995), ಪಾಪಿಗಳ ಲೋಕದಲ್ಲಿ ಭಾಗ 2 (ಸೆಪ್ಟಂಬರ್ 1997), ಭೀಮಾ ತೀರದ ಹಂತಕರು (ಮೇ 2001), ಪಾಪಿಗಳ ಲೋಕದಲ್ಲಿ (2005), ಡಿ ಕಂಪನಿ (2008).

ಬದುಕು:

ಖಾಸ್‍ಬಾತ್ 96, 1997, ಖಾಸ್‍ಬಾತ್ 97, ಸೆಪ್ಟಂಬರ್ 1997, ಖಾಸ್‍ಬಾತ್ 98, ಸೆಪ್ಟಂಬರ್ 1998, ಖಾಸ್‍ಬಾತ್ 99, ಅಕ್ಟೋಬರ್ 2003, ಖಾಸ್‍ಬಾತ್ 2000, ಅಕ್ಟೋಬರ್ 2003, ಖಾಸ್‍ಬಾತ್ 2001, ಜನವರಿ 2007, ಖಾಸ್‍ಬಾತ್ 2002, ಜನವರಿ 2008, ಖಾಸ್‍ಬಾತ್ 2003.

ಅಂಕಣ ಬರಹಗಳ ಸಂಗ್ರಹ:

ಜೀವನ ಪಾಠ, ಬಾಟಮ್ ಐಟಮ್ ಭಾಗ 1, ಫೆಬ್ರವರಿ2002, ಬಾಟಮ್ ಐಟಮ್ 2, ಅಕ್ಟೋಬರ್2003, ಬಾಟಮ್ ಐಟಮ್ ಭಾಗ 3, ಡಿಸೆಂಬರ್ 2006, ಬಾಟಂ ಐಟಮ್ 4 ಹಾಗೂ ಬಾಟಂ ಐಟಮ್ 5.

ಪ್ರೀತಿ ಪತ್ರಗಳು:

ಲವಲವಿಕೆ -1, ಡಿಸೆಂಬರ್ 1998, ಲವಲವಿಕೆ -2, ಸೆಪ್ಟಂಬರ್ 2004, ಲವಲವಿಕೆ -3, ಲವಲವಿಕೆ -4

ಕವನ ಸಂಕಲನ:

ಅಗ್ನಿಕಾವ್ಯ, 1983, ಇತರೆ. ಹೀಗೆ ತಮ್ಮ ಬರಹದಿಂದಲೇ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಮಾಂತ್ರಿಕರಾಗಿದ್ದರು.

supreetha 1
ಸುಪ್ರೀಯಾ ಚಕ್ಕರೆ

Share This Article
Leave a comment