ಅಕ್ಷರ ಮಾಂತ್ರಿಕ, ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ಇನ್ನಿಲ್ಲ.

Team Newsnap
1 Min Read

ಅಸಂಖ್ಯಾತ ಕನ್ನಡಿಗರಿಗೆ ಬರಹಗಳ ಹುಚ್ಚು ಹತ್ತಿಸಿದ ನಾಡಿನ ಖ್ಯಾತ ಪತ್ರಕರ್ತ, ಬರಹಗಾರ ರವಿ ಬೆಳಗೆರೆ ತಡರಾತ್ರಿ ಹೃದಯಾಘಾತದಿಂದ ನಿಧನರಾಗಿ ದ್ದಾರೆ.

62 ವರ್ಷದ ರವಿ ಬೆಳಗೆರೆಯವರಿಗೆ ಮಧ್ಯರಾತ್ರಿ ಹನ್ನೆರಡರ ಸುಮಾರಿಗೆ ಹೃದಯಾಘಾತವಾದ ಹಿನ್ನೆಲೆಯಲ್ಲಿ ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಅದಾಗಲೇ ಅವರು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ.

ಪದ್ಮನಾಭ ನಗರದ ತಮ್ಮ ಕಚೇರಿಯಲ್ಲಿ ಅಕ್ಷರದ ಕೆಲಸ ನಿರ್ವಹಿಸುತ್ತಿದ್ದಾಗಲೇ ಬೆಳಗೆರೆಯವರಿಗೆ ಹೃದಯಾಘಾತ ವಾಗಿದೆ. ಅಲ್ಲಿನ ಸಿಬ್ಬಂದಿ ಕೂಡಲೇ ಅಪೋಲೋ ಆಸ್ಪತ್ರೆಗೆ ಅವರನ್ನು ದಾಖಲಿಸಿದರೂ ಬೆಳಗಿನ ಜಾವ 2.30ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಹಾಯ್‌ ಬೆಂಗಳೂರು ಪತ್ರಿಕೆ ಸ್ಥಾಪನೆ ಮಾಡಿ ಕರ್ನಾಟಕದ ಮೂಲೆಮೂಲೆಯ ಜನರಿಗೂ ಚಿರಪರಿಚಿತರಾಗಿದ್ದರು. ಓ ಮನಸೇ ಮೂಲಕ ಜನಪ್ರಿಯಾಗಿದ್ದ ಇವರು, ಕಾದಂಬರಿ,ಅನುವಾದ, ಜೀವನ ಕಥನ ಸೇರಿದಂತೆ ಇನ್ನಿತರ ಬರಹಗಳನ್ನು ಬರೆದಿದ್ದ ಬೆಳಗೆರೆಯವರ ಪುಸ್ತಕಗಳು ಅಚ್ಚರಿಯ ರೀತಿಯಲ್ಲಿ ಮಾರಾಟವಾಗುತ್ತಿದ್ದವು.

ನಗರದ ಕರಿಷ್ಮಾ ಹಿಲ್‌ನಲ್ಲಿರುವ ಬೆಳಗೆರೆ ನಿವಾಸಕ್ಕೆ ಪಾರ್ಥೀವ ಶರೀರವನ್ನು ರವಾನೆ ಮಾಡಲಾಗಿದೆ ರವಿ ಬೆಳಗೆರೆಯವರ ಕನಸಿನ ಪ್ರಾರ್ಥನಾ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸುವುದಾಗಿ ತಿಳಿದು ಬಂದಿದೆ. ಬೆಳಗೆರೆಯವರ ಮೊದಲ ಪತ್ನಿಗೆ ಇಬ್ಬರು ಪುತ್ರಿಯರು ಮತ್ತು ಒಬ್ಬ ಮಗ,ಎರಡನೇ ಪತ್ನಿಗೆ ಒಬ್ಬ ಮಗನಿದ್ದಾನೆ. ಬೆಳಗೆರೆ ನಿಧನದಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಲಕ್ಷಾಂತರ ಅಭಿಮಾನಿಗಳು ಶೋಕಸಾಗರದಲ್ಲಿ ಮುಳುಗಿದ್ದಾರೆ

Share This Article
Leave a comment