January 29, 2026

Newsnap Kannada

The World at your finger tips!

RASHMIKA

ಕನ್ನಡ ಭಾಷೆಯನ್ನು ಮರೆತ ನಟಿ ರಶ್ಮಿಕಾ

Spread the love

ಅಲ್ಲು ಅರ್ಜುನ್​ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ “ಪುಷ್ಪ” ಚಿತ್ರದ ಟ್ರೈಲರ್​ ರಿಲೀಸ್ ಆಗಿದೆ

ಆದರೆ ನಟಿ​ ರಶ್ಮಿಕಾ ಕನ್ನಡ ಭಾಷೆಯನ್ನು ಮರೆತುಬಿಟ್ಟಿದ್ದಾರೆ ಎಂಬ ಪ್ರಶ್ನೆ ಎದುರಾಗಿದೆ.

ಟಾಲಿವುಡ್​ ನಿರ್ದೇಶಕ ಸುಕುಮಾರ್​ ನಿರ್ದೇಶನಲ್ಲಿ ಪ್ಯಾನ್​ ಇಂಡಿಯನ್​ ಸಿನಿಮಾ “ಪುಷ್ಪ” ಚಿತ್ರದ ಟ್ರೈಲರ್ ಸದ್ಯ ಯೂಟ್ಯೂಬ್​ನಲ್ಲಿ ಟ್ರೆಡಿಂಗ್​ನಲ್ಲಿದೆ. ಇನ್ನು ಐದು ಭಾಷೆಗಳಲ್ಲಿ ಈ ಚಿತ್ರದ ಟ್ರೈಲರ್​ ರಿಲೀಸ್​ ಆಗಿದೆ

ತೆಲುಗು ಅವೃತಿಯಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರೆ ತಮ್ಮ ಪಾತ್ರಕ್ಕೆ ತಾವೆ ಡಬ್​ ಮಾಡಿದ್ದಾರೆ.
ಆದರೆ “ಪುಷ್ಪ” ಕನ್ನಡ ಅವೃತಿಯಲ್ಲಿ ರಶ್ಮಿಕಾ ಪಾತ್ರಕ್ಕೆ ಬದಲು ಬೇರೆಯಾವರು ಧ್ವನಿ ನೀಡಿದ್ದಾರೆ.

ತೆಲುಗಿನಲ್ಲಿ ಸ್ವತಃ ರಶ್ಮಿಕಾ ಅವರೇ ತಮ್ಮ ಪಾತ್ರಕ್ಕೆ ಡಬ್​ ಮಾಡಿದ್ದು ಕರ್ನಾಟಕದ ಹುಡುಗಿಯಾಗಿ ಕನ್ನಡ ಭಾಷೆಯಲ್ಲಿ ತಮ್ಮ ಪಾತ್ರಕ್ಕೆ ಧ್ವನಿ ನೀಡಿಲ್ಲ.

ಸದ್ಯ ಸಾಲು ಸಾಲು ಪರಭಾಷಾ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಕನ್ನಡದ ಯಾವುದೇ ಸಿನಿಮಾವನ್ನು ಕೂಡ ಒಪ್ಪಿಕೊಂಡಿಲ್ಲ. ಹೀಗಾಗಿ ರಶ್ಮಿಕಾ ಕನ್ನಡ ಭಾಷೆಯನ್ನು ಮರೆತುಬಿಟ್ಟರಾ ಎಂಬ ಪ್ರಶ್ನೆ ಕನ್ನಡ ಸಿನಿ ಪ್ರೇಕ್ಷಕರಲ್ಲಿ ಮೂಡಿದೆ.

error: Content is protected !!