ತೆಲುಗಿನ ಬಹುನಿರೀಕ್ಷಿತ ಸಿನಿಮಾ ಪುಷ್ಪಾ ದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕ ನಟಿಯಾಗಿ ನಟಿಸುತ್ತಿರುವುದು ಹಳೆಯ ಸುದ್ದಿ, ಹೊಸ ಸುದ್ದಿಯೆಂದರೆ ಸಿನಿಮಾಕ್ಕಾಗಿ ರಶ್ಮಿಕಾ ಮಂದಣ್ಣ ಚಿತ್ತೂರು ಸ್ಟೈಲ್ ತೆಲುಗು ಶಾಲೆಗೆ ಸೇರಿದ್ದಾರಂತೆ!
ಹೌದು, ಪುಷ್ಪಾ ಸಿನಿಮಾ ಆಂಧ್ರದ ಗ್ರಾಮ್ಯ ಭಾಗದಲ್ಲಿ ನಡೆವ ಕತೆ ಅದರಲ್ಲಿಯೂ ಚಿತ್ತೂರು ಪ್ರದೇಶದಲ್ಲಿ ಕತೆ ನಡೆಯುತ್ತದೆ. ಸಿನಿಮಾದಲ್ಲಿನ ಭಾಷೆಯೂ ಚಿತ್ತೂರು, ತಿರುಪತಿ, ಕಡಪ ಭಾಗದ ತೆಲುಗು ಭಾಷೆಯಲ್ಲಿಯೇ ಇರಲಿದೆ.
ಕನ್ನಡದಿಂದ ಆಂಧ್ರಕ್ಕೆ ಹೋಗಿರುವ ರಶ್ಮಿಕಾ ಗೆ ಸಾಮಾನ್ಯ ತೆಲುಗು ಭಾಷೆಯೇ ಇನ್ನೂ ಕರಗತವಾಗಿಲ್ಲ, ಹೀಗಿರುವಾಗ ಅವರನ್ನು ಚಿತ್ತೂರು ಭಾಷೆ ಮಾತನಾಡುವಂತೆ ಹೇಳಿದ್ದಾರಂತೆ ನಿರ್ದೇಶಕ ಸುಕುಮಾರ್. ಹಾಗಾಗಿ ಚಿತ್ತೂರು ಭಾಗದ ಭಾಷೆ ಕಲಿಯಲು ಆರಂಭಿಸಿದ್ದಾರಂತೆ ರಶ್ಮಿಕಾ.
ಚಿತ್ತೂರು ತೆಲುಗು ಕಲಿಯಲೆಂದು ಒಬ್ಬ ತರಬೇತುದಾರರನ್ನು ಸಹ ನೇಮಿಸಿಕೊಂಡಿದ್ದಾರೆ. ಪ್ರತಿದಿನ ಚಿತ್ತೂರು ತೆಲುಗು ಕಲಿಯುತ್ತಿದ್ದಾರೆ ರಶ್ಮಿಕಾ, ಸಿನಿಮಾಕ್ಕೆ ಅವರೇ ಡಬ್ಬಿಂಗ್ ಮಾಡಬೇಕಾಗಿರುವ ಕಾರಣ ಭಾಷೆ ಕಲಿಯಲೇಬೇಕಾದ ಒತ್ತಡದಲ್ಲಿದ್ದಾರೆ.
ಪುಷ್ಪಾ ಸಿನಿಮಾವು ರಕ್ತಚಂದನ ಕಳ್ಳಸಾಗಾಣೆದಾರರ ಸುತ್ತ ಹೆಣೆದ ಕತೆಯಾಗಿದೆ. ಆರ್ಯಾ, ರಂಗಸ್ಥಳ, ನಾನಕ್ಕು ಪ್ರೇಮತೋ ಅಂಥಹಾ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಸುಕುಮಾರ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.
More Stories
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಾರತ ತಂಡದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಭೇಟಿ
ಉಪಚುನಾವಣಾ ಫಲಿತಾಂಶಕ್ಕೂ ಮುನ್ನ ಸಿಪಿ ಯೋಗೇಶ್ವರ್ ವಿರುದ್ಧ ಮಗನ ದೂರು: ನಕಲಿ ಸಹಿ ಆರೋಪ
ಸಚಿವ ಸ್ಥಾನ ನನ್ನ ಹಕ್ಕು, ಬೇಡಿಕೆಯಲ್ಲ: ನಿಖರ ಹೇಳಿಕೆ ನೀಡಿದ ‘ಕೈ’ ಶಾಸಕ ನರೇಂದ್ರ ಸ್ವಾಮಿ