ರಾಸಲೀಲೆ ಸಿಡಿ ಸ್ಫೋಟ ಪ್ರಕರಣದ ತನಿಖೆಯ ಚುರುಕಾಗಿದೆ.
ಇಲ್ಲಿವರೆಗೂ ನಿಗೂಢವಾಗಿದ್ದ ಆ ಯುವತಿ ಆರ್.ಟಿ.ನಗರದ ಪಿ.ಜಿ.ಯಲ್ಲಿ ವಾಸ್ತವ್ಯ ಹೂಡಿರುವ ಸುಂದರಿ ಯಾರು ಎಂಬುದು ಪತ್ತೆಯಾಗಿದೆ.
ಈ ಯುವತಿ ಆರ್.ಟಿ.ನಗರದ ಪಿಜಿಯಲ್ಲಿದ್ದಾಳೆ ಎಂಬುದು ಪೋಲಿಸರಿಗೆ ಗೊತ್ತಾಗಿದೆ.
ಆಕೆಯ ಹೆಸರು ಸ್ವಾತಿ . ಈ ಸುಂದರಿ ತನ್ನ ಇನ್ ಸ್ಟಾಗ್ರಾಮ್ ನಲ್ಲಿ ಸಾಕಷ್ಟು ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾಳೆ.
ಇನ್ ಸ್ಟಾಗ್ರಾಮ್ ನಲ್ಲಿ ನೂರಾರು ಫೋಟೋಗಳನ್ನು ನೋಡಬಹುದು. ಆದ್ರೆ ಯಾವಾಗ ವಿಡಿಯೋ ಲೀಕ್ ಆಯ್ತೋ ಆಗ ತನ್ನ ಇನ್ ಸ್ಟಾಗ್ರಾಮ್ ಅಕೌಂಟ್ ಅನ್ನೇ ಡಿಲೀಟ್ ಮಾಡಿದ್ದಾಳೆ ಎಂಬುದನ್ನು ಪೋಲಿಸರು ಪತ್ತೆ ಮಾಡಿದ್ದಾರೆ.
ರಾಸಲೀಲೆಯ ವಿಡಿಯೋ ರೆಕಾರ್ಡಿಂಗ್ ಆಗಿರುವ ಸಮಯವಾಗಲೀ ವಿಡಿಯೋ ಅವಧಿ ಕೂಡ ಪೂರ್ಣ ಡಿಲೀಟ್ ಆಗಿದೆ. ಹೀಗಾಗಿ ಯಾವ ದಿನ ಇದು ನಡೆದಿದೆ ಎಂಬ ವಿವರಗಳಿಲ್ಲ. ಎಲ್ಲಿ ನಡೆದಿದೆ ಎಂಬ ವಿವರಗಳು ಇಲ್ಲ. ಪೊಲೀಸರು ವಿಡಿಯೋ ಆಧರಿಸಿ ಕೂಡ ತನಿಖೆ ಆರಂಭಿಸಲು ಸದ್ಯದ ಮಟ್ಟಿಗೆ ಸಾಧ್ಯವಾಗಿಲ್ಲ.
ಜಾರಕಿಹೊಳಿ ಜತೆ ನಡೆಸಿದ ಆಡಿಯೋ ಸಂಭಾಷಣೆ ಮಾಡಿರುವ ಹುಡುಗಿಗೂ, ರಾಸಲೀಲೆಯಲ್ಲಿ ತೊಡಗಿರುವ ಹುಡುಗಿ ಬೇರೆಯಾಗಿರಬಹುದಾ ಎಂಬ ಅನುಮಾನ ಕೂಡ ಸ್ಪಷ್ಟವಾಗಿದೆ. ವಿಡಿಯೋ ಕರೆಯಲ್ಲಿ ಕಾಣಿಸಿರುವ ಯುವತಿಯ ಚಿತ್ರಕ್ಕೂ, ರಾಸಲೀಲೆಯಲ್ಲಿ ತೊಡಗಿರುವ ಯುವತಿ ಚಿತ್ರಕ್ಕೂ ವ್ಯತ್ಯಾಸವಿದೆ. ತನಿಖೆಯಿಂದ ಮಾತ್ರ ಸತ್ಯ ಹೊರ ಬರಲು ಸಾಧ್ಯ.
More Stories
ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
ಅಮಿತ್ ಶಾ ಹೇಳಿಕೆ ವಿರೋಧಿಸಿ ಮೈಸೂರು-ಮಂಡ್ಯ ಬಂದ್: ವಾಹನ ಸಂಚಾರಕ್ಕೆ ಅಡಚಣೆ
ಕಾನ್ಸ್ಟೇಬಲ್ ನೇಮಕಾತಿ ದೈಹಿಕ ಪರೀಕ್ಷೆ: ಓಟದ ವೇಳೆ ಬಿದ್ದ ಯುವಕನ ದುರ್ಮರಣ