December 25, 2024

Newsnap Kannada

The World at your finger tips!

1d554642 f239 45df a748 d1314f4c2917

ರಾಸಲೀಲೆ ಸಿಡಿ ಪ್ರಕರಣ: ಐವರು ಆರೋಪಿಗಳು ಎಸ್​ಐಟಿ ವಶಕ್ಕೆ

Spread the love
  • ದಿನೇಶ್ ಕಲ್ಲಹಳ್ಳಿ ಗೆ ಸಿಡಿ ಕೊಟ್ಟ ಯುವಕ ಯಶವಂತಪುರದಲ್ಲಿ ವಶ
  • ಯುವತಿಯ ಗೆಳೆಯ ಚಾಮರಾಜ ಪೇಟೆಯಲ್ಲಿ ವಶ
  • ಸಿಡಿ ಎಡಿಟ್ ಮಾಡಿದ ಯುವಕ ಚಿಕ್ಕಮಗಳೂರು ನಲ್ಲಿ ವಶ

ಮಾಜಿ ಸಚಿವರ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಎಸ್​ಐಟಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಗೊತ್ತಾಗಿದೆ.

ಕಳೆದ ಕೆಲವು ವಾರಗಳಿಂದ ಸಿಡಿ ಕೇಸ್​ ರಾಜ್ಯದಲ್ಲಿ ಸದ್ದು ಮಾಡುತ್ತಿದೆ. ಈ ಸಂಬಂಧ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಎಸ್​ಐಟಿ ತಂಡಕ್ಕೆ ಆದೇಶ ನೀಡಿದೆ.

ತನಿಖೆ ಆರಂಭಿಸಿದ ಮೊದಲ ದಿನವೇ ಅವರನ್ನು ವಶಕ್ಕೆ ಪಡೆದು ತನಿಖೆ ಚುರುಕು ಮಾಡಲಾಗಿದೆ.

ಸಿಐಡಿ ಕಚೇರಿಯಲ್ಲಿ ಆರೋಪಿಯ ವಿಚಾರಣೆ ನಡೆಯುತ್ತಿದೆ, ದಿನೇಶ್ ಕಲ್ಲಹಳ್ಳಿ‌ ಮತ್ತು ಪ್ರಮುಖ ಆರೋಪಿ ಜೊತೆ ಲಿಂಕ್ ಆರೋಪದ ಮೇಲೆ ತನಿಖೆ ನಡೆಯುತ್ತಿದೆ.

ಮೂಲಗಳ ಪ್ರಕಾರ ಬಂಧಿತ ಆರೋಪಿ ಸಿಡಿಯನ್ನು ದಿನೇಶ್ ಕಲ್ಲಹಳ್ಳಿಗೆ ತೆಗೆದುಕೊಂಡು ಕೊಟ್ಟಿದ್ದಾನೆ ಅಂತಾ ಹೇಳಲಾಗಿದೆ.
ಈ ಸಿಡಿಯನ್ನು ಯಾರಿಂದ ಪಡೆದು ಯಾರಿಗೆ ಕೊಟ್ಟಿದ್ದೆ ಎಂದು ತನಿಖಾಧಿಕಾರಿಗಳು ಪ್ರಶ್ನೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

Copyright © All rights reserved Newsnap | Newsever by AF themes.
error: Content is protected !!