ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ದಂತೆ ಶುಕ್ರವಾರ ಎಫ್‍ಐಆರ್ ದಾಖಲಾಗುವ ಸಾಧ್ಯತೆಗಳು ನಿಚ್ಚಳವಾಗಿದೆ
ನಿತ್ಯಾನಂದ ಕೇಸ್‍ನಲ್ಲಿ ಕಾರು ಚಾಲಕ ಲೆನಿನ್ ದೂರಿನ ಮೂಲಕ ಎಫ್‍ಐಆರ್ ದಾಖಲಾಗಿತ್ತು. ಲೆನಿನ್ ಕೂಡ ಆ ದಿನ ಮೂರನೇ ವ್ಯಕ್ತಿ ಆಗಿದ್ದ. ದೂರು ನೀಡಿದ ಬಳಿಕ ಅತ್ಯಾಚಾರ ಆಗಿಲ್ಲ ಎಂದು ಆ ನಟಿ ಹೇಳಿದ್ದರು. ಈಗ ಜಾರಕಿಹೊಳಿ ಕೇಸ್‍ನಲ್ಲೂ ದಿನೇಶ್ ಕಲ್ಲಹಳ್ಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲು ಮಾಡಿ ಯುವತಿಯ ಹೇಳಿಕೆ ಬಿಡಲು ಚಿಂತನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಕೆಪಿಟಿಸಿಎಲ್ ನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿರುವ ಹಿನ್ನೆಲೆ ಯಲ್ಲಿ ಬಹುತೇಕ ಇಂದು ಮಧ್ಯಾಹ್ನ ದೊಳಗೆ ಎಫ್‍ಐಆರ್ ದಾಖಲಾಗಬಹುದು ಎನ್ನಲಾಗಿದೆ.
ಈ ವಿಷಯದಲ್ಲಿ ಕೆಲ ಕಾನೂನು ತಜ್ಞರ ಸಲಹೆಯ ಪಡೆಯಲಾಗಿದೆ. ಹೀಗಾಗಿ
ಎಫ್‍ಐಆರ್ ದಾಖಲಾಗುವ ಸಾಧ್ಯತೆ ಇದೆ.
ಲೈಂಗಿಕ ದೌರ್ಜನ್ಯದಡಿ ಈ ಎಫ್‍ಐಆರ್ ದಾಖಲು ಮಾಡಬಹುದು. ರಾಸಲೀಲೆ ಹಗರಣದಲ್ಲಿ ಜಾರಕಿಹೊಳಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ