January 29, 2026

Newsnap Kannada

The World at your finger tips!

marraige, subsidy marriage, bengaluru

ಅಪರೂಪದ ಪ್ರಕರಣದಲ್ಲಿ ‘ಆನ್​ಲೈನ್​’ ಮದ್ವೆಗೆ ಅಸ್ತು ಎಂದ ಕೇರಳ ಹೈಕೋರ್ಟ್

Spread the love

ಒಮಿಕ್ರಾನ್‌ ರೂಪಾಂತರಿ ಹಾವಳಿಯಿಂದ ಹಸೆಮಣೆ ಏರಲಾಗದೇ ಕಂಗಾಲಾಗಿದ್ದ ಕೇರಳದ ವಕೀಲ ಜೋಡಿಯೊಂದಕ್ಕೆ ಕೇರಳ ಹೈಕೋರ್ಟ್‌, ಆನ್‌ಲೈನ್‌ ಮದುವೆಗೆ ಅಸ್ತು ಎಂದು ಹೇಳಿದೆ

ವಿದ್ಯಾಭ್ಯಾಸಕ್ಕೆ ಹೋಗಿ ಇಂಗ್ಲೆಂಡ್‌ನಿಂದ ಬರಲಾಗದೇ ವರ ಅನಂತ ಕೃಷ್ಣ ಹರಿ ಕುಮಾರನ್‌ ನಾಯರ್‌, ಕೇರಳಕ್ಕೆ ವಾಪಸಾಗಲು ಒಮಿಕ್ರಾನ್‌ ಅಡ್ಡಿಯಾಗಿದೆ.

ಈ ಹಿನ್ನೆಲೆ ಆನ್‌ಲೈನ್‌ ಮೂಲಕ ಮದುವೆಯಾಗುವ ಪ್ಲಾನ್​​ನಿಂದಾಗಿ ಅನುಮತಿ ಕೋರಿ ಜೋಡಿ ಅರ್ಜಿ ಸಲ್ಲಿಸಿತ್ತು.

ಈ ಜೋಡಿ ಅಚ್ಚರಿಯ ಗೆಲುವು ಸಾಧಿಸಿ, ಮದುವೆಗೆ ತಯಾರಾಗಿದ್ದಾರೆ. 25 ವರ್ಷದ ರಿಂತು ತಾಮಸ್​ ಅವರನ್ನು ಮದುವೆ ಆಗಲು ಆನಂತ ಕೃಷ್ಣಹರಿ ತಯಾರಾಗಿದ್ದರು.

ನಾಯರ್ ಲಂಡನ್​​ನಿಂದ ಭಾರತಕ್ಕೆ ಬರಲು ಡಿಸೆಂಬರ್ 22 ರಂದು ವಿಮಾನ ಟಿಕೆಟ್ ಕೂಡ ಖರೀದಿಸಿದ್ದರು. ನಿಗದಿಯಂತೆ ಡಿಸೆಂಬರ್ 23 ರಂದು ಇವರ ವಿವಾಹ ನಡೆಯಬೇಕಿತ್ತು. ಆದರೆ ಈ ಶುಭ ಸಮಾರಾಂಭಕ್ಕೆ ಒಮಿಕ್ರಾನ್ ಸೋಂಕು ಅಡ್ಡಿಯಾಗಿತ್ತು.

error: Content is protected !!