ಸಾಮೂಹಿಕ ಅತ್ಯಾಚಾರಕ್ಕೊಳಗಾದ ಸಂತ್ರಸ್ಥೆ ಶುಕ್ರವಾರ ಮಧ್ಯಾಹ್ನ 12 .30 ರ ವೇಳೆಗೆ ಮೈಸೂರಿನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆಂದು ಉನ್ನತ ಮೂಲಗಳು ಹೇಳಿವೆ.
ಮಹಾರಾಷ್ಟದಿಂದ ಮೈಸೂರಿಗೆ ಬಂದ ಸಂತ್ರಸ್ಥೆಯ ಪೋಷಕರು ತಮ್ಮ ಮಗಳನ್ನು ಇಂದು ಮಧ್ಯಾಹ್ನ 12. 30ರ ಸಮಯದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಹೋದರೆನ್ನಲಾ ಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಸಂತ್ರಸ್ಥೆಯ ಸ್ನೇಹಿತ ಗುರುವಾರ ಸಂಜೆಯೇ ಬಿಡುಗಡೆಯಾಗಿದ್ದಾನೆಂದು ವರದಿಗಳು ಹೇಳಿವೆ.
ಮೈಸೂರಿನಲ್ಲಿ ಕಳೆದ ಮಂಗಳವಾರ ಸಂಜೆ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು.
ಈವರೆಗೆ ಸಂತ್ರಸ್ಥೆ ಪೊಲೀಸರಿಗೆ ಯಾವುದೇ ಮಾಹಿತಿ ನೀಡಿಲ್ಲದಿರುವುದು ಘಟನೆ ಭೇದಿಸುವಲ್ಲಿ ತೊಡಕಾಗಿದೆ.
ಪೊಲೀಸರಿಗೆ ಹೇಳಿಕೆ ನೀಡುವಲ್ಲಿ ಸಂತ್ರಸ್ಥೆ ಸಹಕರಿಸುತ್ತಿಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಮ್ಮ ಅಸಮಾಧಾನ ವ್ಯಕ್ತಪಡಿಸಿ ದ್ದಾರೆ
More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ