February 22, 2026

Newsnap Kannada

The World at your finger tips!

araga

ಅತ್ಯಾಚಾರ ಪ್ರಕರಣ: ಕೇರಳ, ತಮಿಳುನಾಡಿಗೆ ಪೊಲೀಸರ ತಂಡ

Spread the love

ಮೈಸೂರಿನಲ್ಲಿ ಕಳೆದ ಮಂಗಳವಾರ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ದೊರೆತ ಸುಳಿವಿನ ಮೇರೆಗೆ ಎರಡು ತಂಡಗಳು ತಮಿಳುನಾಡು ಮತ್ತು ಕೇರಳಕ್ಕೆ ತೆರಳಿದೆ ಎಂದು ವರದಿಯಾಗಿದೆ.


ಮೈಸೂರಿನಲ್ಲಿ ಓದುತ್ತಿರುವ ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಈ ದುಷೃತ್ಯದಲ್ಲಿ ಭಾಗಿಯಾಗಿರುವ ಶಂಕೆ ಮೇರೆಗೆ ಮೈಸೂರು ಪೊಲೀಸರ ತಂಡ ತೆರಳಿದೆ. ತಮಿಳುನಾಡಿನ ಒಬ್ಬ ಮತ್ತು ಕೇರಳ ಮೂವರು ವಿದ್ಯಾರ್ಥಿಗಳು ಭಾಗಿಯಾಗಿರುವ ಶಂಕೆ ಇದೆ.


ಘಟನೆ ನಡೆದ ಮಾರನೇ ದಿನವೂ ಮೈಸೂರಿನಲ್ಲೇ ಇದ್ದ ಈ ಆರೋಪಿಗಳು ವಿಷಯ ಬಹಿರಂಗಗೊಳ್ಳುತ್ತಲೇ ನಗರದಿಂದ ಹೊರಟಿದ್ದಾರೆ ಎನ್ನಲಾಗಿದೆ. ಬುಧವಾರ ನಡೆದ ಪರೀಕ್ಷೆಯಲ್ಲಿ ಐವರು ವಿದ್ಯಾರ್ಥಿಗಳು ಗೈರು ಆಗಿರುವುದು ಪೊಲೀಸರ ಅನುಮಾನವನ್ನು ಇಮ್ಮಡಿಗೊಳಿಸಿದೆ.


ಇಂದು ಸಂಜೆ ಪತ್ರಿಕಾಗೋಷ್ಠಿ: ಈಗ ಮೈಸೂರಿನಲ್ಲಿರುವ ಗೃಹಸಚಿವ ಆರಗಜ್ಞಾನೇಂದ್ರ ಅವರು ಸಂಜೆ 5.3೦ಕ್ಕೆ ಪತ್ರಿಕಾಗೋಷ್ಠಿ ನಡೆಸುವರು. ಅಲ್ಲಿ ಕೆಲವು ಮಹತ್ವದ ವಿಚಾರಗಳನ್ನು ಬಹಿರಂಗಗೊಳಿಸುವರೆಂದು ಹೇಳಲಾಗಿದೆ.

error: Content is protected !!