ಬೆಂಗಳೂರು : ನ್‌ಐಎ (NIA) ಅಧಿಕಾರಿಗಳು ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ (Rameshwaram Cafe) ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ .
ಉಗ್ರರ ಕೈವಾಡದ ಶಂಕೆ ರಾಮೇಶ್ವರಂ ಕೆಫೆ ಸ್ಪೋಟದಲ್ಲಿ ವ್ಯಕ್ತವಾಗಿದ್ದು , ಬಳ್ಳಾರಿ ಮಾಡ್ಯೂಲ್‌ನ (ISIS Ballari Module) ಶಂಕಿತ ಉಗ್ರ ಮಿನಾಜ್ ಅಲಿಯಾಸ್ ಸುಲೇಮಾನ್ ನನ್ನು ಬಾಡಿ ವಾರೆಂಟ್ ಮೂಲಕ ಮಾರ್ಚ್ 9 ರವರೆಗೂ ವಶಕ್ಕೆ ಪಡೆದ ಎನ್‌ಐಎ ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದೆ.
ಮಿನಾಜ್ ಸುಲೈಮನ್ ಜೊತೆ ಮುಂಬೈನ ಅನಾಸ್ ಇಕ್ಬಾಲ್, ದೆಹಲಿಯ ಶಯಾನ್ ರೆಹ್ಮಾನ್, ಬಳ್ಳಾರಿಯ ಸೈಯ್ಯದ್ ಸಮೀರ್‌ನನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು ,ಬಳ್ಳಾರಿಯ ಸೈಯ್ಯದ್‌ನಿಂದ ತರಬೇತಿ ಪಡೆದವರಲ್ಲಿ ಒಬ್ಬ ನಾಪತ್ತೆಯಾಗಿರುವ ಮಾಹಿತಿ ಸಿಕ್ಕಿದೆ.ಗುಡ್ ನ್ಯೂಸ್ ನೀಡಿದ ಮಿಲನಾ – ಡಾರ್ಲಿಂಗ್ ಕೃಷ್ಣ ದಂಪತಿ
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟವನು ಅವನೇ ಆಗಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು , ನಾನಾ ಆಯಾಮಗಳಲ್ಲಿ ತನಿಖಾತಂಡಗಳು ತನಿಖೆ ನಡೆಸುತ್ತಿವೆ.
More Stories
ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ