February 22, 2026

Newsnap Kannada

The World at your finger tips!

jarakihole

ರಮೇಶ್ ಜಾರಕಿಹೊಳಿ ಸಹಕಾರಿ ಬ್ಯಾಂಕ್ ಗೆ ನೀಡಿದ್ದ ಚೆಕ್ ಬೌನ್ಸ್ ಪ್ರಕರಣ :ಮರು ವಿಚಾರಣೆಗೆ ಆದೇಶ

Spread the love

ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಜಾರಕಿಹೊಳಿ ವಿರುದ್ಧ ವಜಾಗೊಂಡಿದ್ದ ಪ್ರಕರಣವೊಂದಕ್ಕೆ ಮರುಜೀವ ನೀಡಿ ಹೈಕೋರ್ಟ್ ಆದೇಶ ಹೊರಡಿಸಿದೆ.

ರಮೇಶ್ ಜಾರಕಿಹೊಳಿ ವಿರುದ್ಧ ಸಹಕಾರಿ ಬ್ಯಾಂಕ್ ಗೆ ನೀಡಿದ್ದ 5.2 ಕೋಟಿ ರು ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕೊಡಿ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದು ಮಾಡಿದೆ.

ಚೆಕ್ ಬೌನ್ಸ್ ಪ್ರಕರಣದಲ್ಲಿ ಸಹಕಾರಿ ಬ್ಯಾಂಕ್ ಖಾಸಗಿ ದೂರು ದಾಖಲಿಸಿತ್ತು. ಆದರೆ ಬ್ಯಾಂಕ್ ಪರ ವಕೀಲರು ಕೋರ್ಟ್ ಗೆ ಹಾಜರಾಗದ ಹಿನ್ನೆಲೆಯಲ್ಲಿ ಚಿಕ್ಕೊಡಿ ನ್ಯಾಯಾಲಯ ಪ್ರಕರಣ ವಜಾಗೊಳಿಸಿ ಆದೇಶ ನೀಡಿತ್ತು.

ಈ ಆದೇಶ ರದ್ದುಗೊಳಿಸಿರುವ ಹೈಕೋರ್ಟ್ ಚಿಕ್ಕೋಡಿ ನ್ಯಾಯಾಲಯದ ಆದೇಶ ಕಾನೂನು ರೀತಿ ಸರಿಯಿಲ್ಲ ಎಂದು ತಿಳಿಸಿದೆ.

ಖಾಸಗಿ ದೂರು ದಾಖಲಿಸಿದ ದಿನಾಂಕದಿಂದ ಮರು ವಿಚಾರಣೆ ನಡೆಸಿ, ಸೂಕ್ತ ಆದೇಶ ನೀಡುವಂತೆ ಹೈಕೋರ್ಟ್ ಆದೇಶ ನೀಡಿದೆ.

error: Content is protected !!