January 7, 2025

Newsnap Kannada

The World at your finger tips!

jarakihole

ಭಾವುಕರಾದ ರಮೇಶ್​ ಜಾರಕಿಹೊಳಿ: ಅಪರಾಧಿ ನಾನಲ್ಲ – ಅಪರಾಧ ನನ್ನದಲ್ಲ- ನಕಲಿ ಸಿಡಿ ಸೃಷ್ಟಿ

Spread the love

ಮಹಿಳೆಯೊಬ್ಬರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿರುವ ಆರೋಪ ಹಾಗೂ ಸಿ.ಡಿ ವಿವಾದದ ಹಿನ್ನೆಲೆ ರಮೇಶ್​ ಜಾರಕಿಹೊಳಿ ಮಂಗಳವಾರ ಬೆಳಿಗ್ಗೆ ದಿಢೀರ್ ಸುದ್ದಿಗೋಷ್ಟಿ ನಡೆಸಿ ಮನದಾಳದ ನೋವು ತೋಡಿಕೊಂಡರು.

ಪ್ರಕರಣ ಸಂಬಂದ ಪ್ರತಿಕ್ರಿಯಿಸಿ, ಸಿ.ಡಿ ನೂರಕ್ಕೆ ನೂರರಷ್ಟು ನಕಲಿ ಇದೆ. ನಾನು ನಿರಪರಾಧಿ,ಅಪರಾಧ ಮಾಡಿಲ್ಲ. ನನಗೆ ಹೆದರಿಕೆ ಇಲ್ಲ ಎಂದು ಹೇಳುತ್ತಾ ರಮೇಶ್ ಜಾರಕಿಹೊಳಿ ಭಾವುಕರಾದರು.

ಸುದ್ದಿಗೋಷ್ಠಿಯಲ್ಲಿ ಹೇಳಿದ ಪ್ರಮುಖ ಅಂಶಗಳು :
  • ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ.
  • ಷಡ್ಯಂತ್ರದ ಹಿಂದೆ ನಾಲ್ಕು ಮಂದೆ ಇದ್ದಾರೆ.. ಒಬ್ಬ ಮಹಾನಾಯಕ ನನಗೆ ಸವಾಲು ಹಾಕಿದ್ದನು. ಈಗ ಆತನ ಹೆಸರು ಹೇಳುವುದಿಲ್ಲ.
  • ಒರಾಯನ್ ಮಾಲ್ ಹಾಗೂ ಹುಳಿಮಾವು ಸೇರಿ ಬೆಂಗಳೂರಿನ 4 ಕಡೆ ಷಡ್ಯಂತ್ರ ನಡೆಸಿದ್ದಾರೆ. ಇದು ನನಗೆ ಮಾನಸಿಕ ನೋವು ತಂದಿದೆ.
  • ಎಷ್ಟೇ ಪ್ರಭಾವಿಯಾಗಲೀ ಜೈಲಿಗೆ ಕಳಿಸದೇ ಬಿಡಲ್ಲ. ನಾನು ರಾಜಕಾರಣಕ್ಕೆ ಬರ್ತೀನೋ ಇಲ್ಲವೋ ಗೊತ್ತಿಲ್ಲ. ಅವರನ್ನಂತೂ ಬಿಡಲ್ಲ ಎಂಬ ಶಪಥ
  • ಯಶವಂತಪುರದ 4, 5ನೇ ಮಹಡಿಯಲ್ಲಿ ಪ್ಲಾನ್ ಮಾಡಿದ್ದಾರೆ ಎಂಬ ಮಾಹಿತಿ ಗೊತ್ತಾಗಿದೆ.
  • ಹುಡುಗಿಗೆ 50 ಲಕ್ಷ ಅಲ್ಲ, 5 ಕೋಟಿ ನೀಡಿದ್ದಾರೆ, ವಿದೇಶದಲ್ಲಿ ಕೆಲಸ ಕೊಡಿಸುವ ಆಮಿಷ ಒಡ್ಡಿದ್ದಾರೆ. ಆಕೆಗೆ ಎರಡು ಪ್ಲಾಟ್ ಕೊಡಿಸಿದ್ದಾರೆ.
  • ಈ ಪ್ರಕರಣದ ಹಿಂದೆ ಸಮ್ಮಿಶ್ರ ಸರ್ಕಾರ ಬೀಳಿಸಿದ್ದರ ಸಿಟ್ಟಲ್ಲ.. ಸರ್ಕಾರ ಬಿದ್ದ ಸಿಟ್ಟಿದ್ದರೆ ಕುಮಾರಸ್ವಾಮಿ, ರೇವಣ್ಣ ನನ್ನ ಬಗ್ಗೆ ಯಾಕೆ ಮಾತಾಡ್ತಾರೆ?
  • ನನಗೆ ರಾಜಕಾರಣದ ಚಿಂತೆಯಿಲ್ಲ, ನನ್ನ ಕುಟುಂಬದ ಮರ್ಯಾದೆ ವಾಪಸ್​ ಸಿಗಬೇಕಷ್ಟೇ.
  • ನನ್ನ ವಿರೋಧಿಗಳಿಗೆ ಇದೊಂದು ದೊಡ್ಡ ಅಸ್ತ್ರ. ವೈರಿಗಳು ಸಾವಿರ ಕೋಟಿ ಖರ್ಚು ಮಾಡಿದ್ರೂ ನಮ್ಮನ್ನು ಸೋಲಿಸಲು ಆಗಲ್ಲ.
Copyright © All rights reserved Newsnap | Newsever by AF themes.
error: Content is protected !!