January 16, 2025

Newsnap Kannada

The World at your finger tips!

cd

ರಮೇಶ್ ಜಾರಕಿಹೊಳಿ ಹೆಸರು ಬರೆದು ಸಾಯಬೇಕು ಅನಿಸುತ್ತದೆ – ಸಿಡಿ ಲೇಡಿ ಈ ಬೆಳಿಗ್ಗೆ ಮತ್ತೊಂದು ವಿಡಿಯೋ ರಿಲೀಸ್

Spread the love

ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣದ ಸಿಡಿ ಯುವತಿಯ ಶನಿವಾರ ಬೆಳ್ಳಂಬೆಳಗ್ಗೆ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದಾಳೆ.

ರಮೇಶ್ ಜಾರಕಿಹೊಳಿ ಹೆಸರು ಬರೆದು ಸಾಯಬೇಕು ಅನಿಸುತ್ತದೆ . ಅಷ್ಟೊಂದು ಕಿರುಕುಳವಾಗುತ್ತಿದೆ. ನನಗೆ ನ್ಯಾಯ ಕೊಡಿಸಿ ಎಂದು ಆ ಯುವತಿ ವಿಡಿಯೋದಲ್ಲಿ ಮನವಿ ಮಾಡಿದ್ದಾಳೆ.

ರಮೇಶ್ ಜಾರಕಿಹೊಳಿ ಒಂದೇ ದಿನದಲ್ಲಿ ಸರ್ಕಾರ ಬೀಳಿಸುತ್ತೇನೆ ಎಂದು ಹೇಳುತ್ತಾರೆ. ಎಷ್ಟು ಹಣ ಖರ್ಚಾದರೂ ಪರವಾಗಿಲ್ಲ ಎಲ್ಲರನ್ನೂ ಜೈಲಿಗೆ ಹಾಕಿಸುವುದಾಗಿಯೂ ಹೇಳುತ್ತಾರೆ. ಅವರು ಈ ರೀತಿಯಾಗಿ ಹೇಳುತ್ತಾರೆಂದರೆ ಏನು ಅರ್ಥ? ಜನರೇ ಈ ಮಾತುಗಳನ್ನು ಅರ್ಥ ಮಾಡಿಕೊಳ್ಳ ಬೇಕು.

ನಮ್ಮ ತಂದೆ, ತಾಯಿ ತಲೆ ಬೇಕಿದ್ದರೂ ತೆಗೆಯಬಹುದು. ನಾಳೆ ದಿನ ನನ್ನನ್ನೇ ಸಾಯಿಸಬಹುದು. ಏನಾಗುತ್ತೆಂದು ಯಾರಿಗೂ ಗೊತ್ತಿಲ್ಲ. ನಾನು ಹೇಳಿಕೆ ನೀಡಬೇಕಾದರೆ ಪೋಷಕರು ಇರಬೇಕು. ನನ್ನ ಕಣ್ಣು ಮುಂದೆ ತಂದೆ, ತಾಯಿ, ಅಜ್ಜಿ ಸಹೋದರಿರಬೇಕು.’ನನ್ನ ಪೋಷಕರಿಗೆ ಯಾವುದೇ ರೀತಿಯ ರಕ್ಷಣೆ ಇಲ್ಲ ಎಂದು ಯುವತಿ ಹೇಳಿದ್ದಾಳೆ.

ವಿಡಿಯೋದಲ್ಲಿ ಹೇಳಿದ್ದೇನು? :

ಮಾರ್ಚ್ 2 ರಂದು ಸಿಡಿಯನ್ನು ಯಾರು ರಿಲೀಸ್ ಮಾಡಿದರೆಂದು ಗೊತ್ತಿಲ್ಲ. ಮಾಧ್ಯಮಗಳಲ್ಲಿ ವಿಡಿಯೋ ಬರುತ್ತಿರುವುದನ್ನು ನೋಡಿ ಕರೆ ಮಾಡಿದರು. ನಾನು ನರೇಶ್ ಅಣ್ಣಗೆ ಕರೆ ಮಾಡಿ ಮಾತನಾಡಿದ್ದೆ. ಏನು ಮಾಡಲಿ ಅಣ್ಣಾ ಎಂದು.

ಈ ವಿಚಾರದಲ್ಲಿ ನಾನು ತುಂಬಾ ಚಿಕ್ಕವನು ಎಂದಿದ್ದರು. ಇದಕ್ಕೆ ರಾಜಕೀಯ ಬೆಂಬಲ ಬೇಕು. ದೊಡ್ಡವರ ಜತೆ ಮಾತಾಡೋಣ ಎಂದು ಹೇಳಿದ್ದರು. ಸಿದ್ದರಾಮಯ್ಯ, ಡಿಕೆಶಿ ಜತೆ ಮಾತನಾಡೋಣ ಎಂದಿದ್ದರು. ಅವರ ಜತೆ ಮಾತನಾಡಿದರೆ ನ್ಯಾಯ ಸಿಗುತ್ತೆಂದು ಎಂದು ಹೇಳಿ, ನಾನಿರುವ ಜಾಗಕ್ಕೆ ನರೇಶ್ ಅಣ್ಣ ಬಂದಿದ್ದರು. ಡಿ.ಕೆ.ಶಿವಕುಮಾರ್ ಮನೆಗೆ ಹೋಗೋಣ ಎಂದಿದ್ದರು.

ಆ ಸಮಯದಲ್ಲಿ ನಮ್ಮ ಮನೆಯಿಂದ ಪದೇಪದೆ ಕರೆಮಾಡುತ್ತಿದ್ದರು. ನಮ್ಮ ಮನೆಯವರು ಅಳುವುದು ಕೇಳಿ ಭಯವಾಯಿತು. ಅವರ ಜೀವಕ್ಕೆ ಏನಾದರು ಆಗುತ್ತೆಂಬ ಭಯ ನನಗಿತ್ತು. ಆಗ ನಮ್ಮ ಪೋಷಕರನ್ನು ನಾನು ಸಮಾಧಾನ ಮಾಡಿದ್ದೆ. ಡಿಕೆಶಿ ಮನೆಗೆ ಹೋಗುತ್ತಿದ್ದೇನೆಂದು ಅವರಿಗೆ ಹೇಳಿದ್ದೆ. ನಾವು ಡಿಕೆಶಿ ಮನೆಯ ಬಳಿ ಹೋಗಿದ್ದೆವು. ಆದರೆ ಅವರು ಸಿಕ್ಕಿರಲಿಲ್ಲ. ನಾನು ಸೇಫಾಗಿದ್ದೇನೆ, ನಾನು ಕಿಡ್ನ್ಯಾಪ್ ಆಗಿಲ್ಲ. ನಮ್ಮ ಪೋಷಕರು ಎಲ್ಲಿದ್ದಾರೆಂದು ನನಗೆ ಗೊತ್ತಿಲ್ಲ.

ನಮ್ಮ ತಂದೆ, ತಾಯಿ, ಅಜ್ಜಿ, ಸಹೋದರರನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಅವರನ್ನು ರಕ್ಷಣೆ ನೀಡಿ. ಎಸ್‌ಐಟಿ ಅಧಿಕಾರಿಗಳ ಬಳಿ ಮನವಿ ಮಾಡಿದ ಯುವತಿ ಕಳೆದ 24 ದಿನಗಳಿಂದ ತುಂಬಾ ಟಾರ್ಚರ್ ಆಗುತ್ತಿದೆ. ನಾನು ಏನೇ ಹೇಳಲು ಬಂದರೂ ಅದು ರಿವರ್ಸ್ ಆಗುತ್ತಿದೆ. ನನ್ನ ಮಾನ, ಮರ್ಯಾದೆ ಹೋಗಿದೆ, ನ್ಯಾಯ ಸಿಗಬೇಕು. ನಾನು ಸಂತ್ರಸ್ತೆಯಾಗಿರುವುದರಿಂದ ನ್ಯಾಯ ಸಿಗಬೇಕು ಎಂದು ವಿಡಿಯೊದಲ್ಲಿ ಯುವತಿ ಹೇಳಿಕೆ ನೀಡಿದ್ದಾಳೆ.

Copyright © All rights reserved Newsnap | Newsever by AF themes.
error: Content is protected !!