ಮಹಿಳೆಯರ ಬಗ್ಗೆ ರಮೇಶ್ ಕುಮಾರ್ ಈ ಮೊದಲೂ ಅವಹೇಳನಕಾರಿ ಹೇಳಿದ್ದರು…..

Team Newsnap
1 Min Read

ರಮೇಶ್ ಕುಮಾರ್ ರೇಪ್ ಕುರಿತಂತೆ ಸದನದಲ್ಲಿ ಮಾತಾಡಿರುವುದು ಇದೇ ಮೊದಲಲ್ಲ.

2019ರ ಫೆಬ್ರವರಿ 12ರಂದು ಸ್ಪೀಕರ್ ಕುರ್ಚಿಯಲ್ಲಿ ಕುಳಿತೇ ರೇಪ್ ಕುರಿತಾಗಿ ಹೆಣ್ಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದರು.

ಇದನ್ನೆಲ್ಲಾ ಕೇಳಿಸಿಕೊಂಡು, ಇಂದು ಖಂಡನೆ ಮಾಡಿದ್ದವರೆಲ್ಲಾ ಅಂದು ಜೋರಾಗಿ ನಕ್ಕಿದ್ದರು.

ರೇಪ್ ಆದವರು ಸುಮ್ಮನಾಗಬೇಕಿತ್ತು. ಕೋರ್ಟ್ ಮೆಟ್ಟಿಲೇರುತ್ತಾರೆ. ಅಲ್ಲಿ ಅವರಿಗೆ ನಾನಾ ಪ್ರಶ್ನೆ ಹಾಕುತ್ತಾರೆ. ಇದ್ರಿಂದ ನೂರು ಬಾರಿ ರೇಪ್ ಆದಂಗೆ ಆಗುತ್ತೆ. ಇಲ್ಲಿ ನನ್ನ ಪರಿಸ್ಥಿತಿಯೂ ಅಂಥಾದ್ದೆ ಎಂದು ಸ್ಪೀಕರ್ ಸ್ಥಾನದಲ್ಲಿದ್ದ ರಮೇಶ್ ಕುಮಾರ್ ಹೇಳಿದ್ದರು.

ಸ್ಪೀಕರ್ ಸ್ಥಾನಕ್ಕೂ ,ರೇಪ್ ಹೋಲಿಕೆ ಮಾಡಲು ಅಂದು ರಮೇಶ್ ಕುಮಾರ್ ಯಾಕೆ ಮತ್ತು ಯಾರು ಪ್ರೇರಣೆಯಾದರು ಎಂಬುದೇ ದೊಡ್ಡ ಪ್ರಶ್ನೆ .

ರಮೇಶ್ ಕುಮಾರ್ ಪದೇ ಪದೇ ತಪ್ಪು ಮಾಡಿ ಕ್ಷಮೆ ಕೇಳಿದರೆ ಆಡಿದ ಮಾತು, ಮಾಡಿದ ತಪ್ಪು ಮುಚ್ಚಿ ಹೋಗುತ್ತದೆಯೇ? ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡುವ ಮುನ್ನ ತಮ್ಮ ಮನೆಯ ಮಹಿಳೆಯರನ್ನೂ ಈ ರಮೇಶ್ ಕುಮಾರ್ ನೆನಪಿಸಿಕೊಳ್ಳಬೇಕಿತ್ತು.
ಸಂದಭ೯ದ ಲಾಭ ಪಡೆದುಕೊಂಡು ಸದನದಲ್ಲಿ ಪಾಂಡಿತ್ಯದ ಜ್ಞಾನ ಪ್ರದಶ೯ನಕ್ಕೆ ಹೋದರೆ ಇಂತಹ ಎಡವಟ್ಟುಗಳು ಆಗುತ್ತವೆ.

ರಮೇಶ್ ಕುಮಾರ್ ಗೆ ಅಪಾರ ಅನುಭವ , ಜ್ಞಾನ, ತಿಳುವಳಿಕೆ ಎಲ್ಲವೂ ಇದೆ. ರೇಪ್ ಕುರಿತು ವ್ಯಾಖ್ಯಾನ ಏನೇ ಇರಬಹುದು. ರಮೇಶ್ ಕುಮಾರ್ ಹೇಳುವ ಮಾತಲ್ಲ. ಖಂಡನೆ ವ್ಯಕ್ತವಾಗಿದೆ. ಮಹಿಳಾ ಲೋಕ ಮಂಗಳಾರತಿ ಮಾಡಿದ ನಂತರವೂ ಬುದ್ದಿ ಕಲಿಯಲಿಲ್ಲ ಎಂದರೆ ಬೇರೆ ಏನೂ ಹೇಳುವುದು ಅಸಾಧ್ಯ.

Share This Article
Leave a comment