January 14, 2025

Newsnap Kannada

The World at your finger tips!

jarakihole

ರಮೇಶ್ ಜಾರಕಿಹೊಳಿ ವಿರುದ್ದ ಸಿಡಿ ಲೇಡಿ ದೂರು – ಲೈಂಗಿಕ ದೌರ್ಜನ್ಯ, ಕೊಲೆ ಬೆದರಿಕೆ , ಹಣ ಆಮಿಷ ಆರೋಪ

Spread the love

ಕೊನೆಗೂ ಸಿಡಿ ಲೇಡಿ‌ ಅಜ್ಞಾತ ಸ್ಥಳದಿಂದಲೇ ತನ್ನ ವಕೀಲರ ಮೂಲಕ ಪೋಲಿಸ್ ಕಮೀಶನರ್ ಕಮಲ್ ಪಂಥ‌್ ಅವರಿಗೆ , ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ದ ನಡೆಸಿದರು ಎನ್ನಲಾದ ಲೈಂಗಿಕ ದೌರ್ಜನ್ಯ , ಕೊಲೆ ಬೆದರಿಕೆ ದೂರು ನೀಡಿದ್ದಾಳೆ.

ಯುವತಿ ತನ್ನ ಸ್ವ ಹಸ್ತದಿಂದ ಬರೆದ ಎರಡು ಪುಟಗಳ ದೂರನ್ನು ವಕೀಲ ಜಗದೀಶ್ ಅವರು, ಕಮೀಶನರ್ ಅವರಿಗೆ ತಲುಪಿದರು.

ದೂರು ಸ್ವೀಕರಿಸಿದ ಆಯುಕ್ತ ಪಂಥ್, ವಕೀಲರ ಬಳಿ ಕೆಲವು ಮಾಹಿತಿ ಪಡೆದುಕೊಂಡ ನಂತರ ದೂರನ್ನು ಕಬ್ಬನ್ ಪಾಕ್ ೯ ಪೋಲಿಸ್ ಠಾಣೆಗೆ ದೂರು ದಾಖಲಿಸುವಂತೆ ಸೂಚಿಸಿದ್ದಾರೆ.

ದೂರಿನ‌ಲ್ಲಿರುವ ಪ್ರಮುಖ ಅಂಶಗಳೇನು ?

1 ಬೆಂಗಳೂರಿನ ತಮ್ಮ ನಿವಾಸದಲ್ಲೇ ನನ್ನನ್ನು ಎರಡು ಬಾರಿ ಲೈಂಗಿಕವಾಗಿ ಬಳಕೆ ಮಾಡಿಕೊಂಡು ವಂಚನೆ ಮಾಡಿದ್ದಾರೆ.

  1. ಸರ್ಕಾರಿ ಕೆಲಸ ಕೊಡಿಸುವ ಆಮಿಷ ಒಡ್ಡಿ ನಂತರ ನನ್ನನ್ನು ಬಳಕೆ ಮಾಡಿಕೊಂಡು, ಕೆಲಸ ಕೊಡಿಸಲಿಲ್ಲ

3 ದೆಹಲಿ ಕರ್ನಾಟಕ ಭವನದಿಂದಲೇ ವಿಡಿಯೋ ಕಾಲ್ ಮಾಡಿ ಅಶ್ಲೀಲವಾಗಿ ಮಾತನಾಡಿದರು.

4 ನನ್ನನ್ನು ಬಳಕೆ ಮಾಡಿ ವಂಚಿಸಿ, ನಂತರ ಹಣದ ಆಮಿಷ ಒಡ್ಡಿದರು.

5 ನಾನು ಪೋಲಿಸರಿಗೆ ದೂರು ನೀಡಿದರೆ ಜೀವ ಬೆದರಿಕೆ ಹಾಕಿದ್ದರು.

6 ನನ್ನ ರಕ್ಷಣೆ ಬಂದವರಿಗೂ ಕೂಡ ಜೀವ ಬೆದರಿಕೆ ಹಾಕಿದ್ದಾರೆ.

WhatsApp Image 2021 03 26 at 3.11.37 PM
WhatsApp Image 2021 03 26 at 3.11.38 PM
Copyright © All rights reserved Newsnap | Newsever by AF themes.
error: Content is protected !!