January 9, 2025

Newsnap Kannada

The World at your finger tips!

maheshkumtalli 1548401997

ರಮೇಶ್ ಜಾರಕಿಹೊಳಿ ಕತ್ತಲ್ಲಿದ್ದ ಮಚ್ಚೆಯೇ ಇಲ್ಲ: ಶಾಸಕ ಕುಮಟಳ್ಳಿ

Spread the love

ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವೀಡಿಯೋದಲ್ಲಿ ರಮೇಶ್ ಜಾರಕಿಹೊಳಿ ಕತ್ತಿನಲ್ಲಿರುವ ಮಚ್ಚೆ ಕಾಣಿಸುತ್ತಿಲ್ಲ. ಕತ್ತಿನಲ್ಲೊಂದು ಮಚ್ಚೆ ಇದೆ ಎಂಬುದು ನನಗೆ ಗೊತ್ತು. ವಿಡಿಯೋ ದಲ್ಲಿ ಮಚ್ಚೆ ಕಾಣುತ್ತಿಲ್ಲ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿದರು.

ಬೆಂಗಳೂರಿನ. ಸದಾಶಿವನಗರದಲ್ಲಿರುವ ಜಾರಕಿಹೊಳಿಯವರ ಭಾಗ್ಯಲಕ್ಷೀ ನಿವಾಸಕ್ಕೆ ಆಗಮಿಸಿದ ಮಹೇಶ್ ಕುಮಟಳ್ಳಿ ಮಾಧ್ಯಮಗಳೊಂದಿಗೆ ಮಾತನಾಡಿ ಈ ಘಟನೆ ನೋಡಿದಾಗ ನಮಗೂ ಆಶ್ಚರ್ಯವಾಯಿತು. ಜಾರಕಿಹೊಳಿ ಒಬ್ಬ ದೈವ ಭಕ್ತರು. ಇವರಿಗೆ ಏನಾಗಿದೆ ಇದು ನಿಜವೇ ಅಥವಾ ಸುಳ್ಳಾ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದರು.

ಜಾರಕಿಹೊಳಿಯವರು ಇದು ಫೇಕ್ ವಿಡಿಯೋ ಎಂದು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ. ಆದರೂ ಆ ವಿಡಿಯೋವನ್ನು ಗಮನಿಸಿದಾಗ ಪೂರ್ವನಿಯೋಜಿತ ಕೃತ್ಯದಂತೆ ಕಂಡುಬರುತ್ತಿದೆ ಎಂದರು.

ದೃಶ್ಯಗಳನ್ನು ಗಮನಿಸಿದರೆ ಇದೂ ಪೂರ್ವನಿಯೋಜಿತ ಕೃತ್ಯವಾಗಿ ಗೋಚರಿಸುತ್ತಿದೆ. ಮತ್ತೆ ಈ ದೃಶ್ಯವನ್ನು ಯಾರು ಚಿತ್ರಿಸಿದ್ದಾರೆ ಎಂದು ತನಿಖೆಯಾಗಬೇಕು. ಅ ವಿಡಿಯೋವನ್ನು ಗಮನಿಸಿದಾಗ ಅದು ಎಡಿಟ್ ಆಗಿರುವಂತೆ ಕಂಡು ಬರುತ್ತಿದೆ. ಇದರಿಂದ ನಮಗೆ ಮತ್ತು ಅವರ ಕುಟುಂಬದವರಿಗೆ ನೋವಾಗಿದೆ ಈ ನೋವಿಗೆ ಯಾರು ಬೆಲೆ ಕಟ್ಟುತ್ತಾರೆ ಎಂದು ಪ್ರಶ್ನಿಸಿದರು.

Copyright © All rights reserved Newsnap | Newsever by AF themes.
error: Content is protected !!