December 24, 2024

Newsnap Kannada

The World at your finger tips!

rockline

ಬಿಬಿಎಂಪಿ ಗೆ ರಾಕ್ ಲೈನ್ ತೆರಿಗೆ ವಂಚನೆ ಮಾಡಿದ್ದಾರೆ – ರಮೇಶ್ ಆರೋಪ

Spread the love

ಕನ್ನಡ ಚಿತ್ರರಂಗದ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ತಪ್ಪು ಆಸ್ತಿ ಲೆಕ್ಕ ನೀಡಿ ಪಾಲಿಕೆಗೆ ಕೋಟಿ ಕೋಟಿ ತೆರಿಗೆಯನ್ನು ವಂಚಿಸಿದ್ದಾರೆ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಆರೋಪಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ರಮೇಶ್ ಈ ಕುರಿತಂತೆ ದಾಖಲೆಗಳ ಸಮೇತ ಪಾಲಿಕೆ ಆಯುಕ್ತರಿಗೆ ಎನ್​ಆರ್​ ರಮೇಶ್ ದೂರು ಕೂಡ ಕೊಟ್ಟಿದ್ದಾರೆ. 

ಜಾಲಹಳ್ಳಿ ಕ್ರಾಸ್​​ ಬಳಿಯಿರುವ ರಾಕ್ ಲೈನ್ ಮಾಲ್​ನಿಂದ ತೆರಿಗೆ ವಂಚನೆ ಮಾಡಲಾಗಿದೆ. 2012-13 ರಿಂದ ಆಸ್ತಿಯ ವಿಸ್ತೀರ್ಣದಲ್ಲಿ ತಪ್ಪು ಲೆಕ್ಕ ತೋರಿಸಿ ಕೋಟಿಗಟ್ಟಲೇ ತೆರಿಗೆ ವಂಚನೆ ಮಾಡಿದ್ದಾರೆ ಎಂದು ಎನ್​ಆರ್ ರಮೇಶ್ ದೂರಿದರು.

ಟಾಪ್ 100 ತೆರಿಗೆ ವಂಚಕರ ಪಟ್ಟಿಯಲ್ಲೂ ರಾಕ್ ಲೈನ್ ಹೆಸರು ಕಂಡು ಬಂದಿಲ್ಲ.‌ ಇದು ಸಾಕಷ್ಟು ಸಂಶಯಕ್ಕೆ ಕಾರಣವಾಗಿದೆ. ರಾಕ್​ಲೈನ್​ ತೆರಿಗೆ ವಂಚನೆ ಮಾಡಿರುವ ಕುರಿತ ದಾಖಲೆಗಳನ್ನು ಬಿಡುಗಡೆ ಮಾಡಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತರಿಗೆ ದಾಖಲೆಗಳೊಂದಿಗೆ ರಮೇಶ್ ದೂರು ನೀಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!