December 29, 2024

Newsnap Kannada

The World at your finger tips!

5b1b2bc4 a2dc 45e7 8a21 46d8bb7eb6a9

ಪ್ರೇಮಕುಮಾರಿ ಪ್ರೇಮ‌ ಪ್ರಕರಣ : ಶಾಸಕ ರಾಮದಾಸ್ ಗೆ ನಿರೀಕ್ಷಣಾ ಜಾಮೀನು ಮಂಜೂರು

Spread the love

ಪ್ರೇಮ ಕುಮಾರಿ ಎಂಬ ಮಹಿಳೆ ಜೊತೆ ಪ್ರೀತಿ – ಪ್ರೇಮ ಪ್ರಕರಣದ ಆರೋಪ ಹೊತ್ತಿದ್ದ ಶಾಸಕ ರಾಮದಾಸ್ ಗೆ ಜಿಲ್ಲಾ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯವ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಪ್ರೇಮ ಕುಮಾರಿ ಹಾಗೂ ರಾಮದಾಸ್ ನಡುವೆ ಅಂಕುರಿಸಿದ್ದ ಪ್ರೇಮ ಕೊನೆಗೆ ಸಾಕಷ್ಟು ವಿವಾದ ಸೃಷ್ಟಿಯಾಯಿತು. ಕೊನೆಗೆ ಪೋಲಿಸ್ ಠಾಣೆ ಮೆಟ್ಟಿಲೇರಿತ್ತು.

ಈ ನಡುವೆ ಪ್ರೇಮಕುಮಾರಿ ರಾಮದಾಸ್ ವಿರುದ್ಧ ಮಾಡಿದ್ದ ಆರೋಪದಲ್ಲಿ ಯಾವುದೇ ಹುರಳಿಲ್ಲ ಎಂದು ಸರಸ್ವತಿ ಪುರಂ ಪೋಲಿಸರು ಬಿ ರಿಪೋರ್ಟ್ ಹಾಕಿ ಕೇಸ್ ಕ್ಲೋಸ್ ಮಾಡಿದ್ದರು.‌

ಪೋಲಿಸರು ಸಲ್ಲಿಸಿದ ಬಿ ರಿಪೋರ್ಟ್ ಅನ್ನು ನ್ಯಾಯಾಲಯವು ತಿರಸ್ಕರಿಸಿತು. ಅಲ್ಲದೇ ಸಮನ್ಸ್ ಜಾರಿ ಮಾಡಿತ್ತು. ಈ ಸಮನ್ಸ್ ರದ್ದು ಮಾಡುವಂತೆ ರಾಮದಾಸ್ ಹೈ ಕೋಟ್೯ ಮೊರೆ ಹೋದಾಗ ಹೈಕೋರ್ಟ್ ಅರ್ಜಿಯನ್ನು ನಿರಾಕರಿಸಿತು.

ನಂತರ ರಾಮದಾಸ್ ಜಿಲ್ಲಾ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದರು. ಅರ್ಜಿ ಪರಿಶೀಲನೆ ಮಾಡಿ, 50 ಸಾವಿರ ರು ಮೊತ್ತದ ವೈಯಕ್ತಿಕ ಬಾಂಡ್ ಪಡೆದು ಜಾಮೀನು ಮಾಡಿದೆ.

Copyright © All rights reserved Newsnap | Newsever by AF themes.
error: Content is protected !!