January 11, 2025

Newsnap Kannada

The World at your finger tips!

leela govind raj

ಕೊರೋನಾ ಸೋಂಕಿಗೆ ಬಲಿಯಾದ ರಾಮನಗರ ನಗರಸಭೆಯ ಕಾಂಗ್ರೆಸ್ ಅಭ್ಯರ್ಥಿ ಲೀಲಾ ಚುನಾವಣೆಯಲ್ಲಿ ಗೆಲುವು

Spread the love

ನಿನ್ನೆ ಕೊರೋನಾ ಸೋಂಕಿನಿಂದ ಮೃತಪಟ್ಟ ರಾಮನಗರ ನಗರಸಭೆ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.‌

ರಾಮನಗರ ನಗರಸಭೆ ಚುನಾವಣೆಯ ಮತಎಣಿಕೆ ಶುಕ್ರವಾರ ಆರಂಭವಾಗಿದೆ. 4ನೇ ವಾರ್ಡ್​ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೀಲಾ ಗೋವಿಂದರಾಜು (42) ಗೆಲುವು ಸಾಧಿಸಿದವರು.‌

ಈ ಗೆಲುವಿನ ಸಂಭ್ರಮಾಚರಣೆ ಮಾಡಲು ಅಭ್ಯರ್ಥಿಯೇ ಇಲ್ಲ.
ಇಂದು ನಡೆದ ಮತಎಣಿಕೆಯಲ್ಲಿ ಲೀಲಾ ಗೋವಿಂದರಾಜು 917 ಮತಗಳನ್ನು ಪಡೆದು 810 ಮತಗಳ  ಅಂತರದಿಂದ ಗೆಲವು ಪಡೆದಿದ್ದಾರೆ‌.

ಪ್ರತಿಸ್ಪರ್ಧಿ ಜೆಡಿಎಸ್ ಅಭ್ಯರ್ಥಿ ಕೇವಲ 107 ಮತಗಳನ್ನು ಪಡೆದಿದ್ದಾರೆ.

ಏಪ್ರಿಲ್ 27 ರಂದು ನಗರಸಭೆ ಚುನಾವಣೆಯ ಮತದಾನ ನಡೆದಿತ್ತು. ಈ ಮಧ್ಯೆ ಕೊರೊನಾ ಸೋಂಕಿಗೆ ತುತ್ತಾಗಿದ್ದ ಲೀಲಾ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಿನ್ನೆ ಸಾವನಪ್ಪಿದ್ದರು.

Copyright © All rights reserved Newsnap | Newsever by AF themes.
error: Content is protected !!