ಇನ್ನೊಂದು ತಿಂಗಳಲ್ಲಿ ಕರೋನಾಗೆ ರಾಮಬಾಣ ಡಿ ಆರ್ ಡಿ ಓ ಔಷಧಿ ಮಾರುಕಟ್ಟೆಗೆ ?

Team Newsnap
1 Min Read

ಕೊರೋನಾ ಸೋಂಕಿತರನ್ನು ಶೀಘ್ರ ಮುಖರಾಗುವಂತೆ ಮಾಡಲು
ಬಹು ನಿರೀಕ್ಷಿತ ಡಿಆರ್‌ಡಿಒನ ‘2ಡಿ ಆಕ್ಸಿ, ಡಿ-ಗ್ಲುಕೋಸ್‌ (2-ಜಿಡಿ) ಔಷಧವು ಇನ್ನೊಂದು ತಿಂಗಳಲ್ಲಿ ಬಳಕೆಗೆ ಲಭ್ಯವಾಗುವ ಸಾಧ್ಯತೆ ಇದೆ.

ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ 2-ಜಿಡಿ ಔಷಧದ ಬಗ್ಗೆ ಮಾಹಿತಿ ನೀಡಿರುವ ವಿಜ್ಞಾನಿ ಡಾ.ಸುಧೀರ್‌ ಚಂದನಾ, ‘ನಮಗಿರುವ ಮಾಹಿತಿ ಪ್ರಕಾರ, ಔಷಧದ ಉತ್ಪಾದನೆಗೆ ಯಾವುದೇ ತೊಂದರೆ ಇಲ್ಲ. ಅದಕ್ಕೆ ಅಗತ್ಯವಾದ ಕಚ್ಚಾ ಸಾಮಗ್ರಿಗಳು ಕೂಡಾ ಸಾಕಷ್ಟುಪ್ರಮಾಣದಲ್ಲಿ ದೇಶದಲ್ಲೇ ಲಭ್ಯವಿದೆ. ಔಷಧಿ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಾವು ಈಗಾಗಲೇ ಹೈದ್ರಾಬಾದ್ ಡಾ.ರೆಡ್ಡೀಸ್‌ ಲ್ಯಾಬ್‌ ಜೊತೆ ಜಂಟಿಯಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು

1620471938 untitled design 2021 05 08t163530 194

ಔಷಧಿ ಯಾವಾಗ ಲಭ್ಯ? ಪರಿಣಾಮ ಹೇಗೆ?

  • ಮೊದಲ ಔಷಧವು ಕೆಲ ವಾರಗಳಲ್ಲಿ ಅಥವಾ ತಿಂಗಳ ಒಳಗೆ ಸೋಂಕಿತರ ಬಳಕೆಗೆ ಲಭ್ಯ ಸಾಧ್ಯತೆ.
  • ಆಸ್ಪತ್ರೆ ಸೇರಿರುವ ಸೋಂಕಿತರು 2-ಡಿಜಿ ಔಷಧ ಸೇವಿಸಿದಾಗ ಅವರು ಚೇತರಿಸಿಕೊಳ್ಳುವ ಪ್ರಮಾಣ ಅಧಿಕ
  • ರೋಗಿಗೆ ಆಕ್ಸಿಜನ್‌ ಮೇಲಿನ ಅವಲಂಬನೆಯ ಕಡಿಮೆಯಾಗಲಿದೆ.
  • ಔಷಧವನ್ನು ತುರ್ತು ಬಳಕೆ ಮಾಡಲು ಡಿಜಿಸಿಐ ಇತ್ತೀಚೆಗೆ ಅನುಮೋದಿಸಿದೆ.

ದುಡ್ಡು ಎಷ್ಟು ?

  • ಪೌಡರ್‌ ರೂಪದಲ್ಲಿರುವ ಈ 2-ಡಿಜಿ ಕೋವಿಡ್‌ ಔಷಧದ ಒಂದು ಪ್ಯಾಕ್‌ ಬೆಲೆ 500-600 ರು. ಇರಬಹುದು.

ಔಷಧಿ ಕೆಲಸ ಹೇಗೆ?

  • ಆಸ್ಪತ್ರೆಗೆ ದಾಖಲಾಗಿರುವ ಕೋವಿಡ್‌ ರೋಗಿಗಳಿಗೆ 2ಡಿಜಿ ಔಷಧ ನೀಡಬಹುದು
  • ಇದು ವೈರಸ್ಸನ್ನು ಕೊಲ್ಲುವುದಿಲ್ಲ, ಬದಲಿಗೆ ಅದರ ಶಕ್ತಿಯನ್ನು ಕುಗ್ಗಿಸುತ್ತದೆ
  • ರೋಗಿಗಳು 3 ದಿನ ಬೇಗ ಗುಣಮುಖರಾಗುವ ಸಾಧ್ಯತೆ
  • ದೇಹದಲ್ಲಿ ಆಕ್ಸಿಜನ್‌ ಕೊರತೆ ನೀಗಿಸುತ್ತಿದೆ.
  • ಈ ಔಷಧದ ಉತ್ಪಾದನೆ ಸುಲಭ ಹಾಗೂ ಕಚ್ಚಾವಸ್ತುಗಳೂ ಸಾಕಷ್ಟು ಲಭ್ಯ
Share This Article
Leave a comment