ಶ್ರೀರಾಮ ದೇವರೇ ಅಲ್ಲ ಎಂದು ಹೇಳಿ ಹಿಂದೂ ದೇವತೆಗಳಿಗೆ ಬಗ್ಗೆ ಸದಾ ಅಪಮಾನ ಮಾಡುತ್ತಿರುವ ವಿಚಾರವಾದಿ ಪ್ರೋ. ಕೆ ಎಸ್ ಭಗವಾನ್ ಅಚ್ಚರಿಯ ಸಂಗತಿ ಹೊರ ಹಾಕಿದ್ದಾರೆ.
ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ನಡೆಸಲಾಗುತ್ತಿರುವ ರಾಮ ಜನ್ಮಭೂಮಿ ನಿಧಿ ಸಮರ್ಪಣಾ ಅಭಿಯಾನವನ್ನು ವಿಚಾರವಾದಿ ಕೆ.ಎಸ್. ಭಗವಾನ್ ಬೆಂಬಲಿಸಿದ್ದಾರೆ.
ಮೈಸೂರಿನ ಕುವೆಂಪುನಗರದ ಮನೆಗೆ ತೆರಳಿದ ಆರ್ ಎಸ್ ಎಸ್ ಕಾರ್ಯಕರ್ತರು, ನಿಧಿ ಸಮರ್ಪಣಾ ಅಭಿಯಾನದ ಮಾಹಿತಿ ಪುಸ್ತಿಕೆ ನೀಡಿದರು.
ಆರ್ ಎಸ್ ಎಸ್ ಕಾರ್ಯಕರ್ತರ ಜೊತೆ ಸೌಜನ್ಯತೆಯಿಂದ ವರ್ತಿಸಿದ ಕೆ.ಎಸ್. ಭಗವಾನ್, ನಿಧಿ ಸಮರ್ಪಣಾ ಅಭಿಯಾನ ಮುಂದುವರಿಯಲಿ, ಆದಷ್ಟು ಬೇಗ ಅಭಿಯಾನ ಮುಗಿಸಿ ಅಂತಾ ಸಲಹೆ ನೀಡಿದರು.
ಶ್ರೀರಾಮ ಅಸ್ತಿತ್ವದ ಬಗ್ಗೆ ಪದೇ ಪದೇ ಟೀಕಿಸಿ ವಿವಾದ ಸೃಷ್ಟಿಸಿದ್ಧ ಪ್ರೊ. ಕೆ.ಎಸ್ ಭಗವಾನ್ ಸಂಘ ಪರಿವಾರದ ಅಭಿಯಾನಕ್ಕೆ ನೈತಿಕ ಬೆಂಬಲ ಸೂಚಿಸಿ ಅಚ್ಚರಿ ಮೂಡಿಸಿದ್ದಾರೆ.
ಕಾಶ್ಮೀರದದಲ್ಲಿನ 370ನೇ ವಿಧಿ ರದ್ದು ಮಾಡಿದ್ದ ಪ್ರಧಾನಿ ಮಂದಿಯನ್ನು ಕೆ.ಎಸ್. ಭಗವಾನ್ ಬೆಂಬಲಿಸಿದ್ದನ್ನು ಸ್ಮರಿಸಬಹುದು.
- ಮೈಸೂರಲ್ಲಿ ಹೊಸ ವರ್ಷಾಚರಣೆಗೆ ಪೊಲೀಸ್ ಮಾರ್ಗಸೂಚಿ ಜಾರಿ
- KSDL ನೌಕರ ಕೈಯಲ್ಲಿ ಡೆತ್ ನೋಟ್ ಹಿಡಿದು ಆತ್ಮಹತ್ಯೆ: ಕೆಲಸದ ಒತ್ತಡವೇ ಕಾರಣ?
- ಕೆಎಎಸ್ , ಸರ್ಕಾರಿ ಉದ್ಯೋಗ ಪಾಸ್ ಮಾಡಿಸೋ ಹೆಸರಿನಲ್ಲಿ ಲಕ್ಷಾಂತರ ವಂಚನೆ: ಆರೋಪಿ ಬಂಧನ
- ಜ. 2 ರಂದು ರಾಜ್ಯ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ನಿರ್ಣಯ
- ಹೊಸ ವರ್ಷದ ಸಂಭ್ರಮ: ಜೋಗ ಜಲಪಾತ ವೀಕ್ಷಣೆಗೆ ನಿರ್ಬಂಧ ಸಡಿಲಿಕೆ
More Stories
ಮೈಸೂರಲ್ಲಿ ಹೊಸ ವರ್ಷಾಚರಣೆಗೆ ಪೊಲೀಸ್ ಮಾರ್ಗಸೂಚಿ ಜಾರಿ
KSDL ನೌಕರ ಕೈಯಲ್ಲಿ ಡೆತ್ ನೋಟ್ ಹಿಡಿದು ಆತ್ಮಹತ್ಯೆ: ಕೆಲಸದ ಒತ್ತಡವೇ ಕಾರಣ?
ಕೆಎಎಸ್ , ಸರ್ಕಾರಿ ಉದ್ಯೋಗ ಪಾಸ್ ಮಾಡಿಸೋ ಹೆಸರಿನಲ್ಲಿ ಲಕ್ಷಾಂತರ ವಂಚನೆ: ಆರೋಪಿ ಬಂಧನ