ದೀಪಾವಳಿ ಹಬ್ಬ ಮಾಡಿ : ರಾಮಜ್ಯೋತಿ ಬೆಳಗಿ- ಪ್ರಧಾನಿ ಕರೆ .
- ಆ ದಿನ ದೇಶದ ಪ್ರತಿಯೊಬ್ಬ ನಾಗರೀಕರ ಮನೆಯಲ್ಲೂ ರಾಮ ಜ್ಯೋತಿ ಬೆಳಗಿಸುವಂತೆ ಪ್ರಧಾನಿ ಮನವಿ
- ನಿಮ್ಮಂತೆಯೇ ಆ ಕ್ಷಣಕ್ಕಾಗಿ ನಾನು ಕಾಯುತ್ತಿದ್ದೇನೆ- ಪಿಎಂ ಮೋದಿ
ಅಯೋಧ್ಯೆ : ರಾಮ ಮಂದಿರ ಲೋಕಾರ್ಪಣೆ ದಿನ ಅಂದರೆ ಜನವರಿ 22 ರಂದು ದೀಪಾವಳಿಯಂತೆ ಹಬ್ಬವನ್ನು ಆಚರಿಸಿರಿ. ಆ ದಿನ ದೇಶದ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ರಾಮ ಜ್ಯೋತಿ ಬೆಳಗಿಸುವಂತೆ ಶನಿವಾರ ಪ್ರಧಾನಿ ಮೋದಿ ಕರೆ ನೀಡಿದರು .
ರಾಮನೂರಿಗೆ ಭೇಟಿ ನೀಡಿರುವ ಪ್ರಧಾನಿ ಮೋದಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಿದ್ದಾರೆ. ಈ ವಿಮಾನ ನಿಲ್ದಾಣಕ್ಕೆ ‘ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಯೋಧ್ಯಾಮ’ ಎಂದು ನಾಮಕರಣ ಮಾಡಲಾಗಿದೆ.
ನಂತರ ಅಯೋಧ್ಯೆಯಲ್ಲಿ ನಡೆದ ಭಾರಿ ಬಹಿರಂಗ ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರು ಮಾತನಾಡಿ, ಪ್ರಾಣಪ್ರತಿಷ್ಠೆ ಕಾರ್ಯಕ್ರಮ ಜನವರಿ 22 ನಡೆಯಲಿದೆ ಅದರ ಆಗಮನಕ್ಕೆ ಎಲ್ಲರೂ ಕಾಯುತ್ತಿದ್ದಾರೆ. ನಿಮ್ಮಂತೆಯೇ ಆ ಕ್ಷಣಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದರು
ಅಯೋಧ್ಯೆಯ ಅಭಿವೃದ್ಧಿಯಿಂದ ಇಲ್ಲಿನ ಜನರ ಅಭಿವೃದ್ಧಿ ಆಗಲಿದೆ. ದೇಶದಲ್ಲಿ 300ಕ್ಕೂ ಹೆಚ್ಚು ಮೆಡಿಕಲ್ ಕಾಲೇಜುಗಳನ್ನು ನಿರ್ಮಾಣ ಮಾಡಲಾಗಿದೆ. ಅಯೋಧ್ಯೆಯಲ್ಲಿ ವಿಕಾಸ ಯೋಜನೆ ಶುರುವಾಗಿದೆ ಎಂದು ಹೇಳಿದರು .ಅಯೋಧ್ಯೆ ರೈಲ್ವೇ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ
ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿ ರಾಮನ ಕಥೆ ಹೇಳುವ ವರ್ಣರಂಜಿತ ಚಿತ್ರಗಳಿಂದ ನೂತನ ವಿಮಾನ ನಿಲ್ದಾಣ ಕಂಗೊಳಿಸುತ್ತಿದೆ. ಏರ್ ಬಸ್ ಮತ್ತು ಬೋಯಿಂಗ್ ವಿಮಾನಗಳು ರನ್ ವೇಯಲ್ಲಿ ಸಂಚರಿಸಬಹುದು. ಏರ್ ಪೋರ್ಟ್ ನ ಒಳಗೋಡೆಗಳಲ್ಲಿ ರಾಮಾಯಣ ಹೇಳುವ ಚಿತ್ರಗಳು ಹಾಗೂ ಸ್ಥಳೀಯ ಕಲೆಗಳನ್ನು ಅನಾವರಣಗೊಂಡಿವೆ. ಅತ್ಯಾಧುನಿಕ ಸೌಕರ್ಯಗಳನ್ನು ಇದು ಹೊಂದಿದ್ದು ಈ ನಿಲ್ದಾಣಕ್ಕೆ ವಾರ್ಷಿಕ 10 ಲಕ್ಷ ಪ್ರಯಾಣಿಕರು ಸಂಚರಿಸಬಹುದು ಎಂದಿದ್ದಾರೆ.
ಡಬಲ್ ಇಂಜಿನ್ ಸರ್ಕಾರದ ಸಾಧನೆ :
ಡಬಲ್ ಇಂಜಿನ್ ಸರ್ಕಾರದಿಂದ ಅಯೋಧ್ಯೆಯಲ್ಲಿ ಅಭಿವೃದ್ಧಿ ಸಾಧ್ಯವಾಗಿದೆ. ಇನ್ನು 15 ಸಾವಿರ ಕೋಟಿ ರೂಪಾಯಿಗಳ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಮಾಡಲಾಗಿದೆ. ವಿವಿಧ ಯೋಜನೆಗೆ ಅಡಿಗಲ್ಲು ಹಾಕಲಾಗಿದೆ ಮುಂದಿನ ದಿನಗಳಿಗೆ ಅಭಿವೃದ್ಧಿ ನಿಮಗೆಲ್ಲ ತಿಳಿಯಲಿದೆ. 5,925 ಕೋಟಿ ರೂ. ವೆಚ್ಚದಲ್ಲಿ ಅಯೋಧ್ಯೆಯ ಬೈಪಾಸ್ ರಸ್ತೆ ನಿರ್ಮಾಣ, ಕರ್ನಾಟಕಕ್ಕೆ 3 ರೈಲುಗಳ ಕೊಡುಗೆಯನ್ನು ನೀಡಲಾಗಿದೆ. 240 ಕೋಟಿ ರೂ. ವೆಚ್ಚದಲ್ಲಿ ರೈಲು ನಿಲ್ದಾಣಗಳನ್ನು ಮರುನಿರ್ಮಾಣವಾಗಿವೆ. ಕಲ್ಯಾಣ ಮಂಟಪಕ್ಕೆ 5 ಕೋಟಿ ರೂ.ಗಳನ್ನು ವೆಚ್ಚ ಮಾಡಿದ್ದೇವೆ. ವಿಮಾನ ನಿಲ್ದಾಣದ ಸ್ಪೋರ್ಟ್ ಕಾಂಪ್ಲೇಕ್ಸ್ ಗೆ 180 ಕೋಟಿ ರೂ.ಗಳನ್ನ ಖರ್ಚು ಆಗಿದೆ ಎಂದರು.
More Stories
ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )