January 10, 2025

Newsnap Kannada

The World at your finger tips!

arvind kejiriwal

ರಾಮ ಮಂದಿರ ದರ್ಶನ ಉಚಿತ ಸಿಎಂ ಕೇಜ್ರಿವಾಲ್

Spread the love

ಅಯೋಧ್ಯೆಯಲ್ಲಿ ಅದ್ಧೂರಿ ರಾಮಮಂದಿರ ನಿರ್ಮಾಣವಾದ ನಂತರ ಅಲ್ಲಿಗೆ ದೆಹಲಿಯ ಹಿರಿಯ ನಾಗರಿಕರನ್ನು ಕರೆದೊಯ್ದು ಉಚಿತ ದರ್ಶನ ಮಾಡಿಸುತ್ತೇವೆ. ರಾಮರಾಜ್ಯ ಆದರ್ಶದಂತೆಯೇ ದೆಹಲಿ ಆಡಳಿತ ನಡೆಯುತ್ತಿದೆ ಎಂದ ಸಿಎಂ ಕೇಜ್ರಿವಾಲ್ ಹೇಳಿದರು.

ಬಜೆಟ್ ಅಧಿವೇಶನ ಹಿನ್ನೆಲೆ ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಜ್ಯಪಾಲರ ಭಾಷಣಕ್ಕೆ ಧನ್ಯವಾದ ತಿಳಿಸಿ, ಈ ವಿಷಯ ಪ್ರಕಟಿಸಿದರು.

ಇದೇ ವೇಳೆ ಕೇಜ್ರಿವಾಲ್ ತಮ್ಮ ರಾಜ್ಯವನ್ನು ರಾಮರಾಜ್ಯಕ್ಕೆ ಹೋಲಿಕೆ ಮಾಡಿಕೊಂಡಿದ್ದಾರೆ. ನಾನು ಹನುಮಂತನ ಪರಮ ಭಕ್ತ. ಹನುಮಂತ ರಾಮನ ಭಕ್ತ. ಹೀಗಾಗಿ ನಾನು ಇಬ್ಬರಿಗೂ ಭಕ್ತ. ರಾಮ ಅಯೋಧ್ಯೆಯ ರಾಜನಾಗಿದ್ದ. ರಾಮನ ಆಡಳಿತದಲ್ಲಿ ಎಲ್ಲವೂ ಚೆನ್ನಾಗಿತ್ತು ಎಂದು ಹೇಳಲಾಗುತ್ತದೆ. ಅಲ್ಲಿ ಯಾವುದೇ ದುಃಖವಿರಲಿಲ್ಲ. ಅಲ್ಲಿ ಎಲ್ಲ ಸೌಲಭ್ಯಗಳೂ ಇದ್ದವು. ಅದನ್ನು ರಾಮರಾಜ್ಯ ಎನ್ನಲಾಗುತ್ತದೆ ಎಂದರು.

ರಾಜ್ಯದ ಪ್ರಮುಖ ಜನರ ಪರ ಯೋಜನೆಗಳು :

  • ಯಾರೂ ಹಸಿದು ಮಲಗಬಾರದು
  • ಮಕ್ಕಳಿಗೆ ಉತ್ತಮ ಶಿಕ್ಷಣ
  • ಎಲ್ಲರಿಗೂ ಉತ್ತಮ ಚಿಕಿತ್ಸೆ
  • 24×7 ಉಚಿತ ವಿದ್ಯುತ್
  • ಎಲ್ಲರಿಗೂ ಉಚಿತ ನೀರು
  • ಎಲ್ಲರಿಗೂ ಉದ್ಯೋಗ
  • ಮನೆಯಿಲ್ಲದವರಿಗೆ ವಸತಿ
  • ಮಹಿಳೆಯರ ಸುರಕ್ಷತೆ
  • ಹಿರಿಯರಿಗೆ ಗೌರವ
  • ಎಲ್ಲರಿಗೂ ಸಮಾನ ಹಕ್ಕು

Copyright © All rights reserved Newsnap | Newsever by AF themes.
error: Content is protected !!