ರಾಕೇಶ್ ಟಿಕಾಯತ್​​ ನೇತೃತ್ವದಲ್ಲಿ ವಿಧಾನಸೌಧ ಚಲೋ – ಬಿಗಿ ಬಂದೋಬಸ್ತ್ , ಟ್ರಾಫಿಕ್ ಜಾಮ್

Team Newsnap
1 Min Read

ಕೇಂದ್ರದ ಕೃಷಿ ಕಾನೂನು ವಿರೋಧಿಸಿ ರೈತ ನಾಯಕರು ಸೋಮವಾರ ಬೆಂಗಳೂರಲ್ಲಿ ಬೃಹತ್ ಹೋರಾಟ ಆರಂಭವಾಗಿದೆ.

ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ನಾಯಕ ರಾಕೇಶ್ ಟಿಕಾಯತ್ ನೇತೃತ್ವದಲ್ಲಿ ‘ವಿಧಾನಸೌಧ ಚಲೋ’ ಪ್ರತಿಭಟನೆ ನಡೆಯುತ್ತಿದೆ.

ರೈತರ ಈ ಪ್ರತಿಭಟನೆಯು ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಿಂದ ಆರಂಭವಾಗಿ ವಿಧಾನ ಸೌಧದವರೆಗೆ ನಡೆಯಲಿದೆ.

ದೆಹಲಿ ರೈತ ನಾಯಕರಾಗಿರುವ ಡಾ.ಸುದರ್ಶನ್ ಪಾಲ್, ಯುದ್ದವೀರ್ ಸಿಂಗ್ ಜೊತೆಯಲ್ಲಿ ರಾಜ್ಯ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್, ಬಡಗಲಪುರ ನಾಗೇಂದ್ರ ಕುರುಬೂರು ಶಾಂತಕುಮಾರ್ ಸೇರಿ ಹಲವು ರೈತ ನಾಯಕರು ಹೋರಾಟದಲ್ಲಿ ಈಗಾಗಲೇ ಭಾಗಿಯಾಗಿದ್ದಾರೆ.

ಆಮ್ ಆದ್ಮಿ ಪಕ್ಷ, ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ದಲಿತ ಸಂಘಟನೆಗಳು, ಮಹಿಳೆಯರು ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿವೆ.

ಈ ರ್ಯಾಲಿಯಲ್ಲಿ ಸುಮಾರು 25 ಸಾವಿರ ರೈತರು ಭಾಗವಹಿಸುವ ಸಾಧ್ಯತೆ ಇದೆ. ನಗರದ ಪ್ರಮುಖ ಭಾಗಗಳಲ್ಲಿ ವಾಹನ ಸವಾರರಿಗೆ ಟ್ರಾಫಿಕ್ ಬಿಸಿಯಾಗಲಿದೆ. ಮೆಜೆಸ್ಟಿಕ್ ಸಂಪರ್ಕಿಸುವ ರಸ್ತೆಗಳು, ಶೇಷಾದ್ರಿ ರಸ್ತೆ, ಕೆಜಿ ರಸ್ತೆ, ಕೆಆರ್​ಸರ್ಕಲ್, ರೇಸ್ ಕೋರ್ಸ್ ರಸ್ತೆ, ಓಕಳಿಪುರಂ ಜಂಕ್ಷನ್, ಮಲ್ಲೇಶ್ವರಂ ಸಂಪರ್ಕಿಸುವ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಹೆಚ್ಚಿದೆ. ಪೋಲಿಸರ ಬಿಗಿ ಬಂದೋಬಸ್ತು ಮಾಡಲಾಗಿದೆ.

Share This Article
Leave a comment