ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುವ ನಿರ್ಧಾರ ಮಾಡಿರುವ ಸೂಪರ್ ಸ್ಟಾರ್ ರಜನಿಕಾಂತ್ ಅನಾರೋಗ್ಯಕ್ಕೆ ಸೂಕ್ತ ಚಿಕಿತ್ಸೆ ಪಡೆಯಲು ಅಮೇರಿಕಾಕ್ಕೆ ತೆರಳಿದ್ದಾರೆ.
ಮೊನ್ನೆ ಅಷ್ಟೇ ಅಧಿಕ ರಕ್ತದೊತ್ತಡಕ್ಕೆ ಬಳಲಿ ಹೈದ್ರಾಬಾದ್ ನಲ್ಲಿ ತಾತ್ಕಾಲಿಕ ಚಿಕಿತ್ಸೆ ಪಡೆದು ಮನೆಗೆ ಬಂದಿದ್ದ ರಜಿನಿ ಈಗ ಸಂಪೂರ್ಣ ಗುಣಮುಖರಾಗಲು ಚಿಕಿತ್ಸೆ ಪಡೆಯುವ ಹಿನ್ನೆಲೆಯಲ್ಲಿ ಅಮೇರಿಕಾಗೆ ಹೋಗಿದ್ದಾರೆ.
ತಮಿಳುನಾಡಿನಲ್ಲಿ ಸಿನಿಮಾ ರಂಗದಲ್ಲಿ ಯಶಸ್ವಿಯಾದ ರಜನಿಕಾಂತ್ ರಾಜಕಾರಣದಲ್ಲೂ ಯಶಸ್ವಿ ಆಗುವುದರ ಬಗ್ಗೆ ಸಂದೇಹ ಬಂದ ಹಿನ್ನೆಲೆಯಲ್ಲಿ ರಾಜಕೀಯಕ್ಕೆ ಗುಡ್ ಬೈ ಹೇಳಿದರು.
ಲಾಕ್ ಡೌನ್ ವೇಳೆಯಲ್ಲಿ ಕಿಡ್ನಿ ಸೋಂಕಿನಿಂದ ಬಳಲಿ ಚಿಕಿತ್ಸೆ ಪಡೆದಿದ್ದರು. ಆದರೆ ಆರೋಗ್ಯ ಮತ್ತೆ ಕೈ ಕೊಟ್ಟಿತು. ಇದರಿಂದಾಗಿ ರಾಜಕಾರಣದ ಪ್ರವೇಶ ನಿರ್ಧಾರವನ್ನು ಕೈ ಬಿಟ್ಟು ಆರೋಗ್ಯ ದತ್ತ ಗಮನ ನೀಡಿದ್ದಾರೆ. ಹೀಗಾಗಿ ಅಭಿಮಾನಿಗಳಿಗೆ ಸಾಕಷ್ಟು ನಿರಾಶೆ ಯಾಗಿದೆ.
ಬಾಕಿ ಚಿತ್ರೀಕರಣ ಉಳಿದಿರುವ ಅಣ್ಣಾತೆ ಶೂಟಿಂಗ್ ಅನ್ನು ಅಮೇರಿಕಾದಿಂದ ಬಂದ ಮೇಲೆ ಮುಗಿಸುವುದಾಗಿ ರಜನಿ ಹೇಳಿದ್ದಾರೆ.
ರಜನಿಕಾಂತ್ ಅವರ ಅನಾರೋಗ್ಯ ದಿಂದಾಗಿ ರಾಜಕಾರಣದಿಂದ ದೂರ ಉಳಿಯವ ನಿರ್ಧಾರವು ನಟ ಕಮಲಹಾಸನ್ , ಖುಷ್ಬು ಸೇರಿದಂತೆ ಅನೇಕರಿಗೆ ಬೇಸರ ತರಿಸಿದೆ.
- ಟಿಪ್ಪು ಸುಲ್ತಾನ್ನ ಖಡ್ಗ 3.4 ಕೋಟಿಗೆ ಹರಾಜು
- ಮುಖ್ಯಮಂತ್ರಿ ವಿರುದ್ಧ ಅಪಪ್ರಚಾರ ಆರೋಪ: ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ಐಆರ್
- ₹5.50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರು ಬಂಧನ
- ಮುಡಾ ಹಗರಣ: ಸ್ನೇಹಮಯಿ ಕೃಷ್ಣ ಮತ್ತು ಕೈ ಮುಖಂಡ ಲಕ್ಷ್ಮಣ್ ನಡುವೆ ವಾಗ್ವಾದ
- ಯೋಗ ಗುರು ಶರತ್ ಜೋಯಿಸ್ ಹೃದಯಾಘಾತದಿಂದ ನಿಧನ
More Stories
ಟಿಪ್ಪು ಸುಲ್ತಾನ್ನ ಖಡ್ಗ 3.4 ಕೋಟಿಗೆ ಹರಾಜು
ಮುಖ್ಯಮಂತ್ರಿ ವಿರುದ್ಧ ಅಪಪ್ರಚಾರ ಆರೋಪ: ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ಐಆರ್
₹5.50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರು ಬಂಧನ