ಸೂಪರ್ ಸ್ಟಾರ್ ತಲೈವಾ ರಜನಿಕಾಂತ್ ರಾಜಕೀಯ ಅರಂಗ್ರೇಟ್ ಗೆ ದಿನಗಣನೆಗಳು ಅರಂವಾಗಿವೆ. ಸಿದ್ದತೆಗಳ ನಡುವೆಯೂ ಬೆಂಗಳೂರಿಗೆ ಧಾವಿಸಿ ಹಿರಿಯ ಸಹೋದರನ ಆಶೀರ್ವಾದ ಪಡೆದರು.
ತಮಿಳುನಾಡಿನಲ್ಲಿ ಡಿಸೆಂಬರ್ ಅಂತ್ಯದಲ್ಲಿ ಹೊಸ ರಾಜಕೀಯ ಪಕ್ಷ ಘೋಷಣೆ ಮಾಡಿ ಸಕ್ರಿಯ ರಾಜಕಾರಣ ಕ್ಕೆ ಧುಮುಕುವ ಮುನ್ನ ರಜನೀಕಾಂತ್ ಹಿರಿಯ ಸಹೋದರ ಸತ್ಯನಾರಾಯಣ ಅವರ ಆಶೀರ್ವಾದ ಪಡೆಯಲು ಬಂದಿದ್ದರು.
ನಿನ್ನೆ ಬೆಂಗಳೂರಿಗೆ ಗೌಪ್ಯ ವಾಗಿ ಆಗಮಿಸಿದ ತಲೈವಾ ರಜನೀಕಾಂತ್, ತನ್ನ ಅಣ್ಣ ಸೇರಿದಂತೆ ಹಿರಿಯರ ಬಳಿ ಆಶೀರ್ವಾದ ಬೇಡಿ ತಮ್ಮ ಹೊಸ
ಪಕ್ಷಕ್ಕೆ ಶುಭ ಹಾರೈಸುವಂತೆ ಕೋರಿದರು.
ಈ ಹಿಂದೆ ಅನಾರೋಗ್ಯ ಕಾರಣ ಹೇಳಿ ರಾಜಕೀಯದಿಂದ ದೂರ ಸರಿಯವ ಮನಸ್ಸು ಮಾಡಿದ್ದರು. ಆದರೆ ತಮಿಳುನಾಡಿನಲ್ಲಿ ಬದಲಾದ ರಾಜಕೀಯ ಸನ್ನಿವೇಶ ಹಾಗೂ ಗೆಳೆಯರು, ಅಭಿಮಾನಿಗಳ ಒತ್ತಾಸೆಗೆ ಮಣಿದು ರಾಜಕೀಯ ಪಾದಾರ್ಪಣೆಗೆ ನಿರ್ಧಾರ ಮಾಡಿದರು.
ತಮಿಳುನಾಡಿನಲ್ಲಿ 2021ರಲ್ಲಿ ನಡೆಯಲಿರುವ ವಿಧಾನ ಸಭಾ ಚುನಾವಣೆಗೆ ತಮ್ಮ ಸ್ವಂತ ಪಕ್ಷವನ್ನೇ ಅಧಿಕಾರಕ್ಕೆ ತರಲು ರಜನಿಕಾಂತ್ ಬಯಸಿದ್ದಾರೆ.
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
More Stories
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ