ಅಶ್ಲೀಲ ಚಿತ್ರಗಳ ತಯಾರಿ ಪ್ರಕರಣ ಆರೋಪ ಎದುರಿಸುತ್ತಿರುವ ಉದ್ಯಮಿ ರಾಜ್ ಕುಂದ್ರಾ ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾರೆ.
ಮುಂಬೈನ ಆರ್ಥರ್ ರೋಡ್ ಜೈಲಿಂದ ಹೊರ ಬಂದ ರಾಜ್ ಕುಂದ್ರಾ ಪೊಲೀಸರ ಬಳಿ ಯಾವುದೇ ಸಾಕ್ಷಿ ಇಲ್ಲ ಎಂದಿದ್ದಾರೆ. ಇನ್ನು ಜಾಮೀನು ಮಂಜೂರಾದ ಬಳಿಕ ಬರೋಬ್ಬರಿ ಎರಡು ತಿಂಗಳ ನಂತರ ಮನೆಗೆ ಹೊರಟಿರುವ ಅವರನ್ನು ಕರೆದೊಯ್ಯಲು ಯಾರು ಬಂದಿರಲಿಲ್ಲ. ಏಕಾಂಗಿಯಾಗಿಯೇ ಆರೋಪಿ ರಾಜ್ ಮನೆಗೆ
ಹೋದರು.
ಅಶ್ಲೀಲ ಚಿತ್ರಗಳ ನಿರ್ಮಾಣ ದಂಧೆ ಪ್ರಕರಣದಲ್ಲಿ ತಮ್ಮನ್ನು ‘ಬಲಿಪಶು’ ಮಾಡಲಾಗುತ್ತಿದೆ. ಅಶ್ಲೀಲ ಚಿತ್ರಗಳ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಯಾವುದೇ ಸಾಕ್ಷ್ಯ ಸಪ್ಲಿಮೆಂಟರಿ ಚಾರ್ಜ್‌ಶೀಟ್‌ನಲ್ಲಿಲ್ಲ ಎಂದು ಜಾಮೀನಿಗೆ ಮನವಿ ಮಾಡಿ ನ್ಯಾಯಾಲಯಕ್ಕೆ ರಾಜ್ ಕುಂದ್ರಾ ಅರ್ಜಿ ಸಲ್ಲಿಸಿದ್ದರು ಅದರ ಬೆನ್ನಲ್ಲೇ ಕೋರ್ಟ್ ಕುಂದ್ರಾಗೆ ಜಾಮೀನು ಮಂಜೂರು ಮಾಡಿತ್ತು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಕನ್ನಡ ಸಿನಿಮಾ ಕ್ಷೇತ್ರಕ್ಕೆ ಉದ್ಯಮ ಸ್ಥಾನಮಾನ
ರಾಜ್ಯ ಸರ್ಕಾರದಿಂದ ಸಿನಿಮಾ ಟಿಕೆಟ್ ದರ ನಿಯಂತ್ರಣದ ಚಿಂತನೆ: ಗೃಹ ಸಚಿವ ಜಿ. ಪರಮೇಶ್ವರ್