ಮಳೆಗಾಲ ಎದುರಿಸುವುದೇ ಒಂದು ಸಮಸ್ಯೆ- ಸವಾಲು
ನ್ಯೂಸ್ ಸ್ನ್ಯಾಪ್.
ಬೆಂಗಳೂರು.
ರಾಜಧಾನಿ ಜನರು ಎರಡು ಕಾರಣಗಳಿಗೆ ತತ್ತರಿಸಿ ಹೋಗಿದ್ದಾರೆ. ಒಂದು ಬೆಂಗಳೂರಿಗರನ್ನು ಕೊರೋನಾ ಮಾಹಾಮಾರಿ ಕಾಡುತ್ತಲೇ ಇದೆ. ಕೊರೋನಾದಿಂದಾಗಿ ಸತ್ತವರ ಸಂಖ್ಯೆಯೂ ಹೆಚ್ಚಾಗಿದೆ. ಕೊರೋನಾ ಸೋಂಕಿನಿಂದಲೂ ಸಾಕಷ್ಟು ಜನ ನೋವು ಅನುಭವಿಸಿದ್ದಾರೆ. ಮತ್ತೊಂದು ಈಗ ಎಡ ಬಿಡದೇ ಸುರಿಯುತ್ತಿರುವ ಮಳೆಯ ಅವಾಂತರಕ್ಕೆ ಜನ, ಜೀವನ ರೋಸಿ ಹೋಗಿದೆ.
ಮಳೆಯನ್ನು ತಡೆಯೋಕೆ ಆಗಲ್ಲ.ಭಾರಿ ಪ್ರಮಾಣದಲ್ಲಿ ಬಿದ್ದ ಮಳೆಯ ನೀರನ್ನು ಚರಂಡಿಗೆ ಹೋಗುವಂತೆ ಮಾಡುವುದು ಅಥವಾ ಚರಂಡಿ ಹಾಗೂ ಸರ್ಕಾರಿ ಜಾಗಗಳ ಒತ್ತವರಿ ತೆರವು ಮಾಡಿ ನೀರು ಸರಾಗವಾಗಿ ಹರಿದು ಹೋಗಲು ಅನುಕೂಲ ಮಾಡಿಕೊಡಲು ಬಿಬಿಎಂಪಿ ಪೂರ್ವ ಸಿದ್ದತೆ ಮಾಡಿಕೊಳ್ಳುವುದಿಲ್ಲ ಎಂಬ ದೂರು ಸಾಮಾನ್ಯ.
ಕಳೆದ ಎರಡು ದಿನಗಳಿಂದ ಸುರಿದ ಭಾರಿ ಮಳೆ ಅವಾಂತರಗಳನ್ನು ತಂದಿದೆ. ಬೆಂಗಳೂರಿನಲ್ಲಿ ಏನೆಲ್ಲಾ ಹಾನಿಯಾಗಿದೆ. ಎಷ್ಟು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಸ್ತೆಗಳು ಎಷ್ಟು ಹಾಳಾಗಿವೆ. ವಾಹನ ಸವಾರರು ಅನುಭವಿಸಿದ ಕಷ್ಟ, ನಷ್ಟ , ನೋವು ಎಷ್ಟು ಎಂಬುದೇ ಅಂದಾಜಿಲ್ಲ.
ಗಡ್ಡಕ್ಕೆ ಬೆಂಕಿ ಹತ್ತಿದಾಗ….
- ನಮ್ಮ ಪೈಫಲ್ಯಗಳೇ ಹೀಗೆ. ಗಡ್ಡಕ್ಕೆ ಬೆಂಕಿ ಹತ್ತಿದಾಗಲೇ ಬಾವಿ ತೋಡುವಂತಹ ಕೆಲಸ ಮಾಡುವುದು.
- ಭಾರಿ ಪ್ರಮಾಣದಲ್ಲಿ ಮಳೆ ಬಂದು ಅವಾಂತರ ಸೃಷ್ಠಿಯಾದಾಗಲೇ ಜನರ ಸಂಕಷ್ಟಕ್ಕೆ ಸ್ಪಂದಿಸುವ ಬಿಬಿಎಂಪಿ ಮಳೆಗಾಲವನ್ನು ಎದುರಿಸುವ ಪೂರ್ವ ಸಿದ್ದತೆ ಮಾಡಿ ಗೊತ್ತೇ ಇಲ್ಲ.
- ಬೆಂಗಳೂರಿನ ರಾಜ ಕಾಲುವೆಗಳು ಒತ್ತುವರಿಯಾಗಿವೆ. ತೆರವು ಮಾಡಲು ರಾಜಕೀಯ ಇಚ್ಛಾಶಕ್ತಿ ಬೇಕು.
*ಕಳೆದ ಎರಡು ವರ್ಷಗಳಿಂದ ಮಳೆಗಾಲದಲ್ಲೇ ನೀರಿನ ರಭಸಕ್ಕೆ ಮಗು ಮತ್ತು ದೊಡ್ಡವರು ಕೊಚ್ಚಿದ ಘಟನೆಗಳು ಹಸಿರಾಗಿವೆ. - ರಾಜಕಾಲುವೆ ಬಳಿಯಲ್ಲೇ ಇರುವ ಬಹುತೇಕ ಸ್ಲಂಗಳಲ್ಲಿ ವಾಸಿಸುವ ಜನರ ರಕ್ಷಣೆಗೆ ಯಾವುದೇ ಅಗತ್ಯ ಕ್ರಮ ಕೈಗೊಳ್ಳುವುದಿಲ್ಲ.
- ಅಹಿತಕರ ಘಟನೆಗಳು ನಡೆದಾಗಲೇ ಸರ್ಕಾರ, ಬಿಬಿಎಂಪಿ ಪರಿಹಾರ ನೀಡಿ ಕೈತೊಳೆದುಕೊಂಡರೆ ಜವಾಬ್ದಾರಿ ಮುಗಿತು ಎನ್ನುವ ರೀತಿಯಲ್ಲಿ ನಡೆದುಕೊಂಡರೇ ಹೇಗೆ?
- ದಕ್ಷ ಅಧಿಕಾರಿಗಳಿಗೆ ಸ್ವತಂತ್ರ್ಯವಾಗಿ ಕೆಲಸ ಮಾಡುವ ಅವಕಾಶಗಳು ಬೇಕು.
ಮೂಲ ಸಮಸ್ಯೆಗಳು ಏನು?
- ಬೆಂಗಳೂರಿನಲ್ಲಿ ಮಳೆಯದ್ದೇ ಒಂದು ಸಮಸ್ಯೆ- ಸವಾಲು. ಬೆಂಗಳೂರನ್ನು ಹಸಿರಿನ ರಾಜಧಾನಿ ಎನ್ನಬಹುದು.
- ಸಾಕಷ್ಟು ಮರ-ಗಿಡಗಳು ಇವೆ. ಅಷ್ಟೇ ಪ್ರಮಾಣದಲ್ಲಿ ಹಳೇ ಮರಗಳೂ ಯಥೇಚ್ಛವಾಗಿವೆ.
- ಪ್ರತಿ ಮಳೆಗಾಲದಲ್ಲೂ ಗಾಳಿ, ಮಳೆಗೆ ಉರುಳಿ ಬೀಳುವ ಮರಗಳ ಸಂಖ್ಯೆಯಂತೂ ಲೆಕ್ಕವಿಲ್ಲದಷ್ಟು.
- ಸಂಜೆ ಮತ್ತು ರಾತ್ರಿ ಸಮಯದಲ್ಲೇ ಬೆಂಗಳೂರಿನಲ್ಲಿ ಹೆಚ್ಚು ಹೊತ್ತು ಮಳೆ ಸುರಿಯುತ್ತದೆ.
- ಆಗ ರಸ್ತೆಗಳಲ್ಲಿ ಸಂಚರಿಸುವ ದ್ವಿಚಕ್ರ ಹಾಗೂ ಕಾರು ಸೇರಿದಂತೆ ಇತರ ವಾಹನಗಳ ಮೇಲೆ ಮರಗಳು ಮುರಿದು ಬಿದ್ದು ಪ್ರಾಣಾಪಾಯ ಮಾಡಿದ್ದೂ ಉಂಟು.
- ಈ ಕಾರಣಕ್ಕಾಗಿ ಪರಿಸರ ಇಲಾಖೆ ಮತ್ತು ಬಿಬಿಎಂಪಿ ಜಂಟಿಯಾಗಿ ಮುಂಗಾರು ಮಳೆ ಆರಂಭಕ್ಕೂ ಮುನ್ನವೇ ಹಳೇ ಮರಗಳ ಸಂಖ್ಯೆಯನ್ನು ಸಮೀಕ್ಷೆ ಮಾಡಿಸಿ ಮರಗಳ ಹನನ ಮಾಡಿ ಹೊಸ ಸಸಿ ನೆಟ್ಟು ಪರಿಸರ ಸಂರಕ್ಷಣೆ ಮಾಡಬೇಕು. ಈ ಕಾರ್ಯಕ್ರಮವನ್ನು ಎಷ್ಟು ವ್ಯವಸ್ಥಿತವಾಗಿ ಯಾರು ಮಾಡಿದ್ದಾರೆ ?
ಮಳೆ ನೀರು ಎಲ್ಲಿ ಹೋಗಬೇಕು?
- ಬೆಂಗಳೂರನ್ನು ವ್ಯವಸ್ಥಿತ ರೀತಿಯಲ್ಲಿ ಅಭಿವೃದ್ಧಿ ಪಡಿಸುವ ಕೆಲಸವನ್ನು ಯಾವ ಸರ್ಕಾರಗಳೂ ಮಾಡಿಲ್ಲ.
- ಅನೇಕ ಕೆರೆಗಳನ್ನು ಒತ್ತುವರಿ ಮಾಡಲಾಗಿದೆ. ಅಲ್ಲಿ ದೊಡ್ಡ ದೊಡ್ಡ ಅಪಾಟ್೯ಮೆಂಟ್ ಗಳನ್ನು ನಿರ್ಮಾಣ ಮಾಡಿದ್ದಾರೆ.
- ಭಾರಿ ಪ್ರಮಾಣದಲ್ಲಿ ಬಿದ್ದ ಮಳೆಯ ನೀರು ಹೋಗಲು ಜಾಗವೇ ಇಲ್ಲ. ಹೀಗಾಗಿ ಮಳೆ ನೀರು ಮಾತ್ರವಲ್ಲ ಚರಂಡಿಯ ನೀರು ಕೂಡ ಪ್ರತಿ ಮನೆಗಳಿಗೂ ನುಗ್ಗುತ್ತದೆ.
- ತಗ್ಗು ಪ್ರದೇಶಗಳಲ್ಲೇ ಹೆಚ್ಚು ಜನರು ಗುಡಿಸಲು, ಸಣ್ಣ ಸಣ್ಣ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಅಲ್ಲಿಗೂ ನೀರು ನುಗ್ಗುತ್ತದೆ.
- ಮಳೆಯ ನೀರು ಸಂಗ್ರಹವಾಗುವ ಕೆರೆಗಳೆಲ್ಲವೂ ದುರಂತ ಸ್ಥಿತಿಯಲ್ಲಿವೆ. ಈ ದುರಂತ ಸ್ಥಿತಿಗೆ ಬಹುತೇಕ ರಾಜಕಾರಣಿಗಳೂ ಹಾಗೂ ಅಧಿಕಾರಿಗಳೇ ಹೊಣೆ.
ಮಳೆಯ ನೀರಿಗೆ ಪರಿಹಾರ ಏನು?
- ಬೆಂಗಳೂರಿನ ಬೆಳವಣಿಗೆಗೆ ಮೊದಲ ಕಡಿವಾಣ ಹಾಕಬೇಕು.
- ಕೆರೆಗಳನ್ನು ಸಂರಕ್ಷಣೆ ಮಾಡಿ ಮಳೆಯ ನೀರು ಕೆರೆಗೆ ಹೋಗುವ ಮಾಡುವ ಹೊಣೆ ಬಿಬಿಎಂಪಿಯದ್ದು.
- ತಗ್ಗು ಪ್ರದೇಶದಲ್ಲಿ ವಾಸ ಮಾಡುವ ಜನರಿಗೆ ಪರ್ಯಾಯವಾಗಿ ಪ್ರತ್ಯೇಕ ವಾಸದ ಜಾಗ ತೋರಿಸಬೇಕು.
- ತಗ್ಗು ಪ್ರದೇಶಗಳಲ್ಲಿ ಗುಡಿಸಲು ಅಥವಾ ಮನೆ ನಿರ್ಮಾಣಕ್ಕೆ ಮೊದಲೇ ನಿರ್ಬಂಧ ಹೇರಬೇಕು.
- ಬೇಸಿಗೆ ಸಮಯದಲ್ಲಿ ಬೆಂಗಳೂರಿನ ಎಲ್ಲಾ ರಸ್ತೆಗಳನ್ನು ಗುಣಮಟ್ಟವನ್ನು ಗಮನದಲ್ಲಿ ಇಟ್ಟುಕೊಂಡು ರಿಪೇರಿ ಮಾಡಿಸಬೇಕು.
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ