December 22, 2024

Newsnap Kannada

The World at your finger tips!

pilot , Nirbhaya , india

Rahul Gandhi helped Nirbhaya's brother become a pilot ನಿರ್ಭಯಾಳ ಸಹೋದರನನ್ನು ಪೈಲಟ್ ಆಗಲು ಸಹಾಯ ಮಾಡಿದ ರಾಹುಲ್ ಗಾಂಧಿ

ನಿರ್ಭಯಾಳ ಸಹೋದರನನ್ನು ಪೈಲಟ್ ಆಗಲು ಸಹಾಯ ಮಾಡಿದ ರಾಹುಲ್ ಗಾಂಧಿ

Spread the love

ದೆಹಲಿಯಲ್ಲಿ ರಾಕ್ಷಸರು ಮುಕ್ಕಿತಿಂದ ಯುವತಿ ನಿರ್ಭಯಾಳ ಸಹೋದರನನ್ನು ಯಾರಿಗೂ ಗೊತ್ತಾಗದಂತೆ ಪೈಲಟ್ ತರಬೇತಿ ಕೊಡಿಸಿದ ಪೈಲಟ್ ಆಗಲು ಸಹಕಾರ ನೀಡಿದ ರಾಹುಲ್ ಗಾಂಧಿ ಇದುವರೆಗೂ ಆ ಸತ್ಯವನ್ನು ಹೊರಗೆಳೆದಿಲ್ಲ..!

ಆದರೆ ರಾಹುಲ್ ಗಾಂಧಿಗೆ ಅದು ಹೇಳುವುದು ಇಷ್ಟವಿಲ್ಲದಿದ್ದರೂ ನಾನು ಆ ಸತ್ಯವನ್ನು ಹೇಳುತ್ತಿದ್ದೇನೆ ಎಂದು ಹೇಳಿದ್ದು ನಿರ್ಭಯಾಳ ತಾಯಿ ರಾಹುಲ್ ಗಾಂಧಿ ಮಾಡಿದ ಉಪಕಾರವನ್ನು ನೆನದಿದ್ದಾರೆ.

ಸೈನ್ಯದಲ್ಲಿ ಪೈಲಟ್ ಆಗಬೇಕೆಂಬ ಬಾಲ್ಯದ ಕನಸುಗಳಿಗೆ ಸಹೋದರಿ ನಿರ್ಭಯಾಳ ಸಾವು ದೊಡ್ಡ ಹೊಡೆತವಾಗಿತ್ತು.

ನಂತರ ಅವನ ಜವಾಬ್ದಾರಿಯನ್ನು ರಾಹುಲ್ ಗಾಂಧಿ ವಹಿಸಿಕೊಂಡರು.

ಸೋನಿಯಾ ಗಾಂಧಿಯ ಕ್ಷೇತ್ರವಾದ ರಾಯಿಬರೇಲಿಯಾದಲ್ಲಿರುವ ಇಂದಿರಾಗಾಂಧಿ ರಾಷ್ಟ್ರೀಯ ಉಡಾನ್ ಅಕಾಡೆಮಿಯಲ್ಲಿ ಪೈಲಟ್ ತರಬೇತಿಗೆ ಅನುಕೂಲ ಮಾಡಿಕೊಟ್ಟ ರಾಹುಲ್ ಗಾಂಧಿ ವಿಶೇಷ ಕೌನ್ಸೆಲಿಂಗ್ ಕೂಡ ಕೊಡಿಸಿದರು

ಅಧ್ಯಯನದ ಸಂಪೂರ್ಣ ವೆಚ್ಚವನ್ನು ರಾಹುಲ್ ಗಾಂಧಿ ಭರಿಸಿದ್ದರು. ತಮ್ಮ ಮಗ ಪೈಲಟ್ ಆಗಿರುವುದನ್ನು ನೋಡಿ ನನಗೆ ತುಂಬಾ ಸಂತೋಷವಾಗುತ್ತಿದೆ ಎಂದು ನಿರ್ಭಯಾ ಅವರ ತಾಯಿ ಆಶಾದೇವಿ ಹೇಳುತ್ತಾರೆ.

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರಿಗೆ ವಿಶೇಷ ಧನ್ಯವಾದಗಳನ್ನೂ ಅವರು ತಿಳಿಸಿದರು.

ಅವನನ್ನು ಪೈಲಟ್ ಆಗಿ ಕಾಣಲು ಅತಿಯಾಗಿ ಬಯಸಿದ್ದಳು ನಿರ್ಭಯಾ.
ಈಗ ಸಹೋದರನ ಸಾಧನೆಯನ್ನು ಅವಳು ನೋಡುತ್ತಿರಬಹುದು ಎಂದು ಕಣ್ಣೀರು ಹಾಕುತ್ತಾರೆ ಆಶಾದೇವಿ..!

ನಾನೇ ಸರ್ವಸ್ವ ಎಂದು ಹೆಮ್ಮೆ ಪಡುವವರ ಮುಂದೆ ನಾಟಕವಾಡದ ಹೀರೋ ರಾಹುಲ್ ಗಾಂಧಿ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.ಇದನ್ನು ಓದಿ –‘ಪ್ರಧಾನಿ’ ಭದ್ರತೆಯಲ್ಲಿ ಮತ್ತೆ ಲೋಪ, ‘ಮೋದಿ’ ಬಳಿ ಓಡಿ ಬಂದ ಯುವಕ

Copyright © All rights reserved Newsnap | Newsever by AF themes.
error: Content is protected !!