ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ನ್ಯಾಷನಲ್ ಹೆರಾಲ್ಡ್ ಹಣಕಾಸಿನ ವಹಿವಾಟಿಗೆ ಸಂಬಂಧಿಸಿದಂತೆ ಸತತ ಮೂರು ದಿನಗಳ ಕಾಲ ಇ.ಡಿ ಕಚೇರಿಗೆ ರೌಂಡ್ಸ್ ಹೊಡೆದರೂ ವಿಚಾರಣೆ ಮಾತ್ರ ಮುಗಿದಿಲ್ಲ. ಈ ನಡುವೆ ರಾಹುಲ್ ಗಾಂಧಿ ಸೋಮವಾರಕ್ಕೆ ತನಿಖೆ ಆರಂಭಿಸುವಂತೆ ಮಾಡಿದ ಮನವಿಗೆತನಿಖಾಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ
ನ್ಯಾಷನಲ್ ಹೆರಾಲ್ಡ್ ಕೇಸ್ ಹಸ್ತವನ್ನು ಇನ್ನಿಲ್ಲದಂತೆ ಸುಡುತ್ತಿದೆ. ಗಾಂಧಿ ಕುಟುಂಬಕ್ಕೆ ಅಳಿಸಲಾಗದ ಕಳಂಕ ಮೆತ್ತಿಕೊಂಡಿದೆ. ರಾಹುಲ್ ಗಾಂಧಿ ಮೂರು ದಿನಗಳಿಂದ ಇಡಿ ಕಚೇರಿಗೆ ಹೋಗಿ ಬಂದರು. ಈಗ ರಾಹುಲ್ಗೆ ಅಧಿಕಾರಿಗಳು ಕೆಲ ದಿನಗಳ ರಿಲೀಫ್ ಕೊಟ್ಟಿದ್ದಾರೆ. ಇದನ್ನು ಓದಿ – ರಾಜ್ಯಾದ್ಯಂತ ಏಕ ಕಾಲಕ್ಕೆ 21 ಅಧಿಕಾರಿಗಳ ನಿವಾಸದ ಮೇಲೆ 400 ಎಸಿಬಿ ಅಧಿಕಾರಿಗಳು ದಾಳಿ
ರಾಹುಲ್ ಗಾಂಧಿಗೆ ಇಂದು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಇಡಿ ಸೂಚಿಸಿತ್ತು. ಆದರೆ ರಾಹುಲ್ ತಾಯಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅನಾರೋಗ್ಯದ ಕಾರಣ ನೀಡಿ ವಿಚಾರಣೆಯಿಂದ ವಿನಾಯ್ತಿ ಕೇಳಿದ್ದರು. ಈ ಬೇಡಿಕೆಗೆ ಜಾರಿ ನಿರ್ದೇಶನಾಲಯ ಅಸ್ತು ಎಂದಿದೆ ಸೋಮವಾರ ವಿಚಾರಣೆಗೆ ಹಾಜರಾಗಲು ಹೇಳಿದೆ.
ಕಾಂಗ್ರೆಸ್ ಸಂಸದರಿಗೆ ಬುಲಾವು :
ತಮ್ಮ ನಾಯಕನ ಪರ ದೇಶಾದ್ಯಂತ ಕಾಂಗ್ರೆಸ್ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದೆ. ಕೇಂದ್ರ ಸರ್ಕಾರ ಸ್ವಾಯತ್ತ ಸಂಸ್ಥೆಗಳನ್ನ ಪಂಜರದ ಗಿಳಿಯಾಗಿ ಬಳಸಿಕೊಳ್ತಿದೆ.ವಿಪಕ್ಷ ನಾಯಕರನ್ನು ಟಾರ್ಗೆಟ್ ಮಾಡ್ತಿದೆ . ಮಾತ್ರವಲ್ಲದೆ ಇದೇ ಭಾನುವಾರ ಕಾಂಗ್ರೆಸ್ನ ಎಲ್ಲಾ ಸಂಸದರಿಗೂ ದೆಹಲಿಗೆ ಬುಲಾವ್ ನೀಡಲಾಗಿದೆ. ಕೇಂದ್ರದ ವಿರುದ್ಧ ಪ್ರತಿಭಟನೆಯನ್ನು ತೀವ್ರಗೊಳಿಸುವ ಬಗ್ಗೆ ಸಮಾಲೋಚನೆ ನಡೆಯುವ ಸಾಧ್ಯತೆ ಇದೆ. ಇದನ್ನು ಓದಿ – ಚಾರ್ಲಿ ಸಿನಿಮಾ ಎಫೆಕ್ಟ್ – ಸಾಕುನಾಯಿಗಳ ಮೇಲಿನ ಕ್ರೇಜ್ – ಸಾವಿರದಿಂದ ಲಕ್ಷಕ್ಕೇರಿದ ಶ್ವಾನಗಳ ಬೆಲೆ
ಇಡಿ ಮೂರು ದಿನಗಳ ನಡೆಸಿದ ವಿಚಾರಣೆ ವೇಳೆ ಇ.ಡಿಯ ಎಲ್ಲಾ ಪ್ರಶ್ನೆಗೂ ಒಂದೇ ಉತ್ತರ ನೀಡಿದ್ದಾರೆ ಮೋತಿಲಾಲ್ ಹೆಸರನ್ನೇ ರಾಹುಲ್ ಪ್ರಸ್ತಾಪಿಸ್ತಿದ್ದಾರೆ. ಮೃತ ವ್ಯಕ್ತಿ ಬಂದು ಸಾಕ್ಷಿ ಹೇಳಲ್ಲ. ಉತ್ತರ ಸಿಗದಿದ್ದರೆ, ಇಡಿ ಕೇಸ್ ಗಟ್ಟಿಯಾಗಲ್ಲ. ಈ ಎಲ್ಲಾ ಕಾರಣಕ್ಕೆ ಮೃತ ವೋರಾ ಕಡೆ ರಾಹುಲ್ ಬೊಟ್ಟು ಮಾಡ್ತಿದ್ದಾರೆ ಎನ್ನಲಾಗಿದೆ.
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ರಾಜ್ಯಾದ್ಯಂತ ಏಕ ಕಾಲಕ್ಕೆ 21 ಅಧಿಕಾರಿಗಳ ನಿವಾಸದ ಮೇಲೆ 400 ಎಸಿಬಿ ಅಧಿಕಾರಿಗಳು ದಾಳಿ
ರಾಜ್ಯಾದ್ಯಂತ 80 ಕಡೆ ಎಸಿಬಿ ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆ ಏಕಕಾಲಕ್ಕೆ 21 ಸರ್ಕಾರಿ ಅಧಿಕಾರಿಗಳ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ಶೋಧಕಾರ್ಯ ಮಾಡುತ್ತಿದ್ದಾರೆ
ಬೆಳಗ್ಗೆ 5 ಗಂಟೆ ವೇಳೆಗೆ 400ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಬೆಂಗಳೂರಿನ ಜೆಪಿ ನಗರದ ಶಿವಲಿಂಗಯ್ಯ ಎಂಬುವವರ ಮನೆ ಹಾಗೂ ಕಚೇರಿಗಳ ಮೇಲೂ ದಾಳಿಯಾಗಿದೆ.
ಬಿಡಿಎ ಅಧಿಕಾರಿ ಆಗಿರುವ ಶಿವಲಿಂಗಯ್ಯ ಜೆಪಿನಗರ, ದೊಡ್ಡಕಲ್ಲಸಂದ್ರ, ಹಾಗೂ ಬಸವನಗುಡಿಗಳಲ್ಲಿ ಮನೆಯನ್ನು ಹೊಂದಿದ್ದಾರೆ. ಅಕ್ರಮ ಆಸ್ತಿಗಳಿಕೆ ಹಿನ್ನೆಲೆಯಲ್ಲಿ ದಾಳಿಯಾಗಿದೆ.
ಬೆಂಗಳೂರು ಸೇರಿದಂತೆ 10 ಜಿಲ್ಲೆಗಳಲ್ಲಿ ಎಸಿಬಿ ದಾಳಿ ಮಾಡಿದೆ. ಬೆಂಗಳೂರಿನ ಜೆಪಿ ನಗರ, ಬಸವನಗುಡಿ, ಚಂದ್ರಾಲೇಔಟ್ ಹಾಗೂ ದೊಡ್ಡಕಲ್ಲಸಂದ್ರದಲ್ಲಿ ದಾಳಿ ನಡೆದಿದೆ.
ಎಸಿಬಿ ದಾಳಿ ಮಾಡಿದ ಅಧಿಕಾರಿಗಳ ವಿವರ
ಭೀಮಾ ರಾವ್ ವೈ ಪವಾರ್ (ಸೂಪರಿಂಟೆಂಡೆಂಟ್ ಆಫ್ ಇಂಜಿನಿಯರ್, ಬೆಳಗಾವಿ)
ಹರೀಶ್ (ಸಹಾಯಕ ಇಂಜಿನಿಯರ್, ಸಣ್ಣ ನೀರಾವರಿ ಇಲಾಖೆ, ಉಡುಪಿ)
ರಾಮಕೃಷ್ಣ ಎಚ್ .ವಿ. (ಎಇಇ, ಸಣ್ಣ ನೀರಾವರಿ, ಹಾಸನ)
ರಾಜೀವ್ ಪುರಸಯ್ಯ ನಾಯಕ್ (ಸಹಾಯಕ ಇಂಜಿನಿಯರ್, ಪಿಡಬ್ಲ್ಯುಡಿ ಇಲಾಖೆ, ಕಾರವಾರ)
ಬಿ ಆರ್ ಬೋಪಯ್ಯ (ಜೂನಿಯರ್ ಇಂಜಿನಿಯರ್, ಪೊನ್ನಂಪೇಟೆ ಜಿಲ್ಲಾ ಪಂಚಾಯತ್)
ಮಧುಸೂಧನ್ (ಜಿಲ್ಲಾ ನೋಂದಣಾಧಿಕಾರಿ, IGR ಕಚೇರಿ, ಬೆಳಗಾವಿ)
ಪರಮೇಶ್ವರಪ್ಪ (ಸಹಾಯಕ ಇಂಜಿನಿಯರ್, ಸಣ್ಣ ನೀರಾವರಿ, ಹೂವಿನಹಡಗಲಿ)
ಯೆಲ್ಲಪ್ಪ ಎನ್ ಪಡಸಾಲಿ (RTO, ಬಾಗಲಕೋಟೆ)
ಶಂಕರಪ್ಪ ನಾಗಪ್ಪ ಗೋಗಿ ( ಯೋಜನಾ ನಿರ್ದೇಶಕರು, ನಿರ್ಮಿತಿ ಕೇಂದ್ರ, ಬಾಗಲಕೋಟೆ
ಪ್ರದೀಪ್ ಎಸ್ ಆಲೂರ್ ( ಪಂಚಾಯತ್ ಗ್ರೇಡ್-2 ಕಾರ್ಯದರ್ಶಿ, RDPR, ಗದಗ)
ಸಿದ್ದಪ್ಪ ಟಿ. (ಉಪ ಮುಖ್ಯ ವಿದ್ಯುತ್ ಅಧಿಕಾರಿ, ಬೆಂಗಳೂರು)
ತಿಪ್ಪಣ್ಣ ಪಿ ಸಿರಸಗಿ ( ಜಿಲ್ಲಾ ಕಾರ್ಯಕ್ರಮಾಧಿಕಾರಿ ಬೀದರ್)
ಮೃತುಂಜಯ ಚೆನ್ನಬಸಯ್ಯ ತಿರಾಣಿ ( ಸಹಾಯಕ ಕಂಟ್ರೋಲರ್, ಕರ್ನಾಟಕ ಪಶುವೈದ್ಯಕೀಯ, ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್)
ಮೋಹನ್ ಕುಮಾರ್ (ಕಾರ್ಯನಿರ್ವಾಹಕ ಇಂಜಿನಿಯರ್, ನೀರಾವರಿ ಇಲಾಖೆ, ಚಿಕ್ಕಬಳ್ಳಾಪುರ ಜಿಲ್ಲೆ)
ಶ್ರೀಧರ್ (ಜಿಲ್ಲಾ ನೋಂದಣಾಧಿಕಾರಿ, ಕಾರವಾರ)
ಮಂಜುನಾಥ್ ಜಿ (ನಿವೃತ್ತ ಇಇ. PWD)
ಶಿವಲಿಂಗಯ್ಯ (ಸಿ ಗ್ರೂಪ್, ಬಿಡಿಎ)
ಉದಯ ರವಿ ( ಪೊಲೀಸ್ ಇನ್ಸ್‌ಪೆಕ್ಟರ್, ಕೊಪ್ಪಳ)
ಬಿ. ಜಿ.ತಿಮ್ಮಯ್ಯ ( ಕೇಸ್ ವರ್ಕರ್, ಕಡೂರು ಪುರಸಭೆ)
ಚಂದ್ರಪ್ಪ ಸಿ ಹೋಳೇಕರ್ (UTP ಕಚೇರಿ, ರಾಣೆಬೆನ್ನೂರು)
ಜನಾರ್ದನ್ (ನಿವೃತ್ತ ರಿಜಿಸ್ಟ್ರಾರ್ ಮೌಲ್ಯಮಾಪನಗಳು (ಭೂಮಿ), ಬೆಂಗಳೂರು)
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ