ನ್ಯೂಸ್ ಸ್ನ್ಯಾಪ್
ಬೆಂಗಳೂರು
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ಸೇರಿ ಇತರೆ ಐವರು ಆರೋಪಿಗಳನ್ನು, ೧ನೇ ಎಸಿಎಂಎಂ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ.
ಇದೇ ವೇಳೆ ೪ನೇ ಆರೋಪಿ ಪ್ರಶಾಂತ್ ರಂಕಾಗೂ ೧೪ ದಿನಗಳ ನ್ಯಾಯಾಂಗ ಬಂಧನವನ್ನು ಕೋರ್ಟ್ ವಿಧಿಸಿದೆ. ನಟಿ ರಾಗಿಣಿಯವರು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಸೆಪ್ಟಂಬರ್ ೨೭ರ ವರೆಗೆ ಇರಬೇಕಾಗುತ್ತದೆ.
ನಟಿ ಸಂಜನಾ ಅವರನ್ನು ಮತ್ತೆ ಸಿಸಿಬಿ ಬಂಧನಕ್ಕೆ ಆದೇಶಿಸಿದೆ.
ಇಂದು ಸಿಸಿಬಿ ಪೋಲಿಸ್ ಕಸ್ಟಡಿ ಅವಧಿ ಅಂತ್ಯವಾದ ಹಿನ್ನಲೆಯಲ್ಲಿ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ೧ನೇ ಎಸಿಎಂಎಂ ಗೆ ಹಾಜರು ಪಡಿಸಲಾಗಿತ್ತು.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ