January 11, 2025

Newsnap Kannada

The World at your finger tips!

radhika sharath

ಚೆಕ್​ ಬೌನ್ಸ್​ ಪ್ರಕರಣ: ನಟಿ ರಾಧಿಕಾ, ಶರತ್ ಕುಮಾರ್ ಗೆ ಒಂದು ವರ್ಷ ಜೈಲು

Spread the love

ಚೆಕ್​ ಬೌನ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳು ನಟಿ ರಾಧಿಕಾ ಶರತ್​ಕುಮಾರ್​ ಹಾಗೂ ಅವರ ಪತಿ ಶರತ್‌ಕುಮಾರ್ ಅವರಿಗೆ ಚೆನ್ನೈ ನ ವಿಶೇಷ ಕೋರ್ಟ್​ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಮಲಯಾಳದ ಚಿತ್ರನಿರ್ಮಾಪಕ ಲಿಸ್ಟನ್​ ಸ್ಟೆಫನ್​ ಅವರಿಗೂ ಶಿಕ್ಷೆ ವಿಧಿಸಲಾಗಿದೆ.

2014ರಲ್ಲಿ ಇವರೆಲ್ಲರೂ ಸೇರಿ ಚಿತ್ರನಿರ್ಮಾಣಕ್ಕೆ ಸಂಬಂಧಿಸಿದಂತೆ ಹಣಕಾಸು ಕಂಪೆನಿಯೊಂದರಿಂದ ಎರಡು ಕೋಟಿ ರೂಪಾಯಿ ಸಾಲ ಪಡೆದುಕೊಂಡಿದ್ದರು. ಈ ಸಾಲದಲ್ಲಿ ಎರಡು ಚಲನಚಿತ್ರಗಳನ್ನು ನಿರ್ಮಿಸುವುದಾಗಿ ಹೇಳಿದ್ದರು.

ಸಹನಟನಾಗಿರುವ ಮ್ಯಾಜಿಕ್ ಫ್ರೇಮ್ಸ್, ವಿಕ್ರಮ್ ಪ್ರಭು ಮತ್ತು ಕೀರ್ತಿ ಸುರೇಶ್ ಅವರೊಂದಿಗೆ 2014 ರಲ್ಲಿ ಚಿತ್ರ ಮಾಡಲು ಯೋಜಿಸಿ, ಇವರುಗಳು ರೇಡಿಯನ್ಸ್‌ನಿಂದ 1.5 ಕೋಟಿ ರೂ ಹಣ ಪಡೆದುಕೊಂಡಿದ್ದರು, ಮಾರ್ಚ್ 2015 ರೊಳಗೆ ಹಣವನ್ನು ಹಿಂದಿರುಗಿಸುವುದಾಗಿ ಅವರು ಹೇಳಿದರು. ಆದರೆ ಹಣವನ್ನು ಹಿಂದಿರುಗಿಸಲಿಲ್ಲ.ಇವರುಗಳು ಕೊಟ್ಟಿದ್ದ ಚೆಕ್​ ಬೌನ್ಸ್​ ಆಗಿತ್ತು.

ಈ ಹಿನ್ನೆಲೆಯಲ್ಲಿ ನಟ ದಂಪತಿ ಹಾಗೂ ನಿರ್ಮಾಪಕನ ವಿರುದ್ಧ ಕ್ರಿಮಿನಲ್​ ಕೇಸ್​ ದಾಖಲಾಗಿತ್ತು.

ಮದ್ರಾಸ್ ಹೈಕೋರ್ಟ್​ ಇವರ ವಿರುದ್ಧ ಇದ್ದ ಕ್ರಿಮಿನಲ್​ ಕೇಸ್​ ಅನ್ನು ರದ್ದು ಮಾಡಿತ್ತು. ಆದರೆ ಈ ಪ್ರಕರಣದ ವಿಚಾರಣೆಯನ್ನು ನಡೆಸುವಂತೆ ವಿಶೇಷ ಕೋರ್ಟ್​ಗೆ ಆದೇಶಿಸಿತ್ತು. ಇದೀಗ ವಿಚಾರಣೆ ಸಂಪೂರ್ಣಗೊಂಡು ಒಂದು ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.

Copyright © All rights reserved Newsnap | Newsever by AF themes.
error: Content is protected !!