ಅತ್ಯಾಚಾರ ಎಂದಾದರೆ ವಿಡಿಯೋ ಚಿತ್ರೀಕರಿಸಿದ್ದು ಯಾರು ಮತ್ತು ಯಾಕೆ ? ಎಂಬ ಪ್ರಶ್ನೆಯೂ ಸೇರಿ ನೂರಕ್ಕೂ ಹೆಚ್ಚು ಎಸ್ ಐಟಿ ಕೇಳುವ ಪ್ರಶ್ನೆಗೆ ಸಂತ್ರಸ್ತ ಯುವತಿ ಉತ್ತರ ಪಡೆಯುವ ಕಾರ್ಯ ಆರಂಭವಾಗಿದೆ.
ಬೆಂಗಳೂರಿನ ಆಡುಗೋಡಿಯ ಟೆಕ್ನಿಕಲ್ ವಿಂಗ್ನಲ್ಲಿರುವ ಸಿಡಿ ಲೇಡಿಗೆ ಅಧಿಕಾರಿಗಳು ಕೇಸ್ ಸಂಬಂಧ ಮೌಖಿಕವಾಗಿ ಬೇಸಿಕ್ ಪ್ರಶ್ನೆಗಳನ್ನು ರೆಡಿಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಬಂದಿದೆ.
ಪ್ರಮುಖ ಪ್ರಶ್ನೆ ಗಳು :
ಈ ಘಟನೆ ನಡೆದಿದ್ದು ಯಾವಾಗ?
ಅತ್ಯಾಚಾರ ಎಂದಾದರೆ ವಿಡಿಯೋ ಚಿತ್ರೀಕರಿಸಿದ್ದು ಯಾರು ಮತ್ತು ಯಾಕೆ?/ ವಿಡಿಯೋದಲ್ಲಿದ್ದ ಯುವತಿ ನಾನಲ್ಲ ಎನ್ನಲು ಕಾರಣವೇನು? ಪೋಷಕರ ಬಳಿ ಮೊದಲು ನಾನಲ್ಲ ಎನ್ನಲು ಕಾರಣವೇನು? ದ್ವಂದ್ವ ಹೇಳಿಕೆಗಳ ಹಿಂದೆ ಯಾವುದಾದರೂ ಒತ್ತಡವಿತ್ತಾ? ಬೆದರಿಕೆ ಇದೆ ಎಂದಿದ್ದೀರಿ, ಯಾರಿಂದ ಬೆದರಿಕೆ ಇದೆ? ಪ್ರಕರಣದಲ್ಲಿ ಇತರೇ ಶಂಕಿತ ಆರೋಪಿಗಳ ಪಾತ್ರವೇನು? ಎಂಬ ನೂರು ಪ್ರಶ್ನೆಗಳಿಗೆ ಎಸ್‌ಐಟಿ ತಂಡ ಉತ್ತರ ಪಡೆದುಕೊಳ್ಳಲಿದೆ.
ಆಡುಗೋಡಿಯ ಟೆಕ್ನಿಕಲ್ ವಿಂಗ್ನಲ್ಲಿ CD ಲೇಡಿ ವಿಚಾರಣೆ ನಡೆಯುತ್ತಿದೆ. ಎಸ್ಐಟಿ ಅಧಿಕಾರಿಗಳ ತಂಡದಿಂದ CD ಲೇಡಿ ವಿಚಾರಣೆ ನಡೆಯುತ್ತಿದೆ. ಈ ನಡುವೆ, ಆಡುಗೋಡಿಯ ಟೆಕ್ನಿಕಲ್ ವಿಂಗ್ ಸುತ್ತಮುತ್ತ ಹೈಅಲರ್ಟ್ ಪರಿಸ್ಥಿತಿ ನಿರ್ಮಾಣವಾಗಿದೆ. ಟೆಕ್ನಿಕಲ್ ವಿಂಗ್ ಬಳಿ 50ಕ್ಕೂ ಹೆಚ್ಚು ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ.
ಎಸ್ಐಟಿ ವಶಕ್ಕೆ ನೀಡಿಲ್ಲ : ವಕೀಲರು
ಆಡುಗೋಡಿ ಟೆಕ್ನಿಕಲ್ ಸೆಲ್ನಲ್ಲಿ ಯುವತಿಯ ಧ್ವನಿ ಪರೀಕ್ಷೆ ಮತ್ತು ಸಿಆರ್ಪಿಸಿ161 ಅಡಿ ಹೇಳಿಕೆ ಪಡೆಯಲಾಗುತ್ತದೆ ಎಂದು ಸಂತ್ರಸ್ತೆಯ ಪರ ವಕೀಲರಾದ ಜಗದೀಶ್ ಹೇಳಿಕೆ ನೀಡಿದ್ದಾರೆ. ನಾಳೆ ವೈದ್ಯಕೀಯ ಪರೀಕ್ಷೆಗಳು, ಸಾಕ್ಷಿ ಸಂಗ್ರಹದ ಪ್ರಕ್ರಿಯೆಗಳು ನಡೆಯಲಿವೆ. ಅವರನ್ನು ಎಸ್ಐಟಿ ವಶಕ್ಕೆ ನೀಡಲಾಗಿಲ್ಲ.. ನಮಗೆ ಮನವಿ ಮಾಡಿ ಕರೆತಂದಿದ್ದಾರೆ ಎಂದು ಜಗದೀಶ್ ಸ್ಪಷ್ಟನೆ ನೀಡಿದ್ದಾರೆ.
- ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ ಹುಡುಕಾಟ ಸ್ಥಗಿತ
- ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಸಾಧನೆ: ಗರಿಷ್ಠ ರನ್ ಹಾಗೂ ಭರ್ಜರಿ ಗೆಲುವು
- ಮಂಡ್ಯ: ಕಾವೇರಿ ನದಿಯಲ್ಲಿ ಮುಳುಗಿ ಬಿ.ಇ ವಿದ್ಯಾರ್ಥಿ ದುರ್ಮರಣ
- ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ 89 ಉದ್ಯೋಗಾವಕಾಶ
- ಕೆನರಾ ಬ್ಯಾಂಕ್ನಲ್ಲಿ 60 ಹುದ್ದೆಗಳಿಗೆ ಅರ್ಜಿ ಆಹ್ವಾನ
More Stories
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಸಾಧನೆ: ಗರಿಷ್ಠ ರನ್ ಹಾಗೂ ಭರ್ಜರಿ ಗೆಲುವು
KPSC ಪರೀಕ್ಷೆಗಳಲ್ಲಿ ಕನ್ನಡ ದೋಷಗಳ ವಿವಾದ – ಮರುಪರೀಕ್ಷೆಗೆ ಪ್ರಬಲ ಒತ್ತಾಯ
ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ