ಅಸಿಸ್ಟೆಂಟ್ ಫ್ರೊಫೆಸರ್ ಪ್ರಶ್ನೆಪತ್ರಿಕೆ ಲೀಕ್ ಪ್ರಕರಣದಲ್ಲಿ ತನ್ನ ತಪ್ಪನ್ನು ಆರೋಪಿ ಸೌಮ್ಯಾ ಒಪ್ಪಿಕೊಂಡಿದ್ದಾಳೆ.
ಭೂಗೋಳ ಶಾಸ್ತ್ರ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ ತಂಡದಲ್ಲಿದ್ದ ನಾಗರಾಜ್ ಮನೆಗೆ ಆಗಾಗ ಭೇಟಿ ನೀಡುತ್ತಿದ್ದ ಸಂಗತಿಯನ್ನು ತಾನೇ ತನಿಖಾ ಅಧಿಕಾರಿಯ ಮುಂದೆ ಹೇಳಿದ್ದಾರೆ.
ನಾಗರಾಜ್ ಬಳಿ ಇದ್ದ ಬುಕ್ಸ್ ಗಳನ್ನು ಓದಲು ಹೋಗುತ್ತಿದ್ದೆ. ಅವರು ಪ್ರಶ್ನೆ ಪೇಪರ್ ತಯಾರು ಮಾಡುವ ಕಮಿಟಿಯಲ್ಲಿರೋದು ಗೊತ್ತಿತ್ತು ಎಂದಿದ್ದಾಳೆ.
ನಾಗರಾಜ್ ಟೇಬಲ್ ಮೇಲೆ ಪ್ರಶ್ನೆ ಪೇಪರ್ ನ ಎನ್ವಲಪ್ ಇತ್ತು. ನಾನು ಯಾರಿಗೂ ಗೊತ್ತಾಗದ ಹಾಗೆ ಫೋಟೋ ತೆಗೆದುಕೊಂಡು ಬಂದಿದ್ದೆ.
ಮರುದಿನ ಕಾಲೇಜಿನ ಬಳಿ ಫ್ರೊಫೆಸರ್ ತಂಗಿ ಮಗಳು ಕುಸುಮಾಗೆ ಪ್ರಶ್ನೆ ಪತ್ರಿಕೆ ಫೋಟೋ ಕಾಪಿ ಕಳಿಸುವಂತೆ ಹೇಳಿದ್ದೆ. ಆಕೆ ಕೂಡ ಕೆಲವೊಂದು ಪ್ರಶ್ನೆಗಳ ಫೋಟೋ ಕಳುಹಿಸಿದ್ದಳು. ಹೀಗೆ ಪ್ರಶ್ನೆ ಪೇಪರ್ ಲೀಕ್ ಹಿಂದಿನ ಇಂಚಿಂಚು ಮಾಹಿತಿಯನ್ನು ಎಳೆ ಎಳೆಯಾಗಿ ಪೊಲೀಸರ ಮುಂದೆ ಸೌಮ್ಯ ಬಿಚ್ಚಿಟ್ಟಿದ್ದಾಳೆ.
ಸೌಮ್ಯ ಹೇಳಿಕೆ ಹಾಗೂ ಪ್ರೊಫೆಸರ್ ಹೇಳಿಕೆಯನ್ನು ಹೋಲಿಕೆ ಮಾಡಿ ನೋಡಿರುವ ಪೊಲೀಸರು ಸೌಮ್ಯಳೇ ಕೆಲ ಪ್ರಶ್ನೆಗಳನ್ನು ಪ್ರೊಫೆಸರ್ ಗೆ ಕಳಿಸಿರುವ ಬಗ್ಗೆ ಸಹ ತನಿಖೆ ನಡೆಸುತ್ತಿದ್ದಾರೆ.
- ಮಂಡ್ಯ: ಕಾವೇರಿ ನದಿಯಲ್ಲಿ ಮುಳುಗಿ ಬಿ.ಇ ವಿದ್ಯಾರ್ಥಿ ದುರ್ಮರಣ
- ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ 89 ಉದ್ಯೋಗಾವಕಾಶ
- ಕೆನರಾ ಬ್ಯಾಂಕ್ನಲ್ಲಿ 60 ಹುದ್ದೆಗಳಿಗೆ ಅರ್ಜಿ ಆಹ್ವಾನ
- ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ
- ತಿರುಪತಿ ತಿಮ್ಮಪ್ಪನ ಚಿನ್ನ ಕದಿಯಲು ಹೋಗಿ ಸಿಕ್ಕಿಬಿದ್ದ ಟಿಟಿಡಿ ನೌಕರ
More Stories
ಮಂಡ್ಯ: ಕಾವೇರಿ ನದಿಯಲ್ಲಿ ಮುಳುಗಿ ಬಿ.ಇ ವಿದ್ಯಾರ್ಥಿ ದುರ್ಮರಣ
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ 89 ಉದ್ಯೋಗಾವಕಾಶ
ಕೆನರಾ ಬ್ಯಾಂಕ್ನಲ್ಲಿ 60 ಹುದ್ದೆಗಳಿಗೆ ಅರ್ಜಿ ಆಹ್ವಾನ