February 23, 2026

Newsnap Kannada

The World at your finger tips!

pv sindhu1

ಬ್ಯಾಡ್ಮಿಂಟನ್ ಸೆಮಿಫೈನಲ್ಸ್ ನಲ್ಲಿ ಪಿ ವಿ ಸಿಂಧು ಸೋಲು – ಬಂಗಾರದ ಕನಸು ಭಗ್ನ

Spread the love

ಬಹು ನಿರೀಕ್ಷಿತ ಬಂಗಾರದ ಪದಕದ ಕನಸು ಭಗ್ನ ವಾಗಿದೆ.‌ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಟೋಕಿಯೊ ದಲ್ಲಿ ನಡೆದ ಪಂದ್ಯದ ಸೆಮಿ ಫೈನಲ್ ನಲ್ಲಿ ಸೋಲು ಅನುಭವಿಸಿದರು.‌

pv sindhu

ಚೈನೀಸ್ ತೈಪೆಯ ತೈ ಜು ಯಿಂಗ್ ವಿರುದ್ಧ 21-18, 21-12 ನೇರ ಸೆಟ್ ಗಳಲ್ಲಿ ಸಿಂಧು ಸೋಲ ಕಂಡರು.

ಮುಸಾಶಿನೋ ಫಾರೆಸ್ಟ್ ಸ್ಪೋರ್ಟ್ ಪ್ಲಾಜಾದಲ್ಲಿ ನಡೆದ ಪಂದ್ಯದಲ್ಲಿ ವಿಶ್ವದ ವಿಶ್ವದ ನಂಬರ್ 1 ಆಟಗಾರ್ತಿ ತೈ ಜು ಯಿಂಗ್ ಆಕ್ರಮಣಕಾರಿಯಾಗಿ ಆಡಿದರು.

ಮೊದಲ ಸೆಟ್ ನ ಆರಂಭದಲ್ಲಿ ಸಿಂಧು ಮುನ್ನಡೆ ಸಾಧಿಸಿದ್ದರೂ ನಂತರ ತೈ ಜು ಯಿಂಗ್ ಪಂದ್ಯದಲ್ಲಿ ಸಂಪೂರ್ಣ ತನ್ನ ಹಿಡಿತ ಸಾಧಿಸಿದರು.

ಈ ಗೆಲುವಿನೊಂದಿಗೆ ತೈ ಜು ಯಿಂಗ್ ಫೈನಲ್ ಗೆ ಪ್ರವೇಶ ಪಡೆದರು. ಪಿ.ವಿ.ಸಿಂಧು ಅವರು ಕಂಚಿನ ಪದಕಕ್ಕಾಗಿ ಸ್ಪರ್ಧೆ ನಡೆಸಲಿದ್ದಾರೆ.

error: Content is protected !!