ಮಂಡ್ಯ : ರಾಜ್ಯಸಭಾ ಚುನಾವಣೆ ವಿಚಾರದಲ್ಲಿ ಕೈ ಶಾಸಕರಿಗೆ ಜೆಡಿಎಸ್ ನಾಯಕರಿಂದ ಬೆದರಿಕೆ ಆರೋಪ ಹಿನ್ನಲೆಯಲ್ಲಿ ಮಂಡ್ಯದ ಕೈ ಶಾಸಕ ರವಿಕುಮಾರ್ ಗಣಿಗ ವಿರುದ್ದ ಮಾಜಿ ಸಚಿವ ಪುಟ್ಟರಾಜು ವಾಗ್ದಾಳಿ ನಡೆಸಿದ್ದು,ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸುವುದಾಗಿ ಪುಟ್ಟರಾಜು ಹೇಳಿಕೆ ನೀಡಿದ್ದಾರೆ.
ಶಾಸಕ ರವಿಕುಮಾರ್ ವಿರುದ್ದ ಏಕ ವಚನದಲ್ಲಿ ವಾಗ್ದಾಳಿ ನಡೆಸಿದ ಜೆಡಿಎಸ್ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು , ಆತ ಇದ್ದಾರಲ್ಲ ಮಂಡ್ಯ ಶಾಸಕ ಆತನಿಗೆ ಶಾಸಕ ಸ್ಥಾನ ಸಿಕ್ಕಿರೋದು ಪೂರ್ವ ಜನ್ಮದ ಪುಣ್ಯ. ಅದನ್ನ ಹೆಂಗೆ ಉಳಿಸಿಕೊಂಡು ಕೇಮೇ ಮಾಡಬೇಕು ಅದನ್ನ ಮಾಡೋದನ್ನ ಕಲಿಯಬೇಕು ಎಂದು ಕಿಡಿ ಕಾರಿದ್ದಾರೆ.
ಲಘುವಾದ ಮಾತುಗಳು ಆರೋಪಗಳನ್ನು ಮಾಡೋದನ್ನ ಬಿಡಲಿ , ಇಂತಹ ವೈಜ್ಞಾನಿಕ ಜಗತ್ತಿನಲ್ಲಿ ಎಲ್ಲದಕ್ಕೂ ಸಾಕ್ಷಿ ಇರಬೇಕಲ್ಲ . ಆತ ಎಷ್ಟು ಕೋಟಿಗೆ ಮಾನನಷ್ಟ ಎದುರೀಸಬೇಕಾಗುತ್ತದೆ ಅನ್ನುವುದನ್ನ ತೋರಿಸುತ್ತೆನೆ.
ಇನ್ನೆರಡು ದಿನದಲ್ಲಿ ಕಾಂಗ್ರೆಸ್ ಶಾಸಕ ರವಿ ಗಣಿಗ ವಿರುದ್ಧ ಡೆಫರ್ಮೇಶನ್ ಕೇಸ್ ದಾಖಲಿಸ್ತೀನಿ ಎಂದು ವಾಗ್ದಾಳಿ ನಡೆಸಿದ್ದಾರೆ.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ