ಪುಷ್ಕರ್ ಪಾನ್ ಮಸಾಲ ಕಂಪನಿ ಮೇಲೆ GST ಕೌನ್ಸಿಲ್‌ ದಾಳಿ- ರಾಶಿ ರಾಶಿ ನೋಟುಗಳು ಪತ್ತೆ

Team Newsnap
1 Min Read

ಉತ್ತರ ಪ್ರದೇಶದ ಕಾನ್ಪುರದಲ್ಲಿ ಪ್ರಖ್ಯಾತ ಪಾನ್ ಮಸಾಲ ಕಂಪನಿ ಮೇಲೆ ತೆರಿಗೆ ಇಲಾಖೆ & ಜನರಲ್ ಆಫ್ ಜಿಎಸ್​​ಟಿ ಇಂಟೆಲಿಜೆನ್ಸ್ (ಡಿಜಿಜಿಐ) ಅಧಿಕಾರಿಗಳು ದಾಳಿನಡೆಸಿದ್ದಾರೆ

ಈ ವೇಳೆ 150 ಕೋಟಿ ರು ಅಧಿಕ ನಗದು ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಆದಾಯ ತೆರಿಕೆ ಇಲಾಖೆ ಅಧಿಕಾರಿಗಳು ಹಾಗೂ ಜಿಎಸ್​​ಟಿ ಕೌನ್ಸಿಲ್​ ಅಧಿಕಾರಿಗಳ ನೇತೃತ್ವದ ಜಂಟಿ ತಂಡ ಕಂಪನಿ ಮೇಲೆ ಗುರುವಾರ ಬೆಳಗ್ಗೆ ದಾಳಿ ಮಾಡಿದ್ದರು.

ಪುಷ್ಕರ್ ಪಾನ್​ ಮಸಾಲಾ ಕಂಪನಿಯ ಮಾಲೀಕ, ಉದ್ಯಮಿ ಪಿಯೂಷ್ ಜೈನ್ ಮನೆ, ಕಚೇರಿ, ಫ್ಯಾಕ್ಟರಿ ಸೇರಿದಂತೆ ಕನೌಜ್​, ಮುಂಬೈ, ಗುಜರಾತ್​ನ ಮನೆ, ಕಚೇರಿ ಸೇರಿ ವಿವಿಧ ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ಮಾಡಲಾಗಿದೆ.
ಅಧಿಕಾರಿಗಳ ದಾಳಿ ವೇಳೆ ಕಂತೆ ಕಂತೆ ನೋಟು ಪತ್ತೆಯಾಗಿದ್ದು, ಜಿಎಸ್​ಟಿ ತೆರಿಗೆ ಪಾವತಿ ಮಾಡದೆ ಪಾನ್​​ ಮಸಾಲ ತಯಾರು ಮಾಡುತ್ತಿದ್ದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದರು. ಸದ್ಯ GST ಕಾಯ್ದೆ ಸೆಕ್ಷನ್ 69ರ ಅನ್ವಯ ಉದ್ಯಮಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Share This Article
Leave a comment