January 10, 2025

Newsnap Kannada

The World at your finger tips!

kantirava

ಇಂದು ಸಂಜೆಯೇ ಪುನೀತ್ ಅಂತ್ಯ ಸಂಸ್ಕಾರ – ಮಗಳು ಧೃತಿ ಸಂಜೆ ಬೆಂಗಳೂರಿಗೆ ಆಗಮನ

Spread the love

ನಿನ್ನೆ ಹೃದಯಘಾತದಿಂದ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ ಇಂದು ಸಂಜೆಯೇ ಕಂಠೀರವ ಸ್ಟುಡಿಯೋದಲ್ಲಿ ನಡೆಲಿದೆ.

ಪುನೀತ್ ಪುತ್ರಿ ಧೃತಿ ಸಂಜೆ 4.15ಕ್ಕೆ ಬೆಂಗಳೂರಿಗೆ ಆಗಮಿಸುತ್ತಾರೆ. ಹೀಗಾಗಿ ಇಂದೇ ಸಂಜೆಯೇ ಅಂತ್ಯ ಕ್ರಿಯೆ ನೆರವೇರಿಸಲು ನಿಧ೯ರಿಸಲಾಗಿದೆ.

ಅಪ್ಪ – ಅಮ್ಮನ ಸಮಾಧಿ ಪಕ್ಕದಲ್ಲೇ ಪುನೀತ್​ ರಾಜ್​ಕುಮಾರ್ ಅಂತ್ಯಕ್ರಿಯೆಗೆ ಸಕಲ ಸಿದ್ದತೆ ಮಾಡಲಾಗುತ್ತಿದೆ. ಅಂತ್ಯ ಕ್ರಿಯೆ ಯಲ್ಲಿ ರಾಜ್ ಕುಟುಂಬ ಹಾಗೂ ಆಪ್ತರಿಗೆ ಮಾತ್ರ ಭಾಗವಹಿಸಲು ಅವಕಾಶ ಇದೆ.

ಮಧ್ಯಾಹ್ನ 2.30 ರ ವೇಳೆಗೆ ಸಾವ೯ಜನಿಕ ದಶ೯ನವನ್ನು ಅಂತ್ಯಗೊಳಿಸಿ ಕಂಠೀರವ ಸ್ಟೇಡಿಯಂನಿಂದ ಕಂಠೀರವ ಸ್ಟುಡಿಯೋ ತನಕ ಪಾಥಿ೯ವ ಶರೀರದ ಮೆರವಣಿಗೆ ನಡೆಯಲಿದೆ.

ಮೆರವಣಿಗೆಯ ರೂಟ್ ಮ್ಯಾಪ್ ಅನ್ನು ಪೋಲಿಸರು ಸಿದ್ದ ಪಡಿಸಿದ್ದಾರೆ,ಕಂಠೀರವ ಸ್ಟುಡಿಯೋ ಮುಂದೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.ಅಲ್ಲದೇ ಸಾರ್ವಜನಿಕ ಪ್ರವೇಶವಕ್ಕೂ ನಿಷೇಧ ಹೇರಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಪೊಲೀಸರ‌ ನಿಯೋಜನೆ ಮಾಡಲಾಗಿದೆ.

Copyright © All rights reserved Newsnap | Newsever by AF themes.
error: Content is protected !!