December 19, 2024

Newsnap Kannada

The World at your finger tips!

punith chira

ನಟ ಚಿರಂಜೀವಿ ಜೊತೆ ಸ್ಕ್ರೀನ್ ಶೇರ್ ಮಾಡಬೇಕಿದ್ದ ಪುನೀತ್

Spread the love

ಪವರ್​ ಸ್ಟಾರ್​​​​ ಪುನೀತ್​​​​ ತೆಲುಗು ನಟ ಮೆಗಸ್ಟಾರ್​ ಚಿರಂಜೀವಿ ಅವರೊಂದಿಗೆ ಸ್ಕ್ರೀನ್​​ ಶೇರ್​​ ಮಾಡಬೇಕಿತ್ತು ಎಂಬ ಸುದ್ದಿ ಹೊರಬಿದ್ದಿದೆ.

ಚಿರಂಜೀವಿ ಮುಂದಿನ ಭೋಲಾ ಶಂಕರ್ ಸಿನಿಮಾದಲ್ಲಿ ಪುನೀತ್​​​ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳಬೇಕಿತ್ತು.

ಭೋಲಾ ಶಂಕರ್ ಇದು ಅಜಿತ್ ಅಭಿನಯದ ತಮಿಳಿನ ವೇದಾಲಂ ಚಿತ್ರದ ರಿಮೇಕ್.

ಈ ಸಿನಿಮಾದಲ್ಲಿ ಚಿರಂಜೀವಿ ಎಂಟ್ರಿ ಸಾಂಗ್​​ನಲ್ಲಿ ಕುಣಿಯಬೇಕಿತ್ತು. ಆದರೀಗ, ಈ ಕನಸು ನನಸಾಗಿಯೇ ಉಳಿಯೋಯ್ತು ಎಂಬುದು ಚಿತ್ರತಂಡದ ಅಳಲು.

ಪವರ್​​ ಸ್ಟಾರ್​​ ಪುನೀತ್​​ ರಾಜಕುಮಾರ್​​ ಇನ್ನಿಲ್ಲ ಎಂಬ ಸತ್ಯವನ್ನು ಯಾರಿಂದಲೂ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಅಪ್ಪು ಅಂತ್ಯಕ್ರಿಯೆ ಬಳಿಕವೂ ಹಲವು ಗಣ್ಯರು ಡಾ. ಶಿವರಾಜಕುಮಾರ್​​ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದಾರೆ.

ಈಗ ಮೆಗಸ್ಟಾರ್​​ ಚಿರಂಜೀವಿ ಮಗ ರಾಮಚರಣ್​​​​ ತೇಜ್​​ ಕೂಡ ಶಿವಣ್ಣ ಭೇಟಿಯಾಗಿ ಧೈರ್ಯ ತುಂಬಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!