January 8, 2025

Newsnap Kannada

The World at your finger tips!

punith raj 5

ಪುನೀತ್​ ನೇತ್ರದಾನ: ಇಬ್ಬರಲ್ಲ, ನಾಲ್ವರ ಬಾಳಿಗೆ ಬೆಳಕು ನೀಡಿದ ಪವರ್ ಸ್ಟಾರ್

Spread the love

ಸಾವಿನಲ್ಲೂ ಸಾರ್ಥಕತೆ ಮೆರದಿದ್ದ ಕನ್ನಡದ ಪವರ್​​ಸ್ಟಾರ್​ ಪುನೀತ್​ ರಾಜ್​ಕುಮಾರ ಕಣ್ಣುಗಳು ನಾಲ್ಕು ಅಂಧರ ಬಾಳಿಗೆ ಬೆಳಕನ್ನು ನೀಡಿವೆ.

ಪುನೀತ್​ ನಿಧನದ ನಂತರ ದಾನ ಮಾಡಿದ್ದ ಕಣ್ಣುಗಳನ್ನುನಾಲ್ಕು ಜನರಿಗೆ ಜೋಡಿಸಲಾಗಿದೆ ಎಂದು ನಾರಾಯಣ​ ನೇತ್ರಾಲಯ ಮಾಹಿತಿ ನೀಡಿದೆ.
ಸುದ್ದಿಗಾರರ ಜೊತೆ ಮಾತನಾಡಿದ ನೇತ್ರಾಲಯದ ಮುಖ್ಯಸ್ಥ ಡಾ. ಭುಜಂಗ್​ ಶೆಟ್ಟಿ ವೈದ್ಯಕೀಯ ಕ್ಷೇತ್ರದಲ್ಲಿನ ನವೀನ ಆವಿಷ್ಕಾರಗಳನ್ನು ಬಳಸಿಕೊಂಡು ಪುನೀತ್​ ಅವರ ಕಣ್ಣುಗಳನ್ನು ನಾಲ್ವರಿಗೆ ಜೋಡಿಸಲಾಗಿದೆ ಎಂದು ತಿಳಿಸಿದರು.

ಸಹಜವಾಗಿ ಕಣ್ಣುಗಳನ್ನು ಇಬ್ಬರಿಗೆ ಅಳವಡಿಸಬಹುದು ಆದರೆ ಪವರ್​ಸ್ಟಾರ್​ ಕಣ್ಣುಗಳನ್ನು ವಿಶೇಷ ಅಧುನಿಕ ತಂತ್ರಜ್ಞಾನದ ಸಹಕಾರದಿಂದ ಬೇರ್ಪಡಿಸಿ ಒಂದೊಂದು ಭಾಗವನ್ನು ಒಬ್ಬೊಬ್ಬರಿಗೆ ಜೋಡಿಸಲಾಗಿದೆ.

ರಾಜ್ಯದ ನೇತ್ರದಾನ ಇತಿಹಾಸದಲ್ಲಿ ಇದು ಮೊದಲ ಪ್ರಯತ್ನ ಎನ್ನಲಾಗಿದ್ದು, ನಾಲ್ವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಎಲ್ಲರೂ ಆರಾಮಾಗಿದ್ದಾರೆ. ಆ ಮೂಲಕ ಪುನೀತ್​ ನಾಲ್ವರ ಬಾಳಿಗೆ ಬೆಳಕಾಗಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!