ಪವರ್ ಸ್ಟಾರ್ ಅಪ್ಪು ಮರೆಯಾಗಿ ಇಂದಿಗೆ ಒಂದು ತಿಂಗಳು. ದೊಡ್ಮನೆ ಪ್ರೀತಿಯ ಕುಡಿಯನ್ನು ಕಳೆದುಕೊಂಡ ಕರುನಾಡಿನ ರೋಧನೆ ಇನ್ನೂ ನಿಂತಿಲ್ಲ.
ತಿಂಗಳ ಕಾರ್ಯ ಮಾಡಬೇಕಿರುವ ಕಾರಣ ಕಂಠೀರವ ಸ್ಟುಡಿಯೋದಲ್ಲಿ ಸೋಮವಾರ ದೊಡ್ಮನೆ ಕುಟುಂಬ ಪ್ರೀತಿಯ ಅಪ್ಪುವಿನ ತಿಂಗಳ ಪೂಜೆಯನ್ನು ಅಪ್ಪು ಸಮಾಧಿಗೆ ತೆರಳಿ ನೆರವೇರಿಸಿದೆ.
ದೊಡ್ಮನೆ ಕುಟುಂಬಸ್ಥರು ಎಲ್ಲರೂ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಲಿದರು ನಂತರ ಸದಾಶಿವನಗರ ಅಪ್ಪು ನಿವಾಸದಲ್ಲಿ ತಿಂಗಳ ಪೂಜೆ ನಡೆಯಲಿದೆ.
ಅಪ್ಪು ಸಮಾಧಿ ಪೂಜೆಯನ್ನು ಅಶ್ವಿನಿ, ಶಿವಣ್ಣ, ಗೀತಾ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ವಿನಯ್ ರಾಜ್ ಕುಮಾರ್ ಸೇರಿ ಕುಟುಂಬಸ್ಥರು ಪೂಜೆ ಸಲ್ಲಿಸಿದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್, ಪುನೀತ್ ಅಗಲಿ ನಮ್ಮನ್ನು ಅಗಲಿ ಒಂದು ತಿಂಗಳು ಅಯ್ತು. ಒಂದು ತಿಂಗಳ ಪೂಜೆಯನ್ನು ಸಮಾಧಿ ಬಳಿ ಸಲ್ಲಿಸಿದ್ದೇವೆ. ಮನೆಗೆ ಹೋಗಿ ಈಗ ಪುನೀತ್ ಪೋಟೋಗೆ ಕುಟುಂಬದವರು ಸೇರಿ ಪೊಜೆ ಸಲ್ಲಿಸುತ್ತೇವೆ. ಇವತ್ತು ಯಾವುದೇ ಹಬ್ಬದ ರೀತಿಯಲ್ಲಿ ಆಚರಣೆ ಮಾಡುತ್ತಿಲ್ಲ. ಸಾಂಬ್ರಾಣಿಯನ್ನು ಹಾಕಿ ಪೊಜೆ ಸಲ್ಲಿಸಿದ್ದೇವೆ.
ಒಂದು ವರ್ಷದ ಕಾರ್ಯವನ್ನು ಎಲ್ಲರನ್ನು ಕರೆದು ಮಾಡುತ್ತೇವೆ ಎಂದರು.
ಅವನು ಮಾಡುತ್ತಿದ್ದ ಸಾಮಾಜಿಕ ಕೆಲಸಗಳನ್ನು ಮುಂದುವರೆಸುತ್ತೇವೆ. ಅವನೇ ದಾರಿ ತೊರಿಸಬೇಕು. ಏನೇ ಮಾಡಿದ್ರು ಯಾರಿಗೂ ಗೊತ್ತಾಗಬಾರದು. ಕೆಲವೊಂದು ವಿಚಾರ ಅವನ ಜೊತೆ ಮಣ್ಣಾಗ ಬೇಕೆಂದು ಅಂದು ಕೊಂಡಿದ್ದ ಅದ್ಯಾವುದು ಹೇಳಿಲ್ಲ. ಪಿಆರ್‌ಕೆ ಪ್ರಾಜೆಕ್ಟ್ ಗಂಧದಗುಡಿ ವಿಚಾರ. ವೈಲ್ಡ್ ಲೈಫ್, ಕಾಡಿನ ಮಹತ್ವದ ಬಗ್ಗೆ ಒಳ್ಳೆ ಭಾವನೆಯಿಂದ ಮೂಡಿ ಬರುತ್ತಿರುವ ಡಾಕ್ಯೂಮೆಂಟರಿ ಅತಿಶೀಘ್ರದಲ್ಲೇ ಬಿಡುಗಡೆ ಆಗಲಿದೆ ಎಂದರು.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ